ವಿದ್ಯುತ್ ತಂತಿ ಮೇಲೆ ಅಲ್ಯೂಮಿನಿಯಂ ಏಣಿ ಬಿದ್ದು ಯುವಕ ಸಾವು
Team Udayavani, Feb 25, 2017, 1:50 PM IST
ಉಪ್ಪಿನಂಗಡಿ : ತೋಟದಲ್ಲಿ ಅಡಿಕೆ ಕೊಯ್ಯುವ ಸಂದರ್ಭ ಬಳಸಿದ ಅಲ್ಯೂಮಿನಿಯಂ ಏಣಿ ಜಾರಿ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಕಾರ್ಮಿಕ ಮೃತಪಟ್ಟ ಘಟನೆ ಶುಕ್ರವಾರ ಕಣಿಯೂರು ಗ್ರಾಮದ ಮಾರುತಿಪುರದಲ್ಲಿ ಸಂಭವಿಸಿದೆ.
ಸುಮಂತ್ ಕೆ. ವಿ. (17) ಸಾವಿಗೀಡಾದ ಯುವಕ.ಮಾರುತಿಪುರದ ರೈತ ಬಂಧು ಅಕ್ಕಿ ಮಿಲ್ ಒಡೆತನದ ತೋಟದಲ್ಲಿ ಎರಡೂವರೆ ತಿಂಗಳಿಂದ ಕಾರ್ಮಿಕ ನಾಗಿ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದ ಸುಮಂತ್ ಕೆ. ವಿ. ಅವರು ಮೂಲತಃ ಹಾಸನ ಜಿಲ್ಲೆಯ ಬೆಳ್ಳೂರು ಗ್ರಾಮದ ಕುಂಬಾರಳ್ಳಿ ನಿವಾಸಿಯಾಗಿದ್ದು, ಯೋಗೀಶ್ ಅವರ ಪುತ್ರ.
ಸುಮಂತ್ ಶುಕ್ರವಾರ ಸಹೋದ್ಯೋಗಿಯೊಂದಿಗೆ ತೋಟದಿಂದ ಅಡಿಕೆ ಕೀಳಲೆಂದು ಅಲ್ಯೂಮಿನಿಯಂ ಏಣಿಯೊಂದಿಗೆ ತೋಟಕ್ಕೆ ಹೋಗಿದ್ದರು.
ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದಂತೆಯೇ ಅಡಿಕೆ ಮರದಲ್ಲಿ ಆಧಾರವಾಗಿ ನಿಂತಿದ್ದ ಏಣಿಯು ಜಾರಿ ಪಕ್ಕದಲ್ಲೇ ಹಾದು ಹೋಗಿದ್ದ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಬಿತ್ತು.
ಕೂಡಲೇ ವಿದ್ಯುತ್ ಆಘಾತಕ್ಕೆ ಸಿಲುಕಿ ಸ್ಥಳದಲ್ಲೇ ಆತ ಸಾವನ್ನಪ್ಪಿದರು ಎಂದು ಸಂಸ್ಥೆಯ ಮ್ಯಾನೇಜರ್ ದೇವ ರಾಜ್ ಎಚ್.ಆರ್. ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.