“ಗ್ರಾಮೀಣ ಭಾಗದ ಧಾರ್ಮಿಕ ಪರಂಪರೆಯ ಹಣಬಿನ ಹಬ್ಬ’
Team Udayavani, Feb 24, 2017, 1:02 PM IST
ತೆಕ್ಕಟ್ಟೆ: ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆಗಳು ಜಾನಪದ ಶೈಲಿಯಲ್ಲಿ ಯೇ ತಲೆಮಾರಿನಿಂದಲೂ ಪರಂಪರಾನುಗತವಾಗಿ ಸಂಸ್ಕಾರಯುತವಾಗಿ ನಡೆದುಕೊಂಡು ಬಂದಿದ್ದು ಪ್ರಸ್ತುತ ವಿದ್ಯಮಾನದಲ್ಲಿ ಗ್ರಾಮೀಣ ಜನಪದ ವಿಶಿಷ್ಟ ಸಂಸ್ಕೃತಿಗಳು ಆಧುನಿಕ ತಂತ್ರಜ್ಞಾನಕ್ಕೆ ಸಿಲುಕಿ ನಲುಗುತ್ತಿರುವುದು ವಿಪರ್ಯಾಸ.
ಧಾರ್ಮಿಕ ಪರಂಪರೆ
ಕರಾವಳಿ ಕರ್ನಾಟಕದಲ್ಲಿ ಮಹಾಶಿವರಾತ್ರಿಯಂದು ವಿಶಿಷ್ಟವಾಗಿ ಆಚರಿಸುವ ಗ್ರಾಮೀಣ ಧಾರ್ಮಿಕ ಪರಂಪರೆಯಿಂದ ಆಚರಿಸಲ್ಪಡುವ ಸಂಪ್ರದಾಯವೇ ಹಣಬಿನ ಹಬ್ಬ (ದಿಂ ಸಾಲ್ ಹಬ್ಬ) ಹಿಂದೂ ಪುರಾಣ ತಿಳಿಸುವಂತೆ ಶಿವನು ಉರಿಗಣ್ಣಿನಿಂದ ಮನ್ಮಥನನ್ನು ಸುಡುವ ಅದರ ಪ್ರತಿಬಿಂಬಿತವಾಗಿ ಹಣಬು ಸುಡುವುದು ಎಂಬುವುದು ಪಾರಂಪರಿಕೆಯ ನಂಬಿಕೆ.
ಶಿವನಿಗೆ ವಿಶೇಷ ಪೂಜೆ
ಮಹಾಶಿರಾತ್ರಿಯಂದು ಶಿವನ ಆಲಯದಲ್ಲಿ ಶಿವನಿಗೆ ವಿಶೇಷವಾದ ಪೂಜೆಯನ್ನು ಅರ್ಪಿಸುವ ಮೂಲಕ ಗ್ರಾಮೀಣ ಕೃಷಿ ಸಮುದಾಯದ ಹಿರಿಯರು ಸಂಪ್ರದಾಯದಂತೆ ಮೊದಲ ದಿನ ಅಡಿಕೆ ಹಣಬು ಸುಡುವ ಮೂಲಕ ಹಣಬಿನ ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಅನಂತರ ಮರುದಿನ ಊರಿನ ಗ್ರಾಮಸ್ಥರು ಒಗ್ಗೂಡಿಕೊಂಡು ಶಿವನ ಆಲಯದಲ್ಲಿ ವಿಶಿಷ್ಟವಾಗಿ ಹಣಬಿಗೆ ಬೆಂಕಿ ಸ್ಪರ್ಶಿಸುವ ಮೊದಲು ಕುಂದಗನ್ನಡದಲ್ಲಿಯೇ ಶಿವನನ್ನು ಕೊಂಡಾಡುತ್ತ ಅತ್ಯಂತ ಭಕ್ತಿ ಭಾವದಿಂದ ತನ್ಮಯರಾಗುತ್ತಾರೆ.
ಗ್ರಾಮ್ಯ ಸೊಗಡಿನ ಹಣಬಿನ ಹಬ್ಬದ ಕುಂದಗನ್ನಡದ ಪದ್ಯ ಸಾಲು
ದಿಂ ಸಾಲ್ ಎನಿರೋ … ದಿಂಸಾಲ್||
( ಒಂದೇ ದನಿಯಲ್ಲಿ ಎಲ್ಲರೂ ಒಗ್ಗೂಡಿಕೊಂಡು ಹೇಳುವರು )
ನಮ್ಮ ಕಾಮನಿಗೆ ಮಹಾದೊಡ್ಡ ಹಬ್ಬವೋ… ದಿಂ ಸಾಲ್ |
ಇಂದಿವಿràತ್ತೂತ್ತಿಗೆ ಮಹಾ ದೊಡ್ಡ ಹಬ್ಬವೋ…ದಿಂ ಸಾಲ್ |
ನಾಳಿ ಇಷ್ಟೋತ್ತಿಗೆ ಎನ್‌ತಿಂತ್ರಿ ಮಕ್ಕಳೇ…ದಿಂ ಸಾಲ್ |
ನಮ್ಮ ಕಾಮನಿಗೆ ಹೆಣ್ಣು ಕೇಳ್ಳೋಕೋದರೋ …ದಿಂ ಸಾಲ್ |
ಹೆಣ್ಣು ಕೇಳುಕ್ ಹೋದರೋ ಎಲ್ಲಿಗಾಗಿ ಹೋದರೋ…ದಿಂ ಸಾಲ್ |
ಎಲ್ಲಿಗಾಗಿ ಹೋದರೂ ಕೊಡ್‌ಸಿಗಾಗಿ ( ಕೊಡಚಾದ್ರಿ) ಹೋದರೋ…ದಿಂ ಸಾಲ್ |
ಕೊಡಸಿಗಾಗಿ ಹೋದರೋ ಕೊಡಸುವು ತಂದರೋ…ದಿಂ ಸಾಲ್ |
ಈ ಸಾಲು ಕುಂದ ಗನ್ನಡದಲ್ಲಿ ಪದ್ಯಗಳನ್ನು ಹೇಳುತ್ತ ನೂರಾರು ಭಾವುಕ ಭಕ್ತರು ಒಂದೆಡೆ ಸೇರಿಕೊಂಡು ವಿಶಿಷ್ಟವಾಗಿ ಆಚರಿಸುವ ಹಬ್ಬವೇ ಹಣಬಿನ ಹಬ್ಬ (ದಿಂ ಸಾಲ್ ಹಬ್ಬ)
ಶಿವನನ್ನು ಕೊಂಡಾಡುವಿಕೆ
ಅನಂತರ ನಂಬಿಕೆಯಂತೆ ಪರಂಪರೆಯಿಂದ ನಡೆಸಿಕೊಂಡು ಬಂದ ಗ್ರಾಮೀಣ ಸಮುದಾಯ ಮನೆತನದವರು ಶಿವನನ್ನು ಕೊಂಡಾಡುತ್ತ ಇಡೀ ಗ್ರಾಮದ ಅದೆಷ್ಟೋ ಸಹಸ್ರಾರು ಮನೆಗಳಿಗೆ ತೆರಳುವ ಸಂಪ್ರದಾಯ ಇಂದಿಗೂ ಉಳಿದಿದ್ದು ಇದರಿಂದ ಗ್ರಾಮದಲ್ಲಿ ಮಳೆ, ಬೆಳೆ, ಶಾಂತಿ, ಸಮೃದ್ಧಿಗಳು ನೆಲೆಸಲಿ ಎನ್ನುವುದೇ ನಂಬಿಕೆ ಇಂದಿಗೂ ಈ ಸಂಪ್ರದಾಯ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಉಳೂ¤ರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ತೆಕ್ಕಟ್ಟೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕುಂಭಾಶಿ ಮಹಾಲಿಂಗೇಶ್ವರ (ಹರಿಹರ) ದೇವಸ್ಥಾನ, ಬೇಳೂರು ಶ್ರೀಮಹಾಲಿಂಗೇಶ್ವರ, ದೇಲಟ್ಟು ಶ್ರೀ ಮಹಾಲಿಂಗೇಶ್ವರ ಸೇರಿದಂತೆ ಇಂದಿಗೂ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಇಂತಹ ಕುಂದಗನ್ನಡದ ಗ್ರಾಮೀಣ ಜನಪದ ಸಂಸ್ಕೃತಿ ಉಳಿವಿಗೆ ಸಂಬಂಧಪಟ್ಟ ಸಂಸ್ಕೃತಿ ಇಲಾಖೆ ಪ್ರೋತ್ಸಾಹ ನೀಡುವ ಮೂಲಕ ಅದೆಷ್ಟೋ ನಶಿಸುತ್ತಿರುವ ಕುಂದಗನ್ನಡದ ಅತ್ಯಮೂಲ್ಯ ಜನಪದ ಈ ಮೂಲ ಸೊಗಡಿನ ಉಳಿವಿಗೆ ಅಧ್ಯಯನಶೀಲರಾಗಿ ಪ್ರೋತ್ಸಾಹಿಸ ಬೇಕಾದ ಅನಿವಾರ್ಯತೆ ಇದೆ.
– ತೆಂಕಮನೆ ಗೋವಿಂದ ದೇವಾಡಿಗ ತೆಕ್ಕಟ್ಟೆ, ಹಿರಿಯ ಕೃಷಿಕ
– ಟಿ. ಲೋಕೇಶ್ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.