ಅರ್ಹ ಫಲಾನುಭವಿಗಳ ಗುರುತಿಸಿ
Team Udayavani, Feb 26, 2017, 1:01 PM IST
ಹರಪನಹಳ್ಳಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ಬಗರ್ ಹುಕುಂ ಸಮಿತಿ ಅಧ್ಯಕ್ಷ, ಶಾಸಕ ಎಂ.ಪಿ. ರವೀಂದ್ರ ಅಧ್ಯಕ್ಷತೆಯಲ್ಲಿ ಬಗರ್‌ಹುಕುಂ ಸಮಿತಿ ಸಭೆ ನಡೆಯಿತು. ಇಚಲುವನ ಪ್ರದೇಶದ ಪಟ್ಟಾಕ್ಕಾಗಿ 281 ಅರ್ಜಿಗಳನ್ನು ಗುರುತಿಸಿದ್ದೇವೆ. ಅದರಲ್ಲಿ 100 ಅರ್ಜಿಗಳು ಮಾತ್ರ ಅರ್ಹವಿದ್ದು, 181 ಅರ್ಜಿಗಳಲ್ಲಿ ಕೆಲವೊಂದು ಭೂ ದಾಖಲೆಯ ತಾಂತ್ರಿಕ ದೋಷದಿಂದ ಕೂಡಿವೆ ಎಂದು ತಹಶೀಲ್ದಾರ್ ಕೆ. ಗುರುಬಸವರಾಜ್ ಹೇಳಿದರು.
ಕಾನೂನಿನ ಪ್ರಕಾರ ಎಲ್ಲ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ಪಟ್ಟಾ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಶಾಸಕ ಎಂ.ಪಿ. ರವೀಂದ್ರ ಸೂಚಿಸಿದರು. ಅನಾದಿನ ಕಾಲದ ಮತ್ತು ಪಾರಂಪೋಕ್ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವುರಿಂದ ಒಟ್ಟು 2,526 ಅರ್ಜಿಗಳು ಬಂದಿವೆ. ಕರ್ನಾಟಕ ಭೂ ಕಂದಾಯ ಕಾಯ್ದೆಯ ತಿದ್ದುಪಡಿ ಆದೇಶದ ಪ್ರಕಾರ ಗೋಮಾಳ ಜಾಗವನ್ನು ಜಾನುವಾರುಗಳಿಗೆ ಮೀಲಿಲಿಡುವಂತಿಲ್ಲ ಎಂಬ ಕೂನೂನು ಜಾರಿಯಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
2,526 ಅರ್ಜಿಗಳು ಬಂದಿರುವುದರಿಂದ ಸಾಗುವಳಿ ಮಾಡುತ್ತಾರೋ ಇಲ್ಲವೋ ಎಂಬ ಕುರಿತು ಪ್ರತಿಯೊಬ್ಬ ಸರ್ವೇಯರ್‌ಗೆ 15 ಪ್ರಕರಣ ನೀಡಿ ಸರ್ವೇ ನಡೆಸಬೇಕು ಎಂದು ಶಾಸಕರು ಆದೇಶಿಸಿದರು. 1998-99ರಲ್ಲಿ ಫಾರಂ-50 ಮತ್ತು 53 ಅರ್ಜಿ ಸಲ್ಲಿಸವರಿಗೆ ಮಾತ್ರ ಪಟ್ಟಾ ವಿತರಿಸಬಹುದಾಗಿದೆ.
ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಅವಕಾಶವಿಲ್ಲ. ಪ್ರತಿ ಹೋಬಳಿ ಮಟ್ಟದಲ್ಲಿ ಎಷ್ಟು ಅರ್ಜಿಗಳು ಬಂದಿವೋ ಆಯಾ ಭಾಗದ ಕಂದಾಯ ಅಧಿಧಿಕಾರಿಗಳು ಪರಿಶೀಲನೆ ನಡೆಸಬೇಕು. ಸರ್ವೇಯರ್ ತಕ್ಷಣವೇ ಜಮೀನು ಸಂಪೂರ್ಣ ಅಳತೆ ಮಾಡಲು ಸಾಧ್ಯವಿಲ್ಲ. ಅರ್ಜಿ ಸಲ್ಲಿಸಿರುವ ವ್ಯಕ್ತಿ ಅಲ್ಲಿ ಉಳಿಮೆ ಮಾಡುತ್ತಿರುವ ಕುರಿತು ಗುರುತಿನ ಸರ್ವೇ ಮಾಡಬೇಕು.
ನಂತರ ಪ್ರತಿ ತಿಂಗಳು ಒಂದು ಸಭೆ ನಡೆಸಿ ಪಟ್ಟಾ ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದರು. ಯಾವುದೇ ಒತ್ತಡಕ್ಕೆ ಮಣಿಯದೇ ಕಾನೂನಿನ ಪ್ರಕಾರವೇ ಫಲಾನುಭವಿ ಗುರುತಿಸಬೇಕು. ನಿಜವಾದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯಬೇಕು.
ಕಂದಾಯ ಇಲಾಖೆ ಅಧಿಕಾರಿಗಳು ಶೀಘ್ರವೇ ಅರ್ಜಿ ವಿಲೇವಾರಿ ಮಾಡಬೇಕು. ನಿರ್ಲಕ್ಷé ವಹಿಸದೇ ಬಡವರಿಗೆ ಸವಲತ್ತು ತಲುಪಿಸಲು ಸಹಕರಿಸಿ ಎಂದು ಶಾಸಕರು ಹೇಳಿದರು. ತಹಶೀಲ್ದಾರ್ ಕೆ. ಗುರುಬಸವರಾಜ್, ಬಗರ್ ಹುಕ್ಕುಂ ಸಮಿತಿಯ ಸದಸ್ಯರಾದ ಎಸ್. ಚಿದಾನಂದಪ್ಪ, ಹುಲಿಕಟ್ಟಿ ಚಂದ್ರಪ್ಪ, ಶೋಭಾ ಪಾಟೀಲ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.