ರಂಗಮಂದಿರಗಳಿಗೆ ಬರ: ವಿಷಾದ
Team Udayavani, Feb 24, 2017, 12:58 PM IST
ಧಾರವಾಡ: ಕಲೆಯ ತವರೂರು ಧಾರವಾಡದಲ್ಲಿ ರಂಗ ಮಂದಿರಗಳಿಗೆ ಬರವಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜಗುಚಂದ್ರ ಕೂಡ್ಲ ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಾಯೋಜಕತ್ವದಲ್ಲಿ ನಾವೀಕಾ ರಂಗಭೂಮಿ ಸಂಸ್ಥೆ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಯಾರು ಹೊಣೆ ನಾಟಕ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿ ನಾಟಕ ಬರೆಯಲು ನಾಟಕಕಾರರಿದ್ದಾರೆ, ಅಭಿನಯಿಸಲು ಕಲಾವಿದರಿದ್ದಾರೆ, ನೋಡಲು ಪ್ರೇಕ್ಷಕರಿದ್ದಾರೆ, ನಿರ್ಮಾಣ ಮಾಡಲು ಅನೇಕ ಆಸಕ್ತರಿದ್ದಾರೆ, ಸಂಘ-ಸಂಸ್ಥೆಗಳಿವೆ. ಆದರೆ ಸರಿಯಾದ ರಂಗಮಂದಿರಗಳಿಲ್ಲ. ರಂಗ ಮಂದಿರಗಳಿದ್ದರೂ ಕೈಗೆಟುಕುವ ದರಗಳಲ್ಲಿ ಲಭ್ಯವಿಲ್ಲ. ಎಲ್ಲ ರಂಗ ಮಂದಿರಗಳ ಆಡಳಿತ ವರ್ಗದವರು ವ್ಯಾಪಾರ ಮನೋಭಾವ ಹೊಂದಿದ್ದಾರೆ ಎಂದರು.
ಕಲಾಭವನ, ಸೃಜನಾ ರಂಗಮಂದಿರ, ಪಾಟೀಲ ಪುಟ್ಟಪ್ಪ ಸಭಾಭವನ, ಆಲೂರ ವೆಂಕಟರಾವ್ ಭವನ, ಡಾ|ಅಂಬೇಡ್ಕರ ಭವನ, ಕವಿವಿ ಗೋಲ್ಡನ್ ಜುಬಿಲಿ ಭವನ, ಕೃಷಿ ವಿವಿ ಅಡಿಟೋರಿಯಂ ಮುಂತಾದವುಗಳು ಕಲಾವಿದರ ಪಾಲಿಗೆ ಕೈಗೆಟುಕದಂತಾಗಿವೆ ಎಂದರು. ಅತಿಥಿಯಾಗಿದ್ದ ಪ್ರಕಾಶ ಉಡಿಕೇರಿ ಮಾತನಾಡಿ, ರಂಗಮಂದಿರಗಳ ಆಡಳಿತ ಮಂಡಳಿಯಲ್ಲಿ ರಂಗಾಸಕ್ತರು ಇಲ್ಲದೇ ಇರುವುದೇ ಈ ಕೊರತೆಗೆ ಕಾರಣ.
ಆದರೆ ವಿದ್ಯಾವರ್ಧಕ ಸಂಘದ ಬಗ್ಗೆ ಹೇಳುವುದಾದರೆ ನಾವೀಗಾಗಲೇ ರಂಗ ತಜ್ಞರಿಂದ ವರದಿ ಪಡೆದಿದ್ದು ಅದರ ಅನುಷ್ಠಾನ ಪ್ರಗತಿಯಲ್ಲಿದೆ ಎಂದರು.ರಂಗಕರ್ಮಿ ವತ್ಸಲಾ ಕುಲಕರ್ಣಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ|ಲಿಂಗರಾಜ ಅಂಗಡಿ ಮಾತನಾಡಿ, ರಂಗಭೂಮಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದು ಸತ್ಯ ಸಂಗತಿ ಎಂದರು.
ನಾರಾಯಣಾಚಾರಿ ಹೊಸಳ್ಳಿ ಪ್ರಾರ್ಥಿಸಿದರು. ಆರತಿ ದೇವಶಿಖಾಮಣಿಸ್ವಾಗತಿಸಿದರು. ಸೋಮಶೇಖರ ಜಾಡರ ಪ್ರಾಸ್ತಾವಿಕ ಮಾತನಾಡಿದರು. ಮೇಘನಾ ಬ್ಯಾಹಟ್ಟಿ ನಿರೂಪಿಸಿದರು. ಸೋಮಶೇಖರ ಜಾಡರ ರಚಿಸಿದ, ಯುವ ನಿರ್ದೇಶಕಿ ಆರತಿ ದೇವಶಿಖಾಮಣಿ ನಿರ್ದೇಶನದಲ್ಲಿ “ಯಾರು ಹೊಣೆ’ ನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.