ಕಾಮಗಾರಿಗಳಲ್ಲಿ ಶೇ.30 ಕಮಿಷನ್‌: ಯಾರಿಗೆಷ್ಟು?


Team Udayavani, Feb 26, 2017, 12:25 PM IST

mys3.jpg

ಹುಣಸೂರು: ಕಾಮಗಾರಿಗಳಲ್ಲಿ ಶೇ.30 ಕಮಿಷನ್‌ ನೀಡಬೇಕಿದೆ ಎಂದು ಗುತ್ತಿಗೆದಾರರು ಹೇಳುತ್ತಾರೆ. ಎಂಜಿನಿಯರ್‌ ಸೇರಿದಂತೆ ಯಾರ್ಯಾರಿಗೆ ಎಷ್ಟು ಕಮಿಷನ್‌ ಕೊಡಬೇಕಿದೆ ಎಂಬುದನ್ನು ಸ್ಪಷ್ಟಪಡಿಸ ಬೇಕು ಎಂದು ತಾಪಂ ಸದಸ್ಯರು ಆಗ್ರಹಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಅಧ್ಯಕ್ಷೆ ಪದ್ಮಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಪುಟ್ಟಮ್ಮ, ವೆಳ್ಳಂಗಿರಿ ಇತರರು, ಈ ವಿಷಯ ಪ್ರಸ್ತಾಪಿಸಿ, ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಪಟ್ಟು ಹಿಡಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯಿತಿ ಎಇಇ ಭೋಜರಾಜ್‌, ಈ ವಿಷಯವನ್ನು ಸಭೆಯಲ್ಲಿ ಚರ್ಚೆ ಮಾಡುವುದು ಬೇಡ. ಇಲ್ಲಿ ಮಾಧ್ಯಮದವರಿದ್ದಾರೆ. ನಂತರ ಮಾತನಾಡುತ್ತೇನೆ ಎಂದರು. ಬಳಿಕ ಮಾತನಾಡಿದ ತಾಪಂ ಇಒ ಕೃಷ್ಣಕುಮಾರ್‌, ಅಂತಹ ಪ್ರಕರಣವಿದ್ದಲ್ಲಿ ಲಿಖೀತ ದೂರು ನೀಡಿದರೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.

ಬಿಗಡಾಯಿಸಿದ ನೀರಿನ ಸಮಸ್ಯೆ: ತಾಲೂಕಿನ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ, ಶಾಲೆಗಳಲ್ಲಿ ಮಕ್ಕಳನ್ನು ಊಟಕ್ಕೆ ಮನೆಗೆ ಕಳುಹಿಸುತ್ತಿದ್ದಾರೆ, ಹುಳು ಮಿಶ್ರಿತ ಬೇಳೆ ವಿತರಣೆಯಾಗಿದೆ, ಸಭೆಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೇಲ್ಜಾತಿಯವರಿಂದ ಕಿರುಕುಳಕ್ಕೆ ಒಳಗಾದ ಅಂಗನವಾಡಿ ಸಹಾಯಕಿಗೆ ರಕ್ಷಣೆ ನೀಡಬೇಕು ಎಂದು ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಸದಸ್ಯರಾದ ತಿಮ್ಮನಾಯ್ಕ, ರಾಜೇಂದ್ರಬಾಯಿ, ರತ್ನಕುಮಾರ್‌, ಪುಟ್ಟಮ್ಮ, ಶಿವಣ್ಣ, ಶಕುಂತಲಾ, ಸರಸಮ್ಮ, ವೆಳ್ಳಂಗಿರಿ, ಪ್ರೇಮೇಗೌಡ, ಪ್ರೇಮಾ, ರೂಪಾ, ಮಂಜುಳಾ, ಪುಷ್ಪಲತಾ ಇತರರು ತಮ್ಮ ಕ್ಷೇತ್ರವ್ಯಾಪ್ತಿಯ ಸಮಸ್ಯೆಗಳನ್ನು ಸಭೆಯಲ್ಲಿ  ಎಳೆ ಎಳೆಯಾಗಿ ಬಿಚ್ಚಿಟ್ಟರು. 

ಟ್ಯಾಂಕರ್‌ ಮೂಲಕ ನೀರು ಕೊಡಿ: ಜಾಬಗೆರೆ, ದಲ್ಲಾಳು, ದಲ್ಲಾಳು ಕೊಪ್ಪಲು, ರಂಗಯ್ಯನ ಕೊಪ್ಪಲು, ಆಜಾದ್‌ನಗರ, ಕಳ್ಳಿ ಕೊಪ್ಪಲು, ಹಳ್ಳದ ಕೊಪ್ಪಲು, ಎರಡನೇ ಪಕ್ಷಿರಾಜಪುರ, ಅಂಬೇಡ್ಕರ್‌ ನಗರ, ಕಲ್ಲೂರಪ್ಪನಬೆಟ್ಟ, ಕಡೆಮನುಗನಹಳ್ಳಿ, ಸೋಮನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಕುಡಿಯುವ ನೀರಿನ ತತ್ವಾರ ಹೆಚ್ಚಿದೆ.

ಈ ಭಾಗಗಳಲ್ಲಿ ನೀರು ಪೂರೈಕೆಯೇ ದೊಡ್ಡ ಸಮಸ್ಯೆಯಾಗಿದೆ. ಟ್ಯಾಂಕರ್‌ ಮೂಲಕ ನೀರು ಒದಗಿಸಿ ಎಂದು ಒತ್ತಾಯಿಸಿದರು. ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ 40 ಲಕ್ಷ ರೂ. ಬಿಡುಗಡೆ ಮಾಡಿದ್ದು, ಟ್ಯಾಂಕರ್‌ ಮೂಲಕ ನೀರು ಪೂರೈಕೆ ಸೇರಿದಂತೆ ಅಗತ್ಯ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದೆಂದು ಎಇಇ ನಟರಾಜ್‌ ತಿಳಿಸಿದರು.

ತಾಪಂ ಅನುದಾನದಡಿ 15 ಲಕ್ಷ ರೂ. ಕ್ರಿಯಾಯೋಜನೆ ರೂಪಿಸಿದ್ದು, ಅಂಗನವಾಡಿ ದುರಸ್ತಿ ಮಾಡಲು ಇದುವರೆಗೂ ಗುತ್ತಿಗೆದಾರರನ್ನು ನೇಮಿಸಿಲ್ಲ. ಮಾರ್ಚ್‌ನೊಳಗೆ ಕಾಮಗಾರಿ ಪೂರ್ಣಗೊಳಿಸಲು ಆಗುವುದಿಲ್ಲ. ಕೆಲ ಸದಸ್ಯರು ಕ್ರಿಯಾಯೋಜನೆಯನ್ನು ಪರಿಷ್ಕರಿಸಬೇಕು ಎಂದು ಹೇಳಿ ಇದುವರೆಗೂ ಯಾವುದೇ ಸೂಚನೆ ನೀಡಿಲ್ಲ ಎಂದು ಜಿಪಂ.ಎಇಇ ಭೋಜರಾಜ್‌ ತಿಳಿಸಿದರು.

ಕ್ರಿಮಿನಲ್‌ ಮೊಕದ್ದಮೆ: ಇದಕ್ಕೆ  ಪ್ರತಿಕ್ರಿಯಿಸಿದ ಇಒ, ಮಾರ್ಚ್‌ ಒಳಗೆ ಎಲ್ಲಾ ಕಾಮಗಾರಿಗಳು, ಅದರಲ್ಲೂ ಎಸ್‌ಇಪಿ ಹಾಗೂ ಟಎಸ್‌ಪಿ ಯೋಜನೆ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಇಲ್ಲದಿದ್ದಲ್ಲಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಾಗುವುದು ಎಂದು ಎಚ್ಚರಿಸಿದರು.

ಗೈರಾದ ಅಧಿಕಾರಿಗಳಿಗೆ ನೋಟಿಸ್‌: ಎಇಇಗಳಿಬ್ಬರು ಸಭೆಗೆ ಬಂದಿಲ್ಲ. ಯಾವುದೇ ಮಾಹಿತಿಯನ್ನೂ ನೀಡಿಲ್ಲವೆಂದು ಇಒ ಸಭೆಗೆ ತಿಳಿಸಿದಾಗ,  ಅಧಿಕಾರಿಗಳು ಸದಸ್ಯರ ಫೋನ್‌ ಕರೆಗಳನ್ನು ಸ್ವೀಕರಿಸುವುದಿಲ್ಲ, ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಸದಸ್ಯರು ದೂರಿದರು ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗುವುದು ಅಧ್ಯಕ್ಷೆ ಪದ್ಮಮ್ಮ ತಿಳಿಸಿದರು. 

ಸಭೆ, ಸಮಾರಂಭಗಳಿಗೆ  ಸದಸ್ಯರಿಗೆ ಆಹ್ವಾನವಿಲ್ಲ: ಕ್ಷೇತ್ರದಲ್ಲಿ ಶಾಸಕರು ನಡೆಸುವ ಸಭೆ, ಸಮಾರಂಭಗಳಿಗೆ ಅಧಿಕಾರಿಗಳು ತಮ್ಮನ್ನು ಆಹ್ವಾನಿಸುತ್ತಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಮುಂದೆ  ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಇಒ ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ಅಂಗನವಾಡಿ ಸಹಾಯಕಿಗೆ ನಿರ್ಬಂಧ: ಹನಗೋಡು ಬಳಿಯ ಉಡುವೆಪುರ ಅಂಗನವಾಡಿ ಕೇಂದ್ರದ ಸಹಾಯಕಿ ಲಕ್ಷ್ಮೀ ಅವರನ್ನು ಅದೇ ಗ್ರಾಮದ ಮೇಲ್ವರ್ಗದವರು ಕಳೆದ ನಾಲ್ಕು ತಿಂಗಳಿನಿಂದ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲವೆಂದು ಸಿಡಿಪಿಒ ನವೀನ್‌ ಸಭೆಗೆ ತಿಳಿಸಿದರು. ಇದೊಂದು ಗಂಭೀರ ವಿಚಾರವಾಗಿದ್ದು, ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ಜನರಿಗೆ ಕಾನೂನು ತಿಳಿಸಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಆಕೆಗೆ ರಕ್ಷಣೆ ನೀಡಿ ಕಾನೂನು ರೀತಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕೆಂದು ಸದಸ್ಯರು ನಿರ್ಣಯ ಕೈಗೊಂಡರು.

ಊಟ ಕೊಡ್ತಿಲ್ಲ, ಬೇಳೆಯಲ್ಲಿ ಹುಳು: ತಾಲೂಕಿನ ಯಲಚವಾಡಿ ಪ್ರಾಥಮಿಕ ಶಾಲೆಯಲ್ಲಿ ಪಡಿತರ ಕಡಿಮೆ ಬಂದಿದೆ ಎಂದು ವಾರದಲ್ಲಿ ನಾಲ್ಕುದಿನ ಮಕ್ಕಳನ್ನು ಊಟಕ್ಕೆ ಮನೆಗೆ ಕಳುಹಿಸಲಾಗುತ್ತಿದೆ. ಹುಳು ಇರುವ ಬೇಳೆ ವಿತರಿಸಲಾಗುತ್ತದೆ ಎಂದು ಸದಸ್ಯ ಶಿವಣ್ಣ ದೂರಿದರು.  ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಈ ವೇಳೆ ತಾಪಂ ಉಪಾಧ್ಯಕ್ಷ ಪ್ರೇಮ್‌ಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ರಾವ್‌, ಇಂಡೋಲ್ಕರ್‌ ಇತರರು ಉಪಸ್ಥಿತರಿದ್ದರು.

ನೀರು ಕೊಡದಿದ್ದರೆ ಕೊಳವೆಬಾವಿ ಜಪ್ತಿ
ಕುಡಿಯುವ ನೀರಿನ ಸಮಸ್ಯೆಗಳಿರುವ ಹಳ್ಳಿಗಳಲ್ಲಿ ಗ್ರಾಮದ ಪಕ್ಕದಲ್ಲೇ ರೈತರ ಪಂಪ್‌ಸೆಟ್‌ನಲ್ಲಿ ನೀರು ಸಿಗುತ್ತಿದ್ದರೆ ತಿಂಗಳ ಬಾಡಿಗೆ ಆಧಾರದ ಮೇಲೆ ನೀರು ಪಡೆಯಲಾಗುವುದು. ಜಮೀನು ಮಾಲಿಕರು ನೀರು ಕೊಡಲು ಒಪ್ಪದಿದ್ದರೆ ಸರ್ಕಾರವೇ ಕೊಳವೆಬಾವಿಯನ್ನು ಮುಟ್ಟುಗೋಲು ಹಾಕಿಕೊಂಡು ನೀರು ಪೂರೈಸುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್‌ ತಿಳಿಸಿದರು. ಹುಣಸೂರು ತಾಲೂಕಿನ 33 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ತಕ್ಷಣಕ್ಕೆ ಹೆಬ್ಬಳ,  ಬೋವಿ ಕಾಲೋನಿ, ಬಿ.ಕಾಲೋನಿ, ಶಂಕರೇಗೌಡನ ಕೊಪ್ಪಲು, ಜಾಬಗೆರೆ, ಕೆರೆಯೂರುಗಳಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.

ಟಾಪ್ ನ್ಯೂಸ್

Revanna

Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್

Mangaluru: ಸ್ಪ್ಯಾಮ್ ಕರೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ; ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

1-ddssas

Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್

Naxal BIG

Maoist; 15 ಲಕ್ಷ ರೂ.ಇನಾಮು ಹೊಂದಿದ್ದ ಮಾವೋವಾದಿ ಕಮಾಂಡರ್ ಆಂತರಿಕ ಕಲಹದಲ್ಲಿ ಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Revanna

Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್

11-uv-fusion

Simple Life: ಬದುಕು ನಿರಾಡಂಬರವಾಗಿರಲಿ

Mangaluru: ಸ್ಪ್ಯಾಮ್ ಕರೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ; ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.