ಜಾನಪದ ಕ್ರೀಡೆಗಳಿಂದ ದೈಹಿಕ ಉಲ್ಲಾಸ: ಕೌಶಲ್ ಪ್ರಸಾದ್
Team Udayavani, Feb 25, 2017, 2:51 PM IST
ದರ್ಬೆ : ಹಿಂದಿನ ಕಾಲದಲ್ಲಿ ಜಾನಪದ ಕ್ರೀಡೆಗಳು ದೈಹಿಕ ಉಲ್ಲಾಸ ಮತ್ತು ಒಬ್ಬರು ಇನ್ನೊಬ್ಬರ ಜತೆಗೆ ಬೆರೆಯುವ ಉದ್ದೇಶದಿಂದ ನಡೆಯುತ್ತಿತ್ತು ಎಂದು ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ ಆಯೋಜಿಸಿದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ತುಳು ಜಾನಪದ ಸ್ಪರ್ಧೋತ್ಸವ ಫಿಲೋ ಪಂಥೊ -2017 ಇದರ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದಿನ ಕಂಪ್ಯೂಟರ್ ಯುಗದಲ್ಲಿ ಜಾನಪದ ಕ್ರೀಡೆಗಳು ನಶಿಸಿ ಹೋಗುವ ಹಂತಕ್ಕೆ ಬಂದಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಪುರಸಭಾಧ್ಯಕ್ಷ ಪಿ. ಗಣೇಶ್ ರಾವ್ ಮಾತನಾಡಿ, ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆಯನ್ನು ಉಳಿಸಿಕೊಂಡು ಬರುವಲ್ಲಿ ಕೋರ್ಟ್ ಮೆಟ್ಟಲು ಹತ್ತಬೇಕಾಗಿ ಬಂದಿರುವುದು ಖೇದಕರ. ಸ್ಪರ್ಧೆಗಳಲ್ಲಿ ಗೆಲ್ಲುವುದು ಮುಖ್ಯವಾಗಿರದೆ ಭಾಗವಹಿಸುವುದು ಮುಖ್ಯ ಎಂಬುದನ್ನು ಅರಿಯಬೇಕು ಎಂದರು.
ಬದಲಾದ ಕಸುಬು
ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ ಮಾತನಾಡಿ, ಹಿಂದಿನ ಕಾಲದಲ್ಲಿ ಬೇಸಾಯದ ಕೆಲಸ ಮುಗಿಸಿ, ದಣಿವಾರಿಸಿಕೊಳ್ಳುವ ಮತ್ತು ಉತ್ಸಾಹವನ್ನು ಮರು ಪಡೆಯುವ ಉದ್ದೇಶದಿಂದ ಕಂಬಳಗಳನ್ನು ನಡೆಸಲಾಗುತ್ತಿತ್ತು. ಇದೀಗ ಗದ್ದೆ ಬೇಸಾಯ ನಿಂತಿದೆ. ಜನರು ಅಡಿಕೆ, ರಬ್ಬರ್, ಗೇರು ಕೃಷಿಯ ಕಡೆಗೆ ಆಕರ್ಷಿತರಾಗಿದ್ದಾರೆ. ಇಂತಹ ಬದಲಾದ ಕಸುಬಿನಿಂದಾಗಿ ತುಳು ನಾಡಿನ ಸಂಸ್ಕೃತಿಯೇ ನಶಿಸಿ ಹೋಗುವ ಹಂತಕ್ಕೆ ಬಂದಿದೆ ಎಂದು ಹೇಳಿದರು.
ಪರಿಶ್ರಮದಿಂದ ಸಾಧನೆ
ಗೌರವ ಅತಿಥಿಯಾಗಿದ್ದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ನಮ್ಮ ನಡೆ, ನುಡಿ ಮತ್ತು ಆಚಾರ ಯಾವುದೇ ಒಂದು ಧರ್ಮದ ಸ್ವತ್ತು ಅಲ್ಲ. ಅದು ಎಲ್ಲ ಧರ್ಮದಲ್ಲಿಯೂ ಇದೆ. ಶಿಕ್ಷಣ ಸಂಸ್ಥೆಗಳಲ್ಲಿ ಗುರುಗಳ ಆಸಕ್ತಿ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಸೇರಿದರೆ ಅದ್ಭುತವಾದ ಸಾಧನೆಯನ್ನು ಮಾಡಲು ಸಾಧ್ಯವಿದೆ ಎಂದು ಹೇಳಿದರು.
ನೈತಿಕ ಮೌಲ್ಯ
ಸ್ಪರ್ಧೋತ್ಸವದ ಪ್ರಧಾನ ತೀರ್ಪುಗಾರ ರಮೇಶ್ ಉಳಯ ಮಾತನಾಡಿ, ತುಳುನಾಡಿನ ಜಾನಪದ ಸಂಸ್ಕೃತಿ, ಆಚಾರ -ವಿಚಾರಗಳು ವಿಶೇಷವಾದ ನೈತಿಕ ಮೌಲ್ಯಗಳನ್ನು ಒಳಗೊಂಡಿವೆ. ನಾವೆಲ್ಲರೂ ಜತೆಯಾಗಿ ಸೇರಿಕೊಂಡು ತುಳು ಮಣ್ಣಿನ ಪರಿಮಳವನ್ನು ನಾಡಿನಾದ್ಯಂತ ಪಸರಿಸುವ ಪುಣ್ಯದ ಕೆಲಸವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೋನ್ಹ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲ ಪ್ರೊ| ವಿಷ್ಣು ಭಟ್, ಮಾನವಿಕ ಸಂಘದ ಸಂಯೋಜಕ ಪ್ರೊ| ಸುಬೇರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ವಿದ್ಯಾರ್ಥಿ ಸಂಯೋಜಕ ರಾಕೇಶ್ ರಾವ್ ಪಿ.ಜಿ. ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಹಸಂಯೋಜಕಿ ಅಕ್ಷತಾ ಶರ್ಮ ವಿ. ಬಹುಮಾನ ವಿಜೇತರ ವಿವರ ನೀಡಿದರು. ವಿದ್ಯಾರ್ಥಿನಿಯರಾದ ದೀಕ್ಷಿತಾ ಸ್ವಾಗತಿಸಿ, ಲತಾಕ್ಷೀ ವಂದಿಸಿದರು. ಸೌಮ್ಯಾ ಕಾರ್ಯಕ್ರಮ ನಿರ್ವಹಿಸಿದರು.
ಫಲಿತಾಂಶ
ಫಿಲೋ ಪಂಥೊ -2017 ಜಾನಪದ ಸ್ಪಧೋತ್ಸವದಲ್ಲಿ ಪಾಡªನ, ಕಂಬಳ ಬೋಡು/ಬೊಡಿc ಕುರಿತು ತುಳು ಚರ್ಚೆ, ಮುಂಡಾಸು ಕಟ್ಟುವುದು, ದಾರ ರಹಿತ ಹೂಮಾಲೆ ಕಟ್ಟುವುದು, ಸ್ಮರಣ ಶಕ್ತಿ, ಸೋಬಾನೆ, ಜಾನಪದ ಸಮೂಹ ನೃತ್ಯ ಮೊದಲಾದ ಸ್ಪರ್ಧೆಗಳನ್ನು ಸಂಯೋಜಿಸಲಾಗಿತ್ತು. ಸಮಗ್ರ ಪ್ರಶಸ್ತಿಯನ್ನು ಪೆರುವಾಜೆಯ ಡಾ| ಶಿವರಾಮ ಕಾರಂತ ಸ.ಪ್ರ.ದ. ಕಾಲೇಜು ತಂಡ, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಬೆಟ್ಟಂಪಾಡಿ ಸ.ಪ್ರ.ದ. ಕಾಲೇಜು ತಂಡ ಪಡೆದುಕೊಂಡಿತು. ತೃತೀಯ ಸಮಗ್ರ ಪ್ರಶಸ್ತಿಯನ್ನು ಜಿಡೆಕಲ್ಲು ಸ.ಪ್ರ.ದ. ಕಾಲೇಜು ತಂಡ ಪಡೆದುಕೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.