ಗಗನಸಖಿ ಮೈಮುಟ್ಟಿದ್ದ ಆರೋಪಿ ಬಂಧನ
Team Udayavani, Feb 25, 2017, 12:03 PM IST
ಬೆಂಗಳೂರು: ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಸ್ನೇಹಿತೆಯೊಂದಿಗೆ ನಡೆದು ಹೋಗುತ್ತಿದ್ದಾಗ ಗಗನಸಖೀಯೊಬ್ಬರ ಮೈ ಮುಟ್ಟಿ ಅಶ್ಲೀಲವಾಗಿ ವರ್ತಿಸಿದ್ದ ಯುವಕನನ್ನು ಬಾಣಸವಾಡಿ ಪೊಲೀಸರು ಬಂಸಿದ್ದಾರೆ.
ಮಾರುತಿಸೇವಾ ನಗರದ ನಿವಾಸಿ ಪ್ರೇಮ್‌ಕುಮಾರ್ (24) ಬಂತ. ಗಗನಸಖೀ ಬಳಿಯಿದ್ದ ಬ್ಯಾಗ್ ಕಸಿಯಲು ಮುಂದಾಗಿ ಆಕೆ ಅದನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಕೆಳಗೆ ಬಿದ್ದರೂ ಬಿಡದ ಆರೋಪಿ ಬ್ಯಾಗ್ ಕಸಿಯಲು ವಿಫಲ ಯತ್ನ ಮಾಡಿದ್ದ ಎಂದು ಹೇಳಲಾಗಿತ್ತು. ಆದರೆ, ಬ್ಯಾಗ್ ಕಸಿಯುವ ಜತೆಗೆ ಆಕೆಯ ಜತೆ ಅಸಭ್ಯವಾಗಿ ವರ್ತಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗಗನಸಖೀಯಾಗಿರುವ ಯುವತಿ ಫೆ.12ರಂದು ಬಾಣಸವಾಡಿಯ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ಹೋಟೆಲ್‌ನಲ್ಲಿ ಊಟ ಮುಗಿಸಿ ರಾತ್ರಿ 10 ಗಂಟೆ ವೇಳೆಯಲ್ಲಿ ಸ್ನೇಹಿತೆ ಜತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹೆಲ್ಮೆಟ್ ಧರಿಸಿ ವೇಗವಾಗಿ ಬೈಕ್‌ನಲ್ಲಿ ಬಂದ ದುಷ್ಕರ್ಮಿ ಯುವತಿಯ ಬಟ್ಟೆಗೆ ಕೈ ಹಾಕಿ ಎಳೆದಾಡಿದ್ದ. ಈ ಸಂಬಂಧ ಯುವತಿ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಯುವತಿ ನಡೆದುಕೊಂಡು ಹೋಗುತ್ತಿದ್ದರು. ಸಾರ್ವಜನಿಕರು ಓಡಾಡದ್ದಿದ್ದರಿಂದ ಆಕೆಯ ಮೈ ಮುಟ್ಟಿ ಅಶ್ಲೀಲವಾಗಿ ವರ್ತಿಸಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ತನಿಖಾಕಾರಿ ತಿಳಿಸಿದ್ದಾರೆ. ಬಂತ ಆರೋಪಿ ಫ್ರೆಜರ್‌ಟೌನ್‌ನಲ್ಲಿ ಯಮಹಾ ಎಫ್ಝಡ್ ಬೈಕ್ ಕಳವು ಮಾಡಿದ್ದ. ಕಳವು ಮಾಡಿದ್ದ ಬೈಕ್‌ನಲ್ಲಿ ಬಂದಿದ್ದ ಆರೋಪಿ ಕೃತ್ಯವೆಸಗಿದ್ದ.
ಮಾದಕ ವ್ಯಸನಿಯಾಗಿದ್ದ ಆರೋಪಿ ವಿರುದ್ಧ ಕೆ.ಜಿ.ಹಳ್ಳಿ, ಫ್ರೆಜರ್‌ಟೌನ್, ಇಂದಿರಾನಗರ ಮತ್ತು ಬಾಣಸವಾಡಿ ಠಾಣೆಯಲ್ಲಿ ಕಳವು, ದರೋಡೆ ಪ್ರಕರಣಗಳಿವೆ. ನಾಲ್ಕೈದು ತಿಂಗಳ ಹಿಂದೆ ಜೈಲು ಸೇರಿದ್ದ ಆರೋಪಿ ಜೈಲಿನಿಂದ ಹೊರ ಬಂದು ಕೂಡ ಕಳವು ಕೃತ್ಯವೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟೀವಿ ಸುಳಿವು: ಹಳೇ ಕಳ್ಳರು ಕೃತ್ಯವೆಸಗಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಯಿತು. ಆರೋಪಿಯ ವಿಡಿಯೋ ತೋರಿಸಿದಾಗ ದೂರುದಾರ ಯುವತಿ ಆತನ ಸುಳಿವು ನೀಡಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.