ಶಿವರಾತ್ರಿ ಜಾಗರಣೆ, ಉತ್ಸವ, ರಥೋತ್ಸವದಲ್ಲಿ ಮಿಂದೆದ್ದ ಭಕ್ತರು
Team Udayavani, Feb 26, 2017, 12:32 PM IST
ಹುಣಸೂರು: ತಾಲೂಕಿನ ಮಹಾ ಶಿವರಾತ್ರಿ ಅಂಗವಾಗಿ ವಿವಿಧ ದೇವಸ್ಥಾನಗಳಲ್ಲಿ ಪೂಜೆ, ಹೋಮ – ಹವನ, ಜಾಗರಣೆ, ಉತ್ಸವ, ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮಹಾಶಿವರಾತ್ರಿ ಪ್ರಯುಕ್ತ ಹನ ಗೋಡು ಹೋಬಳಿ ರಾಮೇನಹಳ್ಳಿ ಬೆಟ್ಟದ ಮೇಲಿನ ಓಂಕಾರೇಶ್ವರದೇವರ ರಥೋತ್ಸವ, ಕಲ್ಲೂರಪ್ಪನಗುಡ್ಡದಲ್ಲಿ ಕೊಂಡೋತ್ಸವ ನಡೆಯಿತು. ಕೊಳವಿಗೆ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಚಿಕ್ಕಹುಣಸೂರಿನ ಮಹದೇಶ್ವರ ದೇವಸ್ಥಾನದಲ್ಲಿ ಉತ್ಸವ ನಡೆದರೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಿತು. ಈ ಎಲ್ಲಾ ದೇವಾಲಯಗಳೂ ಲಕ್ಷಣ ತೀರ್ಥ ನದಿ ತಟದಲ್ಲಿರುವುದು ವಿಶೇಷವಾಗಿದೆ.
ಓಂಕಾರೇಶ್ವರ ಸ್ವಾಮಿ ರಥೋತ್ಸವ: ನಗರಕ್ಕೆ ಮೂರು ಕಿ.ಮೀ. ದೂರಲ್ಲಿರುವ ರಾಮೇನಹಳ್ಳಿಬೆಟ್ಟದ ಮೇಲಿನ ದೇವಾ ಲಯದಲ್ಲಿ ಓಂಕಾರೇಶ್ವರ ಸ್ವಾಮಿ ರಥೋತ್ಸವವು ಶನಿವಾರ ಬೆಳಗ್ಗೆ ವಿಜ್ರಂಭಣೆಯಿಂದ ಜರುಗಿತು. ಶುಕ್ರುವಾರ ರಾತ್ರಿಯಿಡೀ ಬೆಟ್ಟದಲ್ಲಿ ವಿಶೇಷ ಹೋಮ, ಹವನ, ಭಜನೆ ಮೂಲಕ ಜಾಗರಣೆ ನಡೆಯಿತು. ರಾತ್ರಿ ಜಾಗರಣೆಯಲ್ಲಿ ತೊಡಗಿದ್ದವರು ಬೆಳಗ್ಗೆ ನದಿಯಲ್ಲಿ ಸ್ಥಾನಮಾಡಿ ಪುನೀತರಾದರು.
ಬೆಟ್ಟದ ಮೇಲಿನ ದೇವಾಲಯಕ್ಕೆ 500 ಮೆಟ್ಟಿಲು ಮೂಲಕ ಬೆಟ್ಟ ಹತ್ತಿ, ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು. ಇದಕ್ಕೂ ಮುನ್ನ ಹರಕೆ ಹೊತ್ತ ಮಂದಿ ಗ್ರಾಮದ ಬಳಿ ಇರುವ ಲಕ್ಷಣತೀರ್ಥನದಿಯಲ್ಲಿ ಮುಡಿಕೊಟ್ಟು ಬಾಯಿಗೆ ಬೀಗ ಹಾಕಿಕೊಂಡು ಬೆಟ್ಟ ಹತ್ತಿ ಉರುಳುಸೇವೆ ಸಲ್ಲಿಸಿದರು.
20 ಸಾವಿರ ಮಂದಿಗೆ ದಾಸೋಹ: ಜಾತ್ರಾ ಸಮಿತಿವತಿಯಿಂದ ಭಕ್ತರಿಗೆ ಬೆಟ್ಟದ ಆವರಣದಲ್ಲಿ ಬಗೆ ಬಗೆಯ ಊಟದ ವ್ಯವಸ್ಥೆ ಕಲ್ಪಿಸ ಲಾಗಿತ್ತು. ಜಾತ್ರೆಯಲ್ಲಿ ಹುಣಸೂರಿನ ಗಾಡಿಕಾರ್ಖಾನೆ ನಾರಾಯಣ ಸ್ವಾಮಿಯವರ ಕುಟುಂಬದಿಂದ ಮಜ್ಜಿಗೆ, ಪಾನಕ ವಿತರಿಸಲಾಯಿತು.
ಕೊಳುವಿಗೆಯಲ್ಲಿ ರಾಮಲಿಂಗೇಶ್ವರ ಉತ್ಸವ: ಹನಗೋಡಿಗೆ ಸಮೀಪ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನಕ್ಕಂಟಿಕೊಂಡಿರುವ ಕೊಳುವಿಗೆಯ ಲಕ್ಷಣತೀರ್ಥನದಿದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಾಲಯ ದಲ್ಲಿ ಜಾಗರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು, ಶನಿವಾರ ಬೆಳಗ್ಗೆ ದೇವರ ಉತ್ಸವ ನಡೆಯಿತು. ಮಧ್ಯಾಹ್ನ ಅನ್ನದಾಸೋಹ ನಡೆಯಿತು. ಸುತ್ತ ಮುತ್ತಲ ಗ್ರಾಮಗಳು ಹಾಗೂ ಹಾಡಿಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದರು.
ಕಲ್ಲೂರೇಶ್ವರ ಜಾತ್ರೆ: ನಾಗರಹೊಳೆ ಉದ್ಯಾನದಂಚಿನಲ್ಲಿರುವ ಸಮಿಪದ ಮಾದಳ್ಳಿಯ ಕಲ್ಲೂರಪ್ಪನಬೆಟ್ಟದಲ್ಲಿ ಕಲ್ಲುಬಂಡೆಗಳ ನಡುವೆ ವಿರಾಜಮಾನವಾಗಿರುವ ಕಲ್ಲೂರೇಶ್ವರಸ್ವಾಮಿಗೆ ಹಬ್ಬದಂದು ವಿಶೇಷ ಪೂಜೆ ಸಲ್ಲಿಸ ಲಾಯಿತು. ಜಾಗರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆೆಯಿತು. ಶನಿವಾರ ಬೆಳಿಗ್ಗೆ ದೀವಟಿಕೆ ಪೂಜೆ ಬಳಿಕ ಕೊಂಡೊತ್ಸವ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!
Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್ ಗಂಭೀರ್ ಭಾರತಕ್ಕೆ
BJP: ಬಸನಗೌಡ ಪಾಟೀಲ್ ಯತ್ನಾಳ್ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ
Fraud Case: ಎಪಿಕೆ ಫೈಲ್ ಕಳುಹಿಸಿ 1.31 ಲ.ರೂ. ವಂಚನೆ
Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.