ಕುಂಬ್ರ: ರೈತರಿಗೆ ಪರಿಹಾರ ಪೂರ್ವಭಾವಿ ಸಭೆ
Team Udayavani, Feb 25, 2017, 2:10 PM IST
ಕುಂಬ್ರ : ಕಬಕ- ಮಾಡಾವು ವಿದ್ಯುತ್ ಸಂಪರ್ಕದ ತಂತಿ ಅಳವಡಿಸುವಾಗ ಪ್ರದೇಶದ ರೈತರ ಬೆಳೆಗಳಿಗೆ ಪರಿಹಾರವನ್ನು ನೀಡಲು ಅಂದಾಜು ಮಾರ್ಗಸೂಚಿ ತಯಾರಿಯ ಪೂರ್ವಭಾವಿ ಸಭೆ ಕುಂಬ್ರ ರೈತ ಸಭಾ ಭವನದಲ್ಲಿ ರೈತ ಮುಖಂಡರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಕೆಪಿಟಿಸಿಎಲ್ನ ಅಧಿಕಾರಿಗಳಾದ ಸತೀಶ್, ವಿನೋದ್, ಬಸವರಾಜ್ ಪಾಲ್ಗೊಂಡಿದ್ದರು. ರೈತ ಮುಖಂಡ ಶೇಖರ ರೈ ಮಾತನಾಡಿ, ಅಭಿವೃದ್ಧಿಗೆ ವಿರೋಧ ಇಲ್ಲ. ಆದರೆ ರೈತರಿಗೆ ಸೂಕ್ತ ಪರಿಹಾರ ನೀಡದೆ ಕಾಮಗಾರಿ ಪ್ರಾರಂಭಿಸಬಾರದು. ರೈತರು ಶ್ರಮಪಟ್ಟ ದುಡಿಮೆಗೆ ಪರಿಹಾರ ಮೊತ್ತ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಮುಖಂಡ ಶ್ರೀಧರ್ ರೈ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿನೋದ್ ಶೆಟ್ಟಿ ಅರಿಯಡ್ಕ ಉಪಸ್ಥಿತರಿದ್ದರು. ಬೆಳೆಗಳಿಗೆ ನೀಡಲಾಗುವ ವಿವಿಧ ಪರಿಹಾರ ಮೊತ್ತ ತಿಳಿಸಲಾಯಿತು. 100ಕ್ಕೂ ಅಧಿಧಿಕ ರೈತರು ಸಭೆಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.