ನಿರಂಕಾರಿ ಸದಸ್ಯರಿಂದ ರೈಲು ನಿಲ್ದಾಣ ಸ್ವಚ್ಛತೆ

Team Udayavani, Feb 24, 2017, 2:31 PM IST

gul1.jpg

ಕಲಬುರಗಿ: ಬಾಬಾ ಹರದೇವ್‌ ಸಿಂಹ ಮಹಾರಾಜರ 63ನೇ ಜನ್ಮದಿನದ ನಿಮಿತ್ತ ಸ್ಥಳೀಯ ಸಂತ ನಿರಂಕಾರಿ ಮಂಡಳದ ಸದಸ್ಯರು ಗುರುವಾರ ನಗರದ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಬೆಳಗ್ಗೆ 8:00 ಗಂಟೆಯಿಂದ 12:00 ಗಂಟೆ ವರೆಗೆ ಒಟ್ಟು 200 ಕಾರ್ಯಕರ್ತರು ರೈಲ್ವೆ ಪ್ಲಾಟ್‌ಫಾರ್ಮ್, ವಿಶ್ರಾಂತಿ ಕೋಣೆ, ಶೌಚಾಲಯಗಳು, ಅಂಗಡಿ, ಮುಂಗಟ್ಟುಗಳ ಸ್ಥಳ, ಹಳಿಗಳು ಸೇರಿದಂತೆ ಒಳಾಂಗಣ, ಹೊರಾಂಗಣ ಮುಂತಾದೆಡೆ ಶ್ರಮದಾನದ ಮೂಲಕ ಇಡೀ ರೈಲು ನಿಲ್ದಾಣ ಸ್ವಚ್ಛಗೊಳಿಸಿದರು. 

ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ನ ನೆಲ ಹಾಸಿಗೆ ಹೊಲಸಾಗಿತ್ತು. ಕಾರ್ಯಕರ್ತರು ನೀರು ಹಾಕಿ ಶುಚಿಗೊಳಿಸಿದರು. ಬಿದ್ದ ಹೊಲಸನ್ನು ತೆಗೆದು ಕಸದ ಬುಟ್ಟಿಗೆ ಹಾಕಿದರು. ಛತ್ತಿನಲ್ಲಿದ್ದ ಧೂಳನ್ನು ಝಾಡಿಸಿದರು. ರೈಲು ಹಳಿಗಳಲ್ಲಿದ್ದ ಕಸ ತೆಗೆದರು. ಪ್ಲಾಟ್‌ಫಾರ್ಮ್ನ್ನು ತೊಳೆದರು. ರೈಲು ನಿಲ್ದಾಣದ ಹೊರ ಅಂಗಳದಲ್ಲಿದ್ದ ಗಿಡ, ಗಂಟಿಗಳನ್ನು ತೆಗೆದು ಪ್ರಯಾಣಿಕರ ಸುಗಮ ಸಂಚಾರಕ್ಕೆ ಹಾಗೂ ಮಲೀನತೆ ನಿವಾರಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಿದರು. 

ಅಭಿಯಾನದ ನೇತೃತ್ವವಹಿಸಿದ್ದ ರಾಜು ಸಾಂಗವೀಕರ್‌ ಮಾತನಾಡಿ, ಸ್ವಚ್ಛತಾ ಕಾರ್ಯವನ್ನು ಕಳೆದ ವರ್ಷ 48 ದೊಡ್ಡ ರೈಲು ನಿಲ್ದಾಣಗಳಲ್ಲಿ ನಿರಂಕಾರಿ ಮಂಡಳಿಯು ಕೈಗೊಂಡಿದ್ದು, ಈಗಾಗಲೇ ಕೇಂದ್ರ ಸರ್ಕಾರವು ಈ ಸಂಘಟನೆಯನ್ನು ಬ್ರ್ಯಾಂಡ್‌ ಅಂಬಾಸಡರ್‌ (ರಾಯಭಾರಿ) ಎಂದು ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸಂಘಟನೆ ವತಿಯಿಂದ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದೇವೆ ಎಂದರು. ಸೀತಾರಾಮ ಚವ್ಹಾಣ, ರವೀಂದ್ರ ವಕಲೆ, ರವೀಂದ್ರ ದುರವೆ, ಪ್ರಭಾಕರ ತವಡೆ ಹಾಗೂ ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. 

ವಾಡಿ: ದೆಹಲಿಯ ಸಂತ ನಿರಂಕಾರಿ ಚಾರಿಟೇಬಲ್‌ ಫೌಂಡೇಶನ್‌ ಹಾಗೂ ಸಂತ ನಿರಂಕಾರಿ ಸೇವಾದಳ ವಾಡಿ ಶಾಖೆ ವತಿಯಿಂದ ಗುರುವಾರ ಪಟ್ಟಣದ ರೈಲು ನಿಲ್ದಾಣ ಸ್ವಚ್ಛತಾ ಕಾರ್ಯ ಶಿಸ್ತಿನಿಂದ ನಡೆಯಿತು. ಅಭಿಯಾನ ಉದ್ದೇಶಿಸಿ ಮಾತನಾಡಿದ ಸಂತ ನಿರಂಕಾರಿ ಮಂಡಲ ಸ್ಥಳೀಯ ಶಾಖೆ ಸಂಯೋಜಕ ಶಿವರಾಮ ಪವಾರ, ದೇಶಾದ್ಯಂತ ಹರಡಿಕೊಂಡಿರುವ ಅಸ್ವಚ್ಛತೆ ತೊಡೆದು ಹಾಕಲು ಕೇಂದ್ರ  ಸರಕಾರ ಸ್ವಚ್ಛ ಭಾರತ ಯೋಜನೆ ರೂಪಿಸಿದೆ.

ರೈಲ್ವೆ ಖಾತೆ ಸಚಿವ ಸುರೇಶ ಪ್ರಭು ಅವರು ಸಂತ ನಿರಂಕಾರಿ ಬಾಬಾ ಚಾರಿಟೇಬಲ್‌ ಫೌಂಡೇಶನ್‌ ಸಂಪರ್ಕಿಸಿ ಬ್ರ್ಯಾಂಡ್‌ ಅಂಬಾಸಿಡರನ್ನಾಗಿ ಘೋಷಿಸಿದ್ದಾರೆ. ಸರಕಾರದ ಕರೆಗೆ ಓಗೊಟ್ಟು ನಾವು ದೇಶದ ಒಟ್ಟು 263 ರೈಲು ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡು ಏಕಕಾಲದಲ್ಲಿ ಸ್ವಚ್ಛತೆಗೆ ಮುಂದಾಗಿದ್ದೇವೆ ಎಂದು ಹೇಳಿದರು. ಸದ್ಗುರು ನಿರಂಕಾರಿ ಬಾಬಾ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ ಅವರೀಗ ನಮ್ಮೊಂದಿಗಿಲ್ಲ.

ದೇಶದೆಲ್ಲೆಡೆ ನಿರಂತರವಾಗಿ ಸತ್ಸಂಗದ ಜಾಗೃತಿಯಲ್ಲಿ ತೊಡಗಿರುವ ಸಂತ ನಿರಂಕಾರಿ ಸೇವಾದಳದ ಲಕ್ಷಾಂತರ ಜನ ಕಾರ್ಯಕರ್ತರು ಅವರ ಚಿಂತನೆಗಳನ್ನು ಹೊತ್ತು ಸಾಗುತ್ತಿದ್ದಾರೆ. ಪರೋಪಕಾರಿ ಜೀವನ, ಶಾಂತಿಪ್ರೇರಿತ ಮನಸ್ಸು ಹಾಗೂ ಪ್ರಗತಿಯ ಲಕ್ಷಣದೊಂದಿಗೆ ಹಜ್ಜೆ ಹಾಕುತ್ತಿದ್ದೇವೆ. ಸ್ವಚ್ಛತೆ ಜಾಗೃತಿ ಜತೆಗೆ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ವಿವರಿಸಿದರು. 

ರೈಲ್ವೆ ಅಧಿಕಾರಿಗಳಾದ ಆರ್‌.ಎಸ್‌. ಶರ್ಮಾ, ಎನ್‌.ವಿ. ಮೋಹನರಾವ, ಜೆ.ಆರ್‌. ಅಂಬೇಕರ, ಎಸ್‌.ಎಸ್‌. ದೊಡ್ಡಮನಿ, ಆರ್‌ಪಿಎಫ್‌ ಸಿಪಿಐ ಅರ್‌.ಎಸ್‌. ಗುರ್ಜಾರ್‌, ಸಂತ ನಿರಂಕಾರಿ ಶಾಖೆ ಮುಖಂಡರಾದ ರಮೇಶ ಕಾರಬಾರಿ, ರೂಪಸಿಂಗ್‌ ರಾಠೊಡ, ಪ್ರಕಾಶ ಪವಾರ, ಮೋಹನ ಕಾರಬಾರಿ, ರಾಮಚಂದ್ರ ರಾಠೊಡ, ತುಕಾರಾಮ ರಾಠೊಡ, ಪಾಂಡು ರಾಠೊಡ, ಮನೋಜಕುಮಾರ ಸೇರಿದಂತೆ ನಿರಂಕಾರಿ ಬಾಬಾ ಸೇವಾದಳದ ನೂರಾರು ಜನ ಯುವಕ, ಯುವತಿಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಪ್ರಭಾತಪೇರಿ ನಡೆದು  ಪ್ರತಿಜ್ಞಾವಿಧಿ ಬೋಧಿಸಲಾಯಿತು.  

ಟಾಪ್ ನ್ಯೂಸ್

3-muddebihala

Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

2-BBK11

BBK11: ಮನೆಯವರ ಸಲಹೆ – ಸಂದೇಶ ಕೇಳಿ ಸ್ಪರ್ಧಿಗಳಿಗೆ ಹೊಸ ಉತ್ಸಾಹ ತುಂಬಿದ ಬಿಗ್ ಬಾಸ್

KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?

KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?

1-horoscope

Horoscope: ಹಿತಶತ್ರುಗಳ ಕಾಟದಿಂದ ಮುಕ್ತಿ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಮಾರ್ಗ ದರ್ಶನ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Intra-Squad Match: ಆಸ್ಟ್ರೇಲಿಯಾ ಕ್ರಿಕೆಟ್‌ ಪ್ರವಾಸ… ಅಭ್ಯಾಸ ಪಂದ್ಯ ಕೈಬಿಟ್ಟ ಭಾರತ

Intra-Squad Match: ಆಸ್ಟ್ರೇಲಿಯಾ ಕ್ರಿಕೆಟ್‌ ಪ್ರವಾಸ… ಅಭ್ಯಾಸ ಪಂದ್ಯ ಕೈಬಿಟ್ಟ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3-muddebihala

Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

2-BBK11

BBK11: ಮನೆಯವರ ಸಲಹೆ – ಸಂದೇಶ ಕೇಳಿ ಸ್ಪರ್ಧಿಗಳಿಗೆ ಹೊಸ ಉತ್ಸಾಹ ತುಂಬಿದ ಬಿಗ್ ಬಾಸ್

KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?

KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?

1-horoscope

Horoscope: ಹಿತಶತ್ರುಗಳ ಕಾಟದಿಂದ ಮುಕ್ತಿ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಮಾರ್ಗ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.