ಬರದ ಮಧ್ಯೆ ಬೋಲೆನಾಥನ ಸ್ಮರಣೆಗೆ ಸಿದ್ಧತೆ


Team Udayavani, Feb 24, 2017, 12:28 PM IST

dvg2.jpg

ದಾವಣಗೆರೆ: ಹಬ್ಬಗಳಲ್ಲಿ ವಿಶೇಷ ಸ್ಥಾನ ಹೊಂದಿರುವ ಮಹಾಶಿವರಾತ್ರಿ ಶುಕ್ರವಾರ ದಾವಣಗೆರೆಯ ಮನೆ, ಶಿವನ ದೇವಾಲಯಗಳಲ್ಲಿ ಸಂಭ್ರಮದಿಂದ ನಡೆಯಲಿದೆ. 

ಗೀತಾಂಜಲಿ ಚಿತ್ರಮಂದಿರ ರಸ್ತೆಯಲ್ಲಿರುವ ಶ್ರೀ ಲಿಂಗೇಶ್ವರ ದೇವಸ್ಥಾನ, ಹೊಂಡದ ವೃತ್ತದ ಸಮೀಪದ ಶ್ರೀ ಪಾತಾಳ ಲಿಂಗೇಶ್ವರ ದೇವಸ್ಥಾನ, ವಿನೋಬ ನಗರ 2ನೇ ಮುಖ್ಯ ರಸ್ತೆಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ವಿದ್ಯಾನಗರ ಮುಖ್ಯ ರಸ್ತೆಯಲ್ಲಿರುವ ಶ್ರೀ ಈಶ್ವರ, ಗಣಪತಿ ದೇವಸ್ಥಾನ,

ಬಂಬೂ ಬಜಾರ್‌ ರಸ್ತೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠ, ಹಳೆ ಪಿಬಿ ರಸ್ತೆಯಲ್ಲಿರುವ ಶ್ರೀ ಉಮಾ ಮಹೇಶ್ವರ ದೇವಸ್ಥಾನ, ದೇವರಾಜ ಅರಸು ಬಡಾವಣೆಯಲ್ಲಿರುವ ಶಿವಧ್ಯಾನ ಮಂದಿರ…  ಹೀಗೆ ವಿವಿಧ ದೇವಾಲಯಗಳಲ್ಲಿ ಮಹಾಶಿವರಾತ್ರಿ ಸಂಭ್ರಮಾಚರಣೆ ಭಕ್ತರ ಆಗಮನಕ್ಕೆ ಕಾದಿವೆ. 

ಶುಕ್ರವಾರ ಬೆಳಗ್ಗೆಯಿಂದಲೇ ಶಿವನಿಗೆ ಅತ್ಯಂತ ಪ್ರಿಯವಾಗಿರುವ ರುದ್ರಾಭಿಷೇಕ, ಮಹಾರುದ್ರಾಭಿಷೇಕ… ಒಳಗೊಂಡಂತೆ ಹಲವಾರು ವಿಶೇಷ ಪೂಜಾ ಕೈಂಕರ್ಯ ನಡೆಯಲಿವೆ. ಜಾಗರಣೆಯ ಹಿನ್ನೆಲೆಯಲ್ಲಿ ರಾತ್ರಿಯಿಡೀ ಶಿವನ  ದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿ.ಎಸ್‌. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿರುವ ಬೃಹತ್‌ ಶಿವಲಿಂಗಕ್ಕೆ ವಿಶೇಷ  ಪೂಜೆ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. 

ಬೆಲೆ ಏರಿಕೆಯ ಬಿಸಿ…: ಸತತ ಎರಡನೇ ವರ್ಷದ ಭೀಕರ ಬರ, ಕುಡಿಯುವ ನೀರಿಗೆ ಇನ್ನಿಲ್ಲದ ತೊಂದರೆ ನಡುವೆಯೇ ಮಹಾಶಿವರಾತ್ರಿಗೆ ಸಜ್ಜಾಗಿರುವ ಜನರಿಗೆ ಎಲ್ಲಾ ಹಬ್ಬದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಶಿವರಾತ್ರಿಯ ಹಿನ್ನೆಲೆಯಲ್ಲಿ ಎಲ್ಲಾ ಮನೆಯಲ್ಲಿ ಸಾಮಾನ್ಯವಾಗಿ ತಯಾರಿಸುವ ಮಂಡಕ್ಕಿಯ ಬೆಲೆಯೇ ಬಿಸಿ ಮುಟ್ಟಿಸುವಂತಿದೆ. ಇನ್ನು ಹಬ್ಬಕ್ಕೆ ಬೇಕಾದ ಕಲ್ಲಂಗಡಿ 20 ರೂಪಾಯಿ ಕೆಜಿಯಂತೆ ಸೈಜ್‌ ಮೇಲೆ 100-120 ರೂಪಾಯಿವರೆಗೆ ಇದೆ. 

ಖರ್ಜೂರ ಕೆಜಿಗೆ 40-50, ಸೇಬು 80- 100, ಬಾಳೆಹಣ್ಣು 30-40, ದ್ರಾಕ್ಷಿ 40, ಸಪೋಟ 60, ಕರಬೂಜ 30…ರೂಪಾಯಿ ಎಲ್ಲಾ ಬೆಲೆ ಹೆಚ್ಚಿಗೆ ಇದೆ. ದಾವಣಗೆರೆಯ ಹಳೆ ಪಿಬಿ ರಸ್ತೆ, ಪ್ರವಾಸಿ ಮಂದಿರ ರಸ್ತೆ, ಗಡಿಯಾರ ಕಂಬ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ… ಹೀಗೆ ಎಲ್ಲಾ ಕಡೆ ಜನರು ಹಬ್ಬಕ್ಕೆ ಬೇಕಾದ ಹೂವು- ಹಣ್ಣು ಖರೀದಿ ಮಾಡಿದರು. ಬೆಲೆ ಜಾಸ್ತಿಯಾದರೂ ಹಬ್ಬಕ್ಕೆ ಎಷ್ಟು ಬೇಕೋ ಅಷ್ಟನ್ನು ಖರೀದಿಸುವುದು ಸಾಮಾನ್ಯವಾಗಿತ್ತು. 

ಶಾಂತಿ ಸದ್ಭಾವನಾ ಯಾತ್ರೆ…: ಶಿವರಾತ್ರಿ ಅಂಗವಾಗಿ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ದಾವಣಗೆರೆ ಶಾಖೆಯಿಂದ ಶಾಂತಿ ಸದ್ಭಾವನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ 8ಕ್ಕೆ ಪಿಜೆ ಬಡಾವಣೆಯಲ್ಲಿ ಶಾಖೆಯಲ್ಲಿ ಬಿ.ಕೆ. ಲೀಲಾಜಿ ಧ್ವಜಾರೋಹಣ ನೆರವೇರಿಸುವರು. ಸಂಜೆ 5ಕ್ಕೆ ಮೋತಿ ವೀರಪ್ಪ ಕಾಲೇಜು ಮೈದಾನದಿಂದ ಪ್ರಾರಂಭವಾಗುವ ಶಾಂತಿ ಸದ್ಭಾವನಾ ಯಾತ್ರೆಗೆ ಮಾಜಿ ಮೇಯರ್‌ ಅಶ್ವಿ‌ನಿ ಚಾಲನೆ ನೀಡುವರು.

ಜಿಲ್ಲಾ ಆಸ್ಪತ್ರೆ, ಪಿಜೆ ಬಡಾವಣೆ ಬ್ರಹ್ಮಕುಮಾರಿಸ್‌ ರಸ್ತೆ, ಸೇಂಟ್‌ ಪಾಲ್ಸ್‌ ರಸ್ತೆ, ಚೇತನಾ ರಸ್ತೆ, ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತ, ಪ್ರವಾಸಿ ಮಂದಿರ ರಸ್ತೆ, ಮಹಾತ್ಮಗಾಂಧಿ ವೃತ್ತ, ಅಶೋಕ ಚಿತ್ರಮಂದಿರ, ಕೆ.ಆರ್‌. ರಸ್ತೆ, ಹಗೇದಿಬ್ಬ ವೃತ್ತ, ಹೊಂಡದ ವೃತ್ತದ ಮೂಲಕ ದೇವರಾಜ ಅರಸು ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಮುಕ್ತಾಯವಾಗಲಿದೆ. ಶಾಂತಿ ಸದ್ಭಾವನಾ ಯಾತ್ರೆಯಲ್ಲಿ 12 ದ್ವಾದಶಿ ಜ್ಯೋತಿರ್ಲಿಂಗಗಳು ಒಳಗೊಂಡತೆ 21 ಶಿವಲಿಂಗ, ಸ್ತಬ್ದ ಚಿತ್ರಗಳ ಪ್ರದರ್ಶನ ಇರಲಿದೆ.  

ಟಾಪ್ ನ್ಯೂಸ್

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ; ಸಂಸದ ಕೋಟ ಭೇಟಿ

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ; ಸಂಸದ ಕೋಟ ಭೇಟಿ

BJP-protest

MUDA Scam: ಹೈಕೋರ್ಟ್‌ ತೀರ್ಪು ಬೆನ್ನಲ್ಲೇ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ

Moodbidri: ಎನ್‌ಡಿಎ ಪರೀಕ್ಷೆ; ಆಳ್ವಾಸ್‌ನ 12 ಮಂದಿ ತೇರ್ಗಡೆ

Moodbidri: ಎನ್‌ಡಿಎ ಪರೀಕ್ಷೆ; ಆಳ್ವಾಸ್‌ನ 12 ಮಂದಿ ತೇರ್ಗಡೆ

Harini Amarasuriya sworn in as Sri Lanka’s new Prime Minister

Harini Amarasuriya: ಶ್ರೀಲಂಕಾಕ್ಕೆ 24 ವರ್ಷದ ಬಳಿಕ ಮೊದಲ ಮಹಿಳಾ ಪ್ರಧಾನ ಮಂತ್ರಿ ನೇಮಕ

Anganwadi ಶಿಕ್ಷಕಿಯಾಗಲು ಉರ್ದು ಅರ್ಹತೆ: ನಳಿನ್‌ ಖಂಡನೆ

Anganwadi ಶಿಕ್ಷಕಿಯಾಗಲು ಉರ್ದು ಅರ್ಹತೆ: ನಳಿನ್‌ ಖಂಡನೆ

Assault of 60-year-old mother: Son sentenced to life imprisonment

U.P; 60 ವರ್ಷದ ತಾಯಿಯ ಮೇಲೆಯೇ ಅತ್ಯಾಚಾರ: ಮಗನಿಗೆ ಜೀವಾವಧಿ ಶಿಕ್ಷೆ

shOctober 8ರಿಂದ 14: ಮಂಗಳೂರು ಶ್ರೀ ಶಾರದಾ ಮಹೋತ್ಸವ

October 8ರಿಂದ 14: ಮಂಗಳೂರು ಶ್ರೀ ಶಾರದಾ ಮಹೋತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Basvaraj

CM Aspirant: ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿಯಾಗುವ ಅವಕಾಶವಿದೆ: ಶಾಸಕ ಶಿವಗಂಗಾ

SSM

High Court Order: ನಾವು ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಲ್ಲುತ್ತೇವೆ: ಸಚಿವ ಎಸ್ಸೆಸ್ಸೆಂ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kollur Temple ವ್ಯವಸ್ಥಾಪನ ಸಮಿತಿಗೆ ಡಾ| ಅಭಿಲಾಷ್‌ ಆಯ್ಕೆ

Kollur Temple ವ್ಯವಸ್ಥಾಪನ ಸಮಿತಿಗೆ ಡಾ| ಅಭಿಲಾಷ್‌ ಆಯ್ಕೆ

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ; ಸಂಸದ ಕೋಟ ಭೇಟಿ

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ; ಸಂಸದ ಕೋಟ ಭೇಟಿ

Pulwama attack suspect dies of heart attack

Pulwama ದಾಳಿಯ ಆರೋಪಿ ಹೃದಯಾಘಾತದಿಂದ ಸಾವು

NDA ಪ್ರವೇಶ ಪರೀಕ್ಷೆ: ಎಕ್ಸ್‌ಪರ್ಟ್‌ನ 20 ವಿದ್ಯಾರ್ಥಿಗಳು ತೇರ್ಗಡೆ

NDA ಪ್ರವೇಶ ಪರೀಕ್ಷೆ: ಎಕ್ಸ್‌ಪರ್ಟ್‌ನ 20 ವಿದ್ಯಾರ್ಥಿಗಳು ತೇರ್ಗಡೆ

BJP-protest

MUDA Scam: ಹೈಕೋರ್ಟ್‌ ತೀರ್ಪು ಬೆನ್ನಲ್ಲೇ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.