ಗ್ರಾಮ ಸ್ವಚ್ಛಗೊಳಿಸಿ ಶಿವರಾತ್ರಿ ಆಚರಣೆ


Team Udayavani, Feb 25, 2017, 3:02 PM IST

gul2.jpg

ಸೊಲ್ಲಾಪುರ: ಸ್ವಚ್ಛತೆ ಇರುವಲ್ಲಿ ದೇವರ ವಾಸವಿರುತ್ತದೆ. ಸ್ವಚ್ಛತೆಯಿಂದ ಆರೋಗ್ಯ ಹಾಗೂ ಆರೋಗ್ಯದಿಂದ ಸಮೃದ್ಧಿ ಸಾಧ್ಯವಾಗುತ್ತದೆ. ಶಿವರಾತ್ರಿಯ ದಿನದಂದು ಜನರು ದೇವಸ್ಥಾನಗಳಿಗೆ ಹೋಗುತ್ತಾರೆ ಆದರೆ ಶಿವರಾತ್ರಿಯಂದು ಗ್ರಾಮವನ್ನು ಸ್ವಚ್ಛಗೊಳಿಸಿ ಇಡೀ ಗ್ರಾಮವನ್ನೇ ದೇವಸ್ಥಾನವನ್ನಾಗಿ ಮಾಡುವ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ. 

ಸದಲಾಪುರ ಗ್ರಾಮವು ಆದಷ್ಟು ಬೇಗ ನೂರಕ್ಕೆ ನೂರರಷ್ಟು ಬಯಲು ಶೌಚಮುಕ್ತ ಗ್ರಾಮವಾಗಿ ಇತರರಿಗೆ ಆದರ್ಶವಾಗಬೇಕು ಎಂದು ಅಕ್ಕಲಕೋಟ ತಾಲೂಕಿನ ಘಟವಿಕಾಸ ಅಧಿಧಿಕಾರಿ ಉತ್ತಮರಾವ್‌ ವಾಘಮೋಡೆ ಗ್ರಾಮಸ್ಥರಿಗೆ ಕರೆನೀಡಿದ್ದಾರೆ. ತಾಲೂಕಿನ ಸದಲಾಪುರ ಗ್ರಾಮದಲ್ಲಿ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಹಾಗೂ ಶಿವಾ ಸಂಘಟನೆ ಸದಲಾಪುರ ಸಂಯುಕ್ತ ಆಶ್ರಯದಲ್ಲಿ ಗ್ರಾಮಸ್ವಚ್ಛತಾ ಅಭಿಯಾನ ಹಾಗೂ ಸಂತ ಗಾಡಗೆಬಾಬಾ ಜಯಂತಿ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಮಾರಂಭಕ್ಕೂ ಮೊದಲು ಆದರ್ಶ ಕನ್ನಡ ಬಳಗದ ಸದಸ್ಯರು, ಸದಲಾಪುರ ಗ್ರಾಮಸ್ಥರು ಸೇರಿಕೊಂಡು ಇಡೀ ಊರನ್ನು ಗುಡಿಸಿ ಸ್ವಚ್ಛಗೊಳಿಸಿದರು. ಕಟ್ಟಿಕೊಂಡಿದ್ದ ಚರಂಡಿಗಳನ್ನು ಮುಕ್ತಗೊಳಿಸಿದರು. ನಂತರ ನಡೆದ ವೇದಿಕೆಯ ಸಮಾರಂಭದಲ್ಲಿ ಪ್ರಮುಖ ಅತಿಥಿಯಾಗಿ ಆಗಮಿಸಿದ್ದ ಬಸವರಾಜ ತುಳಜಾಪುರೆ ಮಾತನಾಡಿ, ಮುಂದಿನ ಜನ್ಮದ ಚಿಂತೆಯಲ್ಲಿ ಇಂದಿನ ಜನ್ಮವನ್ನು ಹೊಲಸಿನಲ್ಲಿ ಕಳೆಯದೇ ಇಂದೇ ಸ್ವಚ್ಛತೆಗಾಗಿ ಪಣತೊಡಬೇಕು ಎಂದರು. 

ಸಾಹಿತಿ ಗಿರೀಶ ಜಕಾಪುರೆ ಮಾತನಾಡಿ, ಯುವಕರು ಗುಟಕಾ ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ದುಶ್ಚಗಳಿಗೆ ಬಲಿಯಾಗಬಾರದು. ಜನರು ಪ್ಲಾಸ್ಟಿಕ್‌ ಬಳಸಿ, ಅದನ್ನು ತಿಪ್ಪೆಗೆ ಎಸೆದು, ಪ್ಲಾಸ್ಟಿಕ್‌ ಬೆರೆತ ಗೊಬ್ಬರವನ್ನು ಹೊಲಕ್ಕೆ ಹಾಕುತ್ತಿದ್ದಾರೆ. ಇದರಿಂದ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ನಾವು ಸ್ವಚ್ಛತಾ ಅಭಿಯಾನದ ನಿಮಿತ್ತವಾಗಿ ಗುಟಕಾ ಸೇವನೆ ಹಾಗೂ ಪ್ಲಾಸ್ಟಿಕ್‌ ನಿಷೇಧಿಧಿಸುವ ಪ್ರತಿಜ್ಞೆ ಮಾಡಬೇಕು ಎಂದರು. 

ಸದಲಾಪುರ ಗ್ರಾಪಂ. ಅಧ್ಯಕ್ಷ ಯಲ್ಲಪ್ಪಾ ಗೌಳಿ ಅಧ್ಯಕ್ಷತೆ ವಹಿಸಿದ್ದರು. ಗುರುನಿಂಗಪ್ಪಾ ಪಾಟೀಲ ಪ್ರತಿಮಾ ಪೂಜೆ ಸಲ್ಲಿಸಿದರು. ತದನಂತರ ಬಳಗದ ಶರಣಪ್ಪಾ ಫುಲಾರಿ ಅವರು ಕುಸ್ತಿಯಲ್ಲಿ ರಾಜ್ಯ ಚಾಂಪಿಯನ್‌ಳಾಗಿರುವ ಕುಮಾರಿ ಧರತಿ ಬನಸೋಡೆ ಹಾಗೂ ಓಟದಲ್ಲಿ ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕ ಪಡೆದ ರೂಪಾಲಿ ಭಜೆ ಅವರನ್ನು ಆದರ್ಶ ಬಳಗದ ವತಿಯಿಂದ ಗೌರವಿಸಿದರು.

ಬಸವರಾಜ ಧನಶೆಟ್ಟಿ ಅವರು ಗ್ರಾಮದಲ್ಲಿ ಶೌಚಾಲಯವನ್ನು ಕಟ್ಟಿ ಅವನ್ನು ಬಳಸುತ್ತಿರುವ ಮೂರು ಜನ ಗ್ರಾಮಸ್ಥರನ್ನು ಸನ್ಮಾನಿಸಿದರು. ಬಳಗದ ಸದಸ್ಯರಾದ ವಿದ್ಯಾಧರ ಗುರವ ಪ್ರಸ್ತಾವನೆ ಮಾಡಿದರು. ಸಂತೋಷ ಪರೀಟ ಸ್ವಾಗತಿಸಿದರು. ಗ್ರಾಮಸೇವಕ ಎಸ್‌. ಆರ್‌. ಜಕ್ಕಿಕೋರೆ ಅನುಮೋದಿಸಿದರು. ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ ವಂದಿಸಿದರು. ಧೂಳಪ್ಪಾ ಭಜೆ ನಿರೂಪಿಸಿದರು.  

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.