ಕೆಂಪು ಕಾಲಿನ ಬಿಳಿ ಕೊಕ್ಕರೆ
Team Udayavani, Feb 25, 2017, 3:13 PM IST
ಇದನ್ನು ಹಂಸ ಕೊಕ್ಕರೆ ಎನ್ನುತ್ತಾರೆ. ಮೈ ಹಂಸದರೆಕ್ಕೆಯಂತೆ ಇದೆ. Geater Flamingo
(PhoenicopterusRuber) RM Vulture + =ರೆಕ್ಕೆ ಬರ್ಪದ ಹೊಳೆ ಬಿಳಿ ಬಣ್ಣ ಇದ್ದು ರೆಕ್ಕೆ ಪಾರ್ಶ್ವದಲ್ಲಿ ಕೆಂಪು ಬಣ್ಣ ಅದರ ತುದಿಯಲ್ಲಿ ಕಪ್ಪು ಅಂಚು ಇರುವುದು ವಿಶೇಷ. ಹೊಳೆವ ಬಿಳಿಬಣ್ಣದ ಕೊಕ್ಕರೆ. ಕಾಲು ಚುಂಚು ಗುಲಾಬಿ ಬಣ್ಣ ಇದೆ. ಚುಂಚಿನ ತುದಿ ಬಾಗಿದ್ದು ತುದಿಯ ಅಂಚು ಕಪ್ಪಾಗಿದೆ. ಕುತ್ತಿಗೆ ಮಧ್ಯದಲ್ಲಿ ಮುರಿದಂತೆ ಬಾಗಿದೆ. ಇದು ಚಿಕ್ಕ ಬೆಂಕಿ ಕಾಂತಿಯ ಗುಲಾಬಿ ಬಣ್ಣದ ಚಿಕ್ಕಕೊಕ್ಕರೆಗಿಂತದೊಡ್ಡದಿದೆ.
ಇಂತ ಜಾತಿಯ ಕೊಕ್ಕರೆಗಳಲ್ಲಿಯೇ ಇದು ಎತ್ತರ ಇರುವುದರಿಂದ ದೊಡ್ಡ ಪ್ಲೆಮಿಂಗೋ ಎಂದು ಕರೆಯಲಾಗಿದೆ. ಇದರ ದೇಹ ಹಂಸವನ್ನು ಹೋಲುವುದು. ಕಾಲು, ಉದ್ದಕುತ್ತಿಗೆ ಕೊಕ್ಕರೆಯ ನೆನಪು ಮಾಡುತ್ತಿದೆ. ಆದರೆ ಕೊಕ್ಕರೆಗಳಿಗಿಂತ ಭಿನ್ನವಾಗಿ ಇದರ ಚುಂಚಿದೆ. ಚಿಕ್ಕದಾದರೂ ಬಾಗಿ ಭರ್ಚಿ ಹೋಲುವ ಚುಂಚು. ಇದು ಇದಕ್ಕೆ ಸದಾ ಕೆಸರಿನ ನೀರನ್ನು ಜಾಲಾಡಿ ಚಿಕ್ಕ ಹುಳ, ಜಲಸಸ್ಯ, ಜಲಸಸ್ಯಗಳ ಬೀಜ, ಮೃಧ್ವಂಗಿಗಳು, ನೀರಿನ ಹುಳ ತಿನ್ನಲು ಅನುಕೂಲವಾಗಿದೆ. ಚಿಕ್ಕ ಪ್ಲೆಮಿಂಗೋದಂತೆ ಇದಕ್ಕೂ ಸ್ಪಂಜಿನಂತಿರುವ ನಾಲಿಗೆ ಇರುವುದು ಇದರ ವೈಷ್ಟ್ಯ. ಈ ಕೊಕ್ಕರೆಗೆ ಇದರಿಂದ ಏನು ಉಪಯೋಗ?ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಇದರ ಎತ್ತರ 110 ಸೆಂ.ಮೀ. ನಿಂದ 150 ಸೆಂ.ಮೀ. ಅತಿದೊಡ್ಡ ಪ್ಲೇಮಿಂಗೋ 180 ಸೆಂ.ಮೀ ಇರುತ್ತದೆ. ಇದು ಆಸ್ಟ್ರೇಲಿಯಾದಲ್ಲಿ ಸಿಕ್ಕಿದೆ. ಇದರ ಭಾರ 4.5 ಕೆ.ಜಿ. ಇತ್ತು. ಚಿಕ್ಕಕಾಲಿದ್ದು ಕಾಲಿನಲ್ಲಿ ಬಾತುಗಳಿಗಿದ್ದಂತೆ ಜಾಲಪಾದವಿದೆ. ಕಂದುಬಣ್ಣದ ಚಿಕ್ಕ ಉಗುರು ಇದೆ. ನೀರಿನಲ್ಲಿ ತೇಲಿ ಹಾರುವಾಗ ನೀರಿನ ಮೇಲೆ ನಡೆದಾಡುತ್ತಿರುವಂತೆ ಭಾಸವಾಗುತ್ತದೆ. ಇದು ಹಾರುವಾಗ ಇದರ ರೆಕ್ಕೆ ಅಡಿ ಇರುವ ಬಿಳಿ, ಗುಲಾಬಿ ಹಾಗೂ ಅಂಚಿನಲ್ಲಿ ಕಪ್ಪು ಬಣ್ಣ ಸ್ಪಷ್ಟವಾಗಿ ಕಾಣುತ್ತದೆ. ಅತಿ ಉದ್ದ ಕಾಲು ಮತ್ತು ಇಂಗ್ಲೀಷ್ ಎಸ್. ಅಕ್ಷರ ತಿರುಗು ಮುರುಗಾಗಿ ಇದ್ದಂತೆ ತೋರುತ್ತದೆ. ಇದು ಹಾರುವಾಗ ಉದ್ದ ಕಾಲನ್ನು ಹಿಂದೆಚಾಚಿ, ಕುತ್ತಿಗೆಯನ್ನು ಮುಂದೆ ಚಾಚಿ ಗುಂಪಾಗಿ ಹಾರುವುದು.
ಇದು ಸಂಘ ಜೀವಿ. ಗುಂಪಾಗಿ ಇಂಗ್ಲೀಷಿನ ಅಕ್ಷರದಂತೆ ಹಾರುತ್ತವೆ. ಇವು ಆಹಾರ ಮತ್ತು ಸುರಕ್ಷತೆ ಸಲುವಾಗಿ ಬಹು ದೂರ ವಲಸೆ ಹೋಗುತ್ತವೆ. ಇವು ತಿನ್ನುವ ಆಹಾರದಲ್ಲಿರುವ ಪಿಗೆ¾ಂಟ ಅಂದರೆ ಬಣ್ಣ ಆಧರಿಸಿ ಇವುಗಳ ರೆಕ್ಕೆ ಕೆಂಪು, ಗುಲಾಬಿ, ಬಿಳಿ ಆಗುತ್ತವೆ ಎನ್ನುವ ಅಭಿಪ್ರಾಯವಿದೆ. ಕೋರ್ಪಚೀಲದಲ್ಲಿ ಹಾಲಿನಂತಹ ದ್ರವ ಸೃಜಿಸುವ ಕೆಲವೇ ಪಕ್ಷಿಗಳಲ್ಲಿ ಇದೂ ಒಂದು. ಫ್ಲೆಮಿಂಗೋ ಮತ್ತು ಪಾರಿವಾಳಗಳಲ್ಲಿ ಮಾತ್ರ ಈ ಹಾಲು ತಯಾರಾಗುವಗ್ರಂಥಿ ಕಾಣಬಹುದು. ಇವುಗಳ ಆಹಾರ ಇರುನೆಲೆಗಳಿಗಿಂತ ದೂರ ಇರುವುದರಿಂದ ಮರಿಗಳಿಗೆ ಆಹಾರ ಸಂಗ್ರಹಿಸಿ, ಈ ಕಾರ್ಪ ಹಾಲಿನಲ್ಲಿರುವ ವಿಶೇಷ ಪೌಷ್ಟಿಕಾಂಶ ಮತ್ತು ರೋಗ ಪ್ರತಿರೋಧ ಗುಣಗಳಿರುವ ದ್ರವ ಸೇರಿಸಿ ಮರಿಗಳಿಗೆ ಇವು ಉಣಿಸುತ್ತವೆ.
ಇಂತಹ ಭಿನ್ನ ಅಂಶದ ಔಷಧವಿರುವ ಈ ಪಕ್ಷಿಗಳು ಮಾನವರಿಗೆ ಪ್ರಕೃತಿ ನೀಡಿದ ಕೊಡುಗೆ ಅಂದರೆ ತಪ್ಪಾಗಲಾರದು. ಅಮೆರಿಕಾದ ಫ್ಲಿಮಿಂಗೋ ಹಾಗೂ ಚೀಲಿಯನ್ ಫ್ಲಿಮಿಂಗೋದಲ್ಲಿ ತುಂಬಾ ಹೋಲಿಕೆ ಇದೆ. ಆಫ್ರಿಕಾ, ಏಷಿಯಾದ ಮಧ್ಯಭಾಗ, ಭಾರತ, ಸುತ್ತಲಿನ ನಡುಗಡ್ಡೆಗಳಲ್ಲಿ ಇವು ಇವೆ. ಬಾಂಗ್ಲಾದೇಶ, ಪಾಕಿಸ್ಥಾನ, ಶ್ರೀಲಂಕಾ, ಸ್ಪೇನ್, ಗ್ರೀಸ್ ಇಟಲಿಗಳಲ್ಲೂ ಇದೆ. 88 ವರ್ಷದಷ್ಟು ದೀರ್ಘಾವಧಿ ಬದುಕಿದ ಫ್ಲಿಮಿಂಗೋ ಇದೆ. ಸಾಮಾನ್ಯವಾಗಿಇದು ಸುಮಾರು 60 ವರ್ಷ ಬದುತ್ತವೆ ಎಂದು ದಾಖಲೆ ಸಿಕ್ಕಿದೆ. ಸಮುದ್ರತೀರ, ಗಜನಿ, ಕೆಸರು ತುಂಬಿದ ಸರೋವರ, ಕೆಸರು ತುಂಬಿದ ಪ್ರದೇಶದಲ್ಲಿ ಮೊಟ್ಟೆಇಡುತ್ತವೆ. ನೂರಾರು ಹಕ್ಕಿಗಳು ಸಮೀಪದಲ್ಲಿಯೇ ಇಂತಹ ಮಣ್ಣಿನ ದಿಬ್ಬ ನಿರ್ಮಿಸುವುದು ಇದರ ವೈಶಿಷ್ಟ್ಯ. ಗಂಡು ಹೆಣ್ಣು ಸೇರಿ ಮರಿಗಳ ರಕ್ಷಣೆ, ಕೊರ್ಪ ಹಾಲು ಕುಡಿಸುವುದು ಹೀಗೆ ಪಾಲನೆ ಮಾಡುತ್ತವೆ. ಮರಿಗಳು ಬೆಳೆಯಲು ಸುಮಾರು 32 ದಿನಗಳು ಬೇಕು. ಕೊಕ್ಕರೆ ಸ್ಪೂನ್ ಬಿಲ್, ಸಣ್ಣ ಗುಲಾಬಿ ಕೊಕ್ಕರೆಗಳ ಸಂಗಡ ಸಹ ಇವು ಇರುವವು. ಬ್ಯಾಕ್ಟೀರಿಯಾ, ನೀರಿನ ಪೊಲ್ಯುಶನ್ ಇವು ಫ್ಲಿಮಿಂಗೋಗಳಿಗೆ ಹಾನಿ ಮಾಡುತ್ತಿವೆ. ಇದರಿಂದ ಸಂತತಿ ನಾಶವಾಗುತ್ತಿದೆ.
ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.