ಪ್ರಧಾನಿಯಿಂದ ವಿಶ್ವದ ಅತೀ ದೊಡ್ಡ ಶಿವನ ಮುಖದ ಪ್ರತಿಮೆ ಅನಾವರಣ
Team Udayavani, Feb 24, 2017, 6:12 PM IST
ಕೊಯಂಬತ್ತೂರು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಮಿಳುನಾಡಿನ ಕೊಯಂಬತ್ತೂರಿನ ವೆಳ್ಳಯನಗಿರಿಯಲ್ಲಿನ ಈಶಾ ಯೋಗ ಕೇಂದ್ರದಲ್ಲಿನ ಆದಿಯೋಗಿ ಅಥವಾ ಶಿವನ ಬೃಹತ್ ಮುಖವನ್ನು(112 ಅಡಿ ) ಲೋಕಾರ್ಪಣೆಗೊಳಿಸಿದರು.
ಇದು ಭೂಮಂಡಲದಲ್ಲಿಯೇ ಶಿವನ ಅತ್ಯಂತ ಬೃಹತ್ ಎತ್ತರದ ಮುಖ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ ನಿಂದ ನಿರ್ಮಾಣವಾದ ಈ ಬೃಹತ್ ಶಿವನ ಮುಖವನ್ನು ಸಂಜೆ ಪ್ರಧಾನಿ ಮೋದಿ ಅವರು ಅನಾವರಣಗೊಳಿಸಿದರು. ಯೋಗದ ಮೂಲ ವಿವೇಚನೆಗೆ ಶಿವನೇ ಕಾರಣ. ಆದಿಯೋಗಿ ಪ್ರತಿಮೆ ನಿರ್ಮಾಣ ಮಾಡಲು ಸುಮಾರು 2.5 ವರ್ಷಗಳ ಕಾಲ ಹಿಡಿದಿತ್ತು. ಈ ಬೃಹತ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜನಸ್ತೋಮವೇ ನೆರೆದಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳ ಗಡಿಭಾಗ ಹಾಗೂ ಕೊಯಂಬತ್ತೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಿಗದಿಯಂತೆ 5.45ಕ್ಕೆ ಸೂಲೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಅವರು ಬಂದಿಳಿದಿದ್ದರು. ಬಳಿಕ ಅಲ್ಲಿಂದ ಹೆಲಿಕ್ಯಾಪ್ಟರ್ ನಲ್ಲಿ ಕೊಯಂಬತ್ತೂರಿಗೆ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.