ಹೆಚ್ಚಾದ ವಿದ್ಯುತ್ ಬೇಡಿಕೆ
Team Udayavani, Feb 26, 2017, 3:50 AM IST
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಬೇಸಗೆ ಆರಂಭಕ್ಕೂ ಮುನ್ನ ಇಂಧನ ಇಲಾಖೆಗೆ “ವಿದ್ಯುತ್ ಬೇಡಿಕೆ ಬಿಸಿ’ ತಟ್ಟಲು ಶುರುವಾಗಿದೆ.
ಕೇವಲ ಒಂದೇ ವಾರದ ಅಂತರದಲ್ಲಿ ವಿದ್ಯುತ್ ಬೇಡಿಕೆ 10ರಿಂದ 15 ಮಿಲಿಯನ್ ಯೂನಿಟ್‌ನಷ್ಟು ಏರಿಕೆಯಾಗಿದ್ದು, ಇದು ದಾಖಲೆ ಪ್ರಮಾಣದ ವಿದ್ಯುತ್ ಬಳಕೆಯಾಗಿದೆ. ಈ ಮೂಲಕ ಮುಂಬರುವ ದಿನಗಳು ಇನ್ನಷ್ಟು ಭೀಕರ ಆಗಿರಲಿವೆ ಎಂಬ ಮುನ್ಸೂಚನೆ ಕಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬೇಸಗೆ ನಿಭಾಯಿಸು ವುದು ಇಂಧನ ಇಲಾಖೆಗೆ ಸವಾಲಾಗಿದೆ.
ಕಳೆದ ಮೂರು ದಿನಗಳಿಂದ ವಿದ್ಯುತ್ ಬೇಡಿಕೆ 217ರಿಂದ 221 ಮಿಲಿಯನ್ ಯೂ. ಆಸುಪಾಸು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ 204ರಿಂದ 205 ಮಿ.ಯೂ. ಇತ್ತು. ಅಷ್ಟೇ ಅಲ್ಲ, ಕಳೆದ ವಾರದ ಅಂತ್ಯದವರೆಗೂ 207ರಿಂದ 208 ಮಿ.ಯೂ.ಗೆ ಸೀಮಿತವಾಗಿತ್ತು. ಆದರೆ, ಶುಕ್ರವಾರ ಸಂಜೆ ಬೇಡಿಕೆಯು 13 ಮಿ.ಯೂ. ಹೆಚ್ಚಳವಾಗಿದೆ. ದಿಢೀರ್ ವಿದ್ಯುತ್ ಬೇಡಿಕೆ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿದೆ.
ಹೆಚ್ಚಿದ ತಾಪಮಾನ; ನಿರಂತರ ಓಡುತ್ತಿರುವ ಎಸಿ-ಕೂಲರ್: ಅಷ್ಟಕ್ಕೂ ಬರದ ಹಿನ್ನೆಲೆಯಲ್ಲಿ ಈ ಸಲ ಬೇಸಗೆ ಬೆಳೆಗಳನ್ನೂ ರೈತರು ಬೆಳೆಯುತ್ತಿಲ್ಲ. ಹಾಗಾಗಿ, ಕೃಷಿ ಪಂಪ್‌ಸೆಟ್ ಬಳಕೆ ಕೂಡ ಕಡಿಮೆ. ಆದಾಗ್ಯೂ ವಿದ್ಯುತ್ ಬೇಡಿಕೆ ಶೇ. 5-6ರಷ್ಟು ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಹವಾನಿಯಂತ್ರಿತ ಯಂತ್ರಗಳು, ಕೂಲರ್‌ಗಳ ಅವಲಂಬನೆಯೂ ಅಧಿಕವಾಗಿದೆ. ಪರಿಣಾಮ ಕಳೆದ ಒಂದು ವಾರದ ಅಂತರದಲ್ಲಾದ ವಿದ್ಯುತ್ ಬೇಡಿಕೆ ವ್ಯತ್ಯಾಸದಲ್ಲಿ ನಗರದ ಪಾಲು ಪ್ರಮುಖವಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ದ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲೇ ಒಂದು ವಾರದಿಂದ ವಿದ್ಯುತ್ ಬೇಡಿಕೆಯಲ್ಲಿ 200ರಿಂದ 250 ಮೆ.ವಾ. ಹೆಚ್ಚಳವಾಗಿದೆ. ನಿತ್ಯ ಹಗಲು 2,700 ಮೆ.ವ್ಯಾ. ಇದ್ದು, ರಾತ್ರಿ ವೇಳೆ 1,700 ಮೆ.ವ್ಯಾ. ಬೇಡಿಕೆ ಇದೆ. ನಗರದಲ್ಲಿ ಉಷ್ಣಾಂಶ ಜಾಸ್ತಿಯಾಗಿರುವುದರಿಂದ ಎಸಿಗಳ ಬಳಕೆ ಹೆಚ್ಚಿರುವುದು ಇದಕ್ಕೆ ಕಾರಣ. ಸಾಮಾನ್ಯ ದಿನಗಳಲ್ಲಿ ಇದರ ಪ್ರಮಾಣ 2,300ರಿಂದ 2,500 ಮೆ.ವ್ಯಾ. ಇತ್ತು ಎಂದು ಬೆಸ್ಕಾಂ (ಬಿಎಂಎಝಡ್) ಮುಖ್ಯ ಎಂಜಿನಿಯರ್ ಬಿ.ಕೆ. ಉದಯಕುಮಾರ್ ತಿಳಿಸುತ್ತಾರೆ.
ಬರದ ಮಧ್ಯೆಯೂ ಆಸರೆಯಾಗುತ್ತಿರುವ ಜಲಾಶಯಗಳು!: ಈ ನಡುವೆ ರಾಜ್ಯದ ಜಲಾ ಶಯಗಳೂ ಬರಿದಾಗಿವೆ. ಕೂಡ್ಲಿಗಿ ಉಷ್ಣ ವಿದ್ಯುತ್ ಸ್ಥಾವರ, ಯರಮರಸ್‌ನಿಂದ ಈಗಾಗಲೇ ಬರ ಬೇಕಿದ್ದ ವಿದ್ಯುತ್ ಇನ್ನೂ ಜಾಲಕ್ಕೆ ಸೇರ್ಪಡೆ ಯಾಗಿಲ್ಲ. ಇದರಿಂದ ಬೇಡಿಕೆ ನಿಭಾಯಿಸುವುದು ಮತ್ತಷ್ಟು ಸಮಸ್ಯೆಯಾಗಲಿದೆ. ಆದರೆ, ಮಳೆ ಕೈಕೊಟ್ಟಿದ್ದರಿಂದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೇಸಗೆಗಾಗಿಯೇ ಜಲವಿದ್ಯುತ್ ಅನ್ನು ಮೀಸಲಿಡಲಾಗಿತ್ತು. ಜಲ ವಿದ್ಯುತ್‌ನಲ್ಲಿ ಸಿಂಹಪಾಲು ಹೊಂದಿರುವ ಶರಾವತಿ ವಿದ್ಯುದಾಗಾರದಿಂದ ನಿತ್ಯ 17 ಮಿ.ಯೂ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಶನಿ ವಾರಕ್ಕೆ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ 1,777.50 ಅಡಿ ಇದೆ. ಇದೇ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿದರೂ ಇನ್ನೂ 75 ದಿನಗಳಿಗೆ ಸಾಕಾಗುತ್ತದೆ. ಅದೇ ರೀತಿ, ವರಾಹಿ, ಗೇರುಸೊಪ್ಪ, ಆಲಮಟ್ಟಿ, ಮುನಿರಾಬಾದ್, ಶಿವನಸಮುದ್ರ, ಸೂಪಾ, ಕೊಡಸಳ್ಳಿ, ಮಹಾತ್ಮಗಾಂಧಿ ವಿದ್ಯುತ್ ಘಟಕ, ಲಿಂಗನಮಕ್ಕಿ ಜಲ ವಿದ್ಯುತ್ ಉತ್ಪಾದನಾ ಘಟಕಗಳು ಸಹಿತ ಒಟ್ಟಾರೆ 40 ಮಿ.ಯೂ. ವಿದ್ಯುತ್ ಜಲ ಮೂಲದಿಂದ ದೊರೆಯುತ್ತಿದೆ ಎಂದು ಶರಾವತಿ ವಿದ್ಯುದಾಗಾರದ ಮೂಲಗಳು ತಿಳಿಸಿವೆ.
ವಿದ್ಯುತ್ ಬೇಡಿಕೆ ಹೆಚ್ಚಳವಾಗಿದ್ದು ನಿಜ. ಬೇಸಗೆಯಲ್ಲಿ ಉಂಟಾಗುವ ಈ ಬೇಡಿಕೆ ನಿರ್ವಹಣೆಗಾಗಿಯೇ ಮುಂದಾಲೋಚನೆಯಿಂದ ಜಲವಿದ್ಯುತ್ “ರಿಸರ್ವ್’ ಮಾಡಿಟ್ಟುಕೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಯರಮರಸ್ ಶಾಖೋತ್ಪನ್ನ ಘಟಕದಿಂದ 300 ಮೆ.ವಾ. ಬರಲಿದೆ. ಖಾಸಗಿ ಸೌರವಿದ್ಯುತ್ ಉತ್ಪಾದಕರಿಂದ 400ರಿಂದ 500 ಮೆ.ವಾ. ಹಾಗೂ ಅಲ್ಪಾವಧಿಗಾಗಿ 900 ಮೆ.ವಾ. ವಿದ್ಯುತ್ ಖರೀದಿಸಲಾಗುತ್ತಿದೆ. ಹಾಗಾಗಿ, ಸಮಸ್ಯೆ ಆಗದು ಎಂದು ಕೆಪಿಟಿಸಿಎಲ್ ನಿರ್ದೇಶಕ (ಪ್ರಸರಣ) ಎಚ್. ನಾಗೇಶ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.