ಅಡ್ಕಾರು ದೇವಸ್ಥಾನದಲ್ಲಿ ಅಷ್ಟೋತ್ತರ ಮಹಾಯಾಗ
Team Udayavani, Feb 25, 2017, 2:38 PM IST
ಸುಳ್ಯ: ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂದರ್ಭ ಸಾರ್ವಜನಿಕ ಶ್ರೀ ಮಹಾಗಣಪತಿ ಸ್ಕಂದಹವನ ಸಹಿತ ಸುಬ್ರಹ್ಮಣ್ಯ ಅಷ್ಟೋತ್ತರ ಮಹಾಯಾಗವು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನಿರ್ದೇಶನದಲ್ಲಿ ವೇ| ಮೂ| ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ನೆರವೇರಿಸಲಾಯಿತು.
ಬ್ರಹ್ಮಕಲಶೋತ್ಸವ ಸಂದರ್ಭ ಸುಮಾರು 6 ತಿಂಗಳುಗಳಿಂದ ಸೇವಾ ದೀಕ್ಷೆಯನ್ನು ತೊಟ್ಟ ಗ್ರಾಮದ ಸಮಸ್ತ ಭಕ್ತ ಬಂಧುಗಳು ಯಜ್ಞ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಪ್ರತಿನಿತ್ಯವೂ ತಮ್ಮ ತಮ್ಮ ಮನೆಗಳಲ್ಲಿ ಸುಬ್ರಹ್ಮಣ್ಯ ಅಷ್ಟೋತ್ತರದ ಪಠಣ ಮಾಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು , ಅದರ ಸಮಾಪನದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ಗಂಟೆ 8ಕ್ಕೆ ಸಾಮೂಹಿಕ ಪ್ರಾರ್ಥನೆ ಬಳಿಕ ಸ್ವಸ್ತಿ ಪುಣ್ಯಾಹ, ಅಗ್ನಿ ಪ್ರತಿಷ್ಠೆ ನಡೆದು ಮಧ್ಯಾಹ್ನ 12 ಘಂಟೆಗೆ ವಸೂರ್ಧಾರಾ ಪೂರ್ಣಾಹುತಿ ಬಳಿಕ ಮಹಾ ಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.
ಅಪೂರ್ವ ಮಹಾಯಾಗ
ದ.ಕ. ಜಿಲ್ಲೆಯಲ್ಲೇ ಅಪೂರ್ವವಾದ ಸುಳ್ಯ ತಾಲೂಕಿ ನಲ್ಲೇ ವಿಶೇಷವಾದ ಶ್ರೀ ಮಹಾಗಣಪತಿ ಸ್ಕಂದಹವನ ಸಹಿತ ಸುಬ್ರಹ್ಮಣ್ಯ ಅಷ್ಟೋತ್ತರ ಮಹಾಯಾಗವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ವಿಶೇಷವಾಗಿತ್ತು. ಎಲ್ಲರಿಗೂ ಅವರವರ ಸಂಕಲ್ಪಾನುಸಾರ ಪ್ರಾರ್ಥಿಸಿ ಅಕ್ಷತೆಯನ್ನು ಹವನಕ್ಕೆ ಅರ್ಪಣೆ ಮಾಡಲು ಅವಕಾಶ ಮಾಡಲಾಗಿತ್ತು.
ಸಮಿತಿಯ ವತಿಯಿಂದ ಶರತ್ ಅಡ್ಕಾರು ದಂಪತಿ ಕತೃìಗಳಾಗಿ ಸಹಕರಿಸಿದರು. ಅನಂತರ ಮೂರು ಸಾವಿ ರಕ್ಕೂ ಮಿಕ್ಕಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ವ್ಯವಸ್ಥಾಪನ ಸಮಿತಿ, ಜೀಣೊìàದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು ಹಾಗೂ ಊರ ಬೈಲುವಾರು ಸಮಿತಿಯ ಸಮಸ್ತ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.