ಐಸಿಸ್‌ಗೆ ಸೇರಿದ್ದ ಕಾಸರಗೋಡು ಯುವಕನ ಹತ್ಯೆ
Team Udayavani, Feb 27, 2017, 2:10 AM IST
ಕಾಸರಗೋಡು/ಹೊಸದಿಲ್ಲಿ: ಕುಖ್ಯಾತ ಉಗ್ರ ಸಂಘಟನೆ ಐಸಿಸ್ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿರುವಂತೆಯೇ, ಕಳೆದ ವರ್ಷ ಆ ಸಂಘಟನೆಗೆ ಸೇರಿದ್ದ ಕಾಸರಗೋಡಿನ ಯುವಕ ಅಫ್ಘಾನಿಸ್ಥಾನದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಹತನಾಗಿದ್ದಾನೆ. ಇದೇ ವೇಳೆ ಗುಜರಾತ್‌ನ ಉಗ್ರ ನಿಗ್ರಹ ದಳ ಐಸಿಸ್‌ನ ‘ಒಂಟಿ ತೋಳ ದಾಳಿ’ ಯೋಜನೆಯನ್ನು ವಿಫಲಗೊಳಿಸಿದೆ.
ಅಫ್ಘಾನಿಸ್ಥಾನದ ನಂಗ್ರಹಾರ್ ಜಿಲ್ಲೆಯಲ್ಲಿ ಮೃತಪಟ್ಟ ಹಫೀಜುದ್ದೀನ್ (24) ಕಳೆದ ವರ್ಷ ಕೇರಳದ ಇತರ ಕನಿಷ್ಠ 21 ಮಂದಿಯೊಂದಿಗೆ ಐಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದ. ರವಿವಾರ ಹಫೀಜುದ್ದೀನ್ ತಾಯಿಗೆ ಟೆಲಿಗ್ರಾಂ ಆ್ಯಪ್‌ನಲ್ಲಿ ಸಂದೇಶ ಬಂದಿದ್ದು, ಶನಿವಾರ ಪುತ್ರ ಮೃತಪಟ್ಟಿದ್ದಾಗಿ ಹೇಳಲಾಗಿತ್ತು. (ಅವರು ದೇವರಿಗೆ ಮೆಚ್ಚುಗೆಯಾಗಿದ್ದು, ಹುತಾತ್ಮರಾಗಿದ್ದಾರೆ) ಎಂದು ಅದರಲ್ಲಿ ಬರೆದಿತ್ತು. ಜತೆಗೆ ಆತನ ಅಂತ್ಯಕ್ರಿಯೆ ಅಲ್ಲೇ ನೆರವೇರಿದ್ದಾಗಿ ಸಂದೇಶದಲ್ಲಿ ಹೇಳಲಾಗಿದೆ. ಹಫೀಜುದ್ದೀನ್ ಜತೆ ನಾಪತ್ತೆಯಾಗಿರುವ ಅಕ್ಮಜೀದ್ ಎಂಬಾತ ಈ ಸಂದೇಶ ಕಳಿಸಿದ್ದಾಗಿ ಹೇಳಲಾಗಿದೆ.
ಮೂವರು ಮಕ್ಕಳು, ಆರು ಮಂದಿ ಮಹಿಳೆಯರ ಸಹಿತ 21 ಮಂದಿಯ ಗುಂಪು ಕೇರಳದಿಂದ 2016ರ ಜೂನ್‌ರಿಂದ ನಾಪತ್ತೆಯಾಗಿದ್ದು, ಐಸಿಸ್ ಸೇರಿದ್ದಾಗಿ ಹೇಳಲಾಗಿತ್ತು. ಈ ಕುರಿತಂತೆ ಆಗಾಗ ಟೆಲಿಗ್ರಾಂ ಸಂದೇಶ ಮನೆಯವರಿಗೆ ಬರುತ್ತಿತ್ತು. ಇದು ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಟೆಲಿಗ್ರಾಂ ಸಂದೇಶ ಅಫ್ಘಾನಿಸ್ಥಾನದಿಂದಲೇ ಬಂದಿರಬಹುದು ಎಂದು ಗುಪ್ತಚರ ಮೂಲಗಳು ಶಂಕಿಸಿವೆ.
ಈ ಮೊದಲು ನಾಪತ್ತೆಯಾಗಿರುವ ಪಾಲಕ್ಕಾಡ್ ಮೂಲದ ಯುವಕರಿಬ್ಬರ ತಂದೆ ಮುಂಬಯಿಯ ವಿವಾದಿತ ಧರ್ಮಪ್ರಚಾರ ಝಾಕಿರ್ ನಾೖಕ್‌ನಿಂದ ಪ್ರೇರಣೆಗೊಂಡೇ ತಮ್ಮ ಮಕ್ಕಳು ಉಗ್ರ ಸಂಘಟನೆ ಸೇರಿದ್ದಾಗಿ ಹೇಳಿದ್ದರು. ಐದು ತಿಂಗಳ ಹಿಂದೆ ರಾಷ್ಟ್ರೀಯ ತನಿಖಾ ದಳ ನಾಪತ್ತೆಯಾಗಿರುವವರ ಕುರಿತ ತನಿಖೆಯಲ್ಲಿ ಪ್ರಗತಿ ಸಾಧಿಸಿದ್ದು, ಐಸಿಸ್‌ನ ಸ್ಲೀಪರ್ ಸೆಲ್ ಒಂದನ್ನು ಭೇದಿಸಿತ್ತು. ಇದು ದೇಶಾದ್ಯಂತ ದಾಳಿಗೆ ಪ್ಲಾನ್ ಮಾಡುತ್ತಿದ್ದುದಾಗಿ ಹೇಳಲಾಗಿತ್ತು. ಈ ಸಂದರ್ಭ ಕಾಸರಗೋಡು ಮೂಲದ ಅಬ್ದುಲ್ ರಶೀದ್ ಅಬ್ದುಲ್ಲಾ ಮತ್ತು ಬಿಹಾರ ಸೀತಾಮರ್ಹಿ ಜಿಲ್ಲೆಯ ಯಾಸ್ಮಿನ್ ಮೊಹಮ್ಮದ್ ಝಾಹಿದ್ ಎಂಬಾತನನ್ನು ಬಂಧಿಸಲಾಗಿತ್ತು. ಇವರು ಕಾಸರಗೋಡು ಸೇರಿದಂತೆ ಕೇರಳದ ವಿವಿಧೆಡೆಗಳಲ್ಲಿ ಐಸಿಸ್‌ಗೆ ಯುವಕರನ್ನು ಸೆಳೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಜತೆಗೆ 2015ರಲ್ಲಿ ಐಸಿಸ್ ಅಫ್ಘಾನಿಸ್ಥಾನದಲ್ಲಿ ತನ್ನ ಖೋರ್ಸಾನ್ ಶಾಖೆಯನ್ನು ತೆರೆದಿದ್ದು ಭಾರತ ಸೇರಿದಂತೆ ಇತರೆಡೆಗಳಲ್ಲಿ ಸಂಘಟನೆ ವಿಸ್ತರಿಸಲು ಯೋಜಿಸಿದ್ದಾಗಿ ಹೇಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.