ಒಂದೂವರೆ ತಿಂಗಳ ಬಳಿಕ ಷರತ್ತಿನೊಂದಿಗೆ ಮಂತ್ರಿಮಾಲ್ ಪುನಾರಂಭ
Team Udayavani, Feb 25, 2017, 8:02 PM IST
ಬೆಂಗಳೂರು: ಕಳೆದ ತಿಂಗಳು ಗೋಡೆ ಕುಸಿದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಮಂತ್ರಿಮಾಲ್ ಪುನಾರಂಭಕ್ಕೆ ಬಿಬಿಎಂಪಿ ಶನಿವಾರ ಷರತ್ತುಬದ್ಧ ಅನುಮತಿ ನೀಡಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಜನವರಿ 16ರಂದು ಮಂತ್ರಿಮಾಲ್ ಗೋಡೆ ಕುಸಿದು ಇಬ್ಬರು ಗಾಯಗೊಂಡಿದ್ದರು. ಇದರಿಂದಾಗಿ ಮಂತ್ರಿಮಾಲ್ ಸುರಕ್ಷತೆಯ ಪರಿಶೀಲನೆಗಾಗಿ ಮಂತ್ರಿಮಾಲ್ ಅನ್ನು ಮುಚ್ಚಲಾಗಿತ್ತು. ಇದೀಗ ಮಂತ್ರಿಮಾಲ್ ಪುನಾರಂಭಕ್ಕೆ ಬಿಬಿಎಂಪಿ ಇಂಜಿನಿಯರ್ ಅಕ್ಯುಪೇಷನ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ 12 ಷರತ್ತು ವಿಧಿಸಿ ಮಂತ್ರಿಮಾಲ್ ಪುನಾರಂಭಕ್ಕೆ ಅನುಮತಿ ನೀಡಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಮಂತ್ರಿಮಾಲ್ ಪುನಾರಂಭಕ್ಕೆ ಆದೇಶ ನೀಡಿದ್ದಾರೆ. ಕಟ್ಟಡ ನಿರ್ವಹಣೆ ಬಗ್ಗೆ ಪ್ರತಿವರ್ಷ ವರದಿ ನೀಡಬೇಕು, ಗೋಡೆ ದುರಸ್ತಿ ಮಾಡಬೇಕು, ಅಗ್ನಿಶಾಮಕ ಯಂತ್ರ ಅಳವಡಿಸಬೇಕು ಎಂಬುದು ಸೇರಿದಂತೆ 12 ಷರತ್ತುಗಳನ್ನು ಬಿಬಿಎಂಪಿ ವಿಧಿಸಿದೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.