ಭಾರತ ಗಡಿಯೊಳಗೆ ನುಸುಳಿ ಬಂದ ಪಾಕ್ ಮಹಿಳೆ ಯೋಧರ ಗುಂಡಿಗೆ ಬಲಿ
Team Udayavani, Feb 24, 2017, 3:57 PM IST
ಜಮ್ಮು : ಜಮ್ಮು ವಿಭಾಗದ ವಿವಿಧ ವಲಯಗಳಲ್ಲಿ, ಅಂತಾರಾಷ್ಟ್ರೀಯ ಗಡಿ ದಾಟಿ ಭಾರತದೊಳಗೆ ನುಸುಳಲು ಯತ್ನಿಸಿದ ಪಾಕ್ ಮಹಿಳೆಯೊಬ್ಬಳನ್ನು ಬಿಎಸ್ಎಫ್ ಯೋಧರು ಗುಂಡಿಕ್ಕಿ ಸಾಯಿಸಿದ್ದು ಇನ್ನೋರ್ವನನ್ನು ಸೆರೆ ಹಿಡಿದಿರುವುದಾಗಿ ವರದಿಯಾಗಿದೆ.
ಅಖನೂರ್ ತೆಹಶೀಲ್ ನ ಪರ್ಗ್ವಾಲ್ ವಲಯದಲ್ಲಿ ಪಾಕ್ ಮಹಿಳೆಯೊಬ್ಬಳು ಗುರುವಾರ ನಡು ರಾತ್ರಿ ಗಡಿದಾಟಿ ಒಳ ಬಂದಾಗ ಬಿಎಸ್ಎಫ್ ಯೋಧರು ಆಕೆಗೆ ಎಚ್ಚರಿಕೆ ಕೊಟ್ಟು ನಿಲ್ಲುವಂತೆ ಸೂಚಿಸಿದರು.
ಆದರೆ ಅದಕ್ಕೆ ಕಿವಿಗೊಡದೆ ಆಕೆ ಗಡಿ ನುಸುಳಿ ಒಳಬರತೊಡಗಿದಳು. ಒಡನೆಯೇ ಯೋಧರು ಗುಂಡಿಕ್ಕಿ ಆಕೆಯನ್ನು ಸಾಯಿಸಿದರು. ಬಳಿಕ ಪಾಕ್ ರೇಂಜರ್ ಜತೆಗೆ ಮಾತುಕತೆ ನಡೆಸಿದ ಯೋಧರು ಆಕೆಯ ಛಾಯಾಚಿತ್ರವನ್ನು ಅವರಿಗೆ ತೋರಿಸಿ ಶವ ಪಡೆದುಕೊಳ್ಳುವಂತೆ ಕೇಳಿಕೊಂಡರು. ಪಾಕ್ ರೇಂಜರ್ ಗಳು ಮಹಿಳೆಯ ಶವವನ್ನು ಅನಂತರ ಸ್ವೀಕರಿಸಿದರು.
ಕಠುವಾ ವಲಯದಲ್ಲಿ ಗಡಿ ಬೇಲಿ ದಾಟಿ ಒಳಬಂದ ಆಗಂತುಕನನ್ನು ಬಿಎಸ್ಎಫ್ ಯೋಧರು ಸೆರೆ ಹಿಡಿದರು. ಆತನನ್ನು ಈಗ ಪ್ರಶ್ನಿಸಲಾಗುತ್ತಿದೆ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.