ಮಂತ್ರಿಮಾಲ್ ಆರಂಭ
Team Udayavani, Feb 26, 2017, 12:13 PM IST
ಬೆಂಗಳೂರು: ಗೋಡೆ ಕುಸಿತದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದ “ಮಂತ್ರಿ ಸ್ಕ್ವೇರ್’ ವಾಣಿಜ್ಯ ಕಟ್ಟಡಕ್ಕೆ ಬಿಬಿಎಂಪಿ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ. ಶನಿವಾರ ಸಂಜೆಯಿಂದಲೇ ಮಾಲ್ ಪುನಾರಂಭಗೊಂಡಿದೆ.
ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಸ್ಕ್ವೇರ್ ಕಟ್ಟಡದ ಗೋಡೆ ಕುಸಿತದ ಹಿನ್ನೆಲೆಯಲ್ಲಿ ಕಟ್ಟಡಕ್ಕೆ ನೀಡಿದ್ದ ಸ್ವಾಧೀನಾನುಭವ ಪತ್ರವನ್ನು ಬಿಬಿಎಂಪಿ ತಾತ್ಕಾಲಿಕವಾಗಿ ಹಿಂಪಡೆದಿತ್ತು. ನಂತರ ತಜ್ಞರ ಸಮಿತಿ ಕಟ್ಟಡದ ಸಮಗ್ರ ಪರಿಶೀಲನೆ ನಡೆಸಿತ್ತು. ಸಮಿತಿಯ ಅಂತಿಮ ವರದಿ ಬಿಬಿಎಂಪಿ ಕೈ ಸೇರಿದೆ. ಅದರಂತೆ ಮಂತ್ರಿ ಸ್ಕ್ವೇರ್‌ಗೆ ಷರತ್ತುಬದ್ಧ ಸ್ವಾಧೀನಾನುಭವ ಪ್ರಮಾಣಪತ್ರ ನೀಡಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಶನಿವಾರ ಆದೇಶ ಹೊರಡಿಸಿದ್ದಾರೆ.
ಜನವರಿ 16ರಂದು ಮಂತ್ರಿಸ್ಕ್ವೇರ್ ಕಟ್ಟಡದ ಮೊದಲ ಮತ್ತು ಮೂರನೇ ಮಹಡಿಯ ಹಿಂಭಾಗದಲ್ಲಿರುವ ಗೋಡೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಕಟ್ಟಡದಲ್ಲಿ ದೋಷ ಇರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಕೆಎಂಸಿ ಕಾಯ್ದೆ ಕಲಂ 309ರ ಅನ್ವಯ ಸ್ವಾಧೀನಾನುಭವ ಪ್ರಮಾಣಪತ್ರವನ್ನು ತಾತ್ಕಾಲಿಕವಾಗಿ ಹಿಂಪಡೆದಿತ್ತು.
ಷರತ್ತುಗಳೇನು?
* ಅವಘಡಕ್ಕೆ ತುತ್ತಾದ ಭಾಗವನ್ನು ತಜ್ಞರ ಮೇಲ್ವಿಚಾರಣೆಯಲ್ಲೇ ದುರಸ್ತಿಗೊಳಿಸಬೇಕು.
* ಅವಘಡ ಸಂಭವಿಸಿದ ಭಾಗ ಸಂಪೂರ್ಣ ದುರಸ್ತಿಯಾಗುವವರೆಗೂ ಕಟ್ಟಡದ ಮೂರನೇ ಮಹಡಿಯ ಬಾಗಿಲನ್ನು ಮುಚ್ಚಬೇಕು.
* ಪ್ರತಿ ವರ್ಷ ಕಟ್ಟಡದ ನಿರ್ವಹಣೆ (ಮೆಂಟೇನನ್ಸ್) ಮಾಡಬೇಕು ಮತ್ತು ನಿರ್ವಹಣೆ ನಡೆಸಿದ ಬಗ್ಗೆ ಬಿಬಿಎಂಪಿಗೆ ವರದಿ ನೀಡಬೇಕು.
* ಅಗ್ನಿಶಾಮಕ ಯಂತ್ರಗಳು, ತುರ್ತು ನಿರ್ಗಮನ ದ್ವಾರಗಳನ್ನು ಕಟ್ಟಡ ಹೊಂದಿರಬೇಕು.
* ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ನಿರಾಕ್ಷೇಪಣೆ ಪತ್ರ ಪಡೆದಿರಬೇಕು. ಅದರ ಪ್ರತಿಯೊಂದನ್ನು ಪಾಲಿಕೆಗೆ ಕೊಡಬೇಕು.
* ಕಟ್ಟಡದ ಸದೃಢತೆ ಬಗ್ಗೆ ತಜ್ಞರಿಂದ ಆಗಾಗ್ಗೆ ಪರಿಶೀಲನೆ ನಡೆಸಬೇಕು ಹಾಗೂ ಅದರ ವರದಿಯನ್ನು ಬಿಬಿಎಂಪಿಗೆ ನೀಡಬೇಕು.
* ನೀರು ಸರಬರಾಜು ಪೈಪ್‌ಗ್ಳು, ಚರಂಡಿ ಪೈಪ್‌ಗ್ಳು, ಎಸಿ ಯಂತ್ರಗಳು ಸುಸ್ಥಿತಿಯಲ್ಲಿರುವುದನ್ನು ಕಾಲ ಕಾಲಕ್ಕೆ ದೃಢಪಡಿಸಿಕೊಳ್ಳಬೇಕು. ಈ ಬಗ್ಗೆ ಬಿಬಿಎಂಪಿಗೆ ವರದಿ ನೀಡಬೇಕು.
* ವಾಹನಗಳ ನಿಲುಗಡೆ ಜಾಗವನ್ನು ಬಿಬಿಎಂಪಿ ಯಾವ ಉದ್ದೇಶಕ್ಕೆ ಸ್ವಾಧೀನಾನುಭವ ಪತ್ರ ನೀಡಿದೆಯೋ ಅದಕ್ಕೆ ಮಾತ್ರ ಬಳಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.