ಕಸಬ್ ಅಂದ್ರೆ ಕಂಪ್ಯೂಟರ್,ಸ್ಮಾರ್ಟ್‌ಫೋನ್, ಮಕ್ಕಳು
Team Udayavani, Feb 27, 2017, 10:26 AM IST
ಲಕ್ನೋ: ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿಯನ್ನು “ಕಸಬ್’ ಎಂದು ಕರೆದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ತಿರುಗೇಟು ನೀಡುವ ಸರದಿ ಈಗ ಎಸ್ಪಿ ಸಂಸದೆ ಡಿಂಪಲ್ ಯಾದವ್‌ರದ್ದು.
ಉತ್ತರಪ್ರದೇಶದ ಜೌನ್‌ಪುರದಲ್ಲಿ ಭಾನುವಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮಿಶ್ ಶಾರ “ಕಸಬ್’ಗೆ ಮರುವ್ಯಾಖ್ಯಾನ ಮಾಡಿದ್ದಾರೆ. “ಬಿಜೆಪಿಯು “ಕ’ ಎಂದರೆ ಕಾಂಗ್ರೆಸ್ ಎನ್ನುತ್ತದೆ. ಆದರೆ, ನಿಮ್ಮ ಅಖೀಲೇಶ್ ಭಯ್ನಾ ಹೇಳುತ್ತಾರೆ: “ಕ’ ಅಂದರೆ “ಕಂಪ್ಯೂಟರ್’, “ಸ’ ಅಂದರೆ ಸ್ಮಾರ್ಟ್ ಫೋನ್ ಹಾಗೂ “ಬಿ’ ಎಂದರೆ “ಬಚ್ಚೇ'(ಮಕ್ಕಳು).
ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್‌ಟಾಪ್ ನೀಡುತ್ತಿರುವ ಎಸ್ಪಿ ಸರ್ಕಾರ, ಇನ್ನು ಅದರ ಜೊತೆಗೆ ಸ್ಮಾರ್ಟ್‌ಫೋನ್ ಕೂಡ ನೀಡಲಿದೆ. ಇದರಿಂದ ಮಕ್ಕಳು ಸರ್ಕಾರದ ನೀತಿಗಳಿಂದ ಹಿಡಿದು ಎಲ್ಲ ವಿಚಾರಗಳ ಬಗ್ಗೆಯೂ ಮಾಹಿತಿಯನ್ನು ಪಡೆಯಬಹುದು,’ ಎಂದಿದ್ದಾರೆ ಡಿಂಪಲ್.
ಯುವಕರ ಮೈತ್ರಿ: ಇನ್ನೊಂದೆಡೆ, ಎಸ್ಪಿ-ಕಾಂಗ್ರೆಸ್ ಮೈತ್ರಿಯನ್ನು ಎರಡು ಭ್ರಷ್ಟ ಕುಟುಂಬಗಳ ಮೈತ್ರಿ ಎಂದಿರುವ ಬಿಜೆಪಿಗೆ ಪ್ರತಿಕ್ರಿಯಿಸಿರುವ ಸಿಎಂ ಅಖೀಲೇಶ್, ನಮ್ಮದು ಯುವಜನತೆಯ ಮೈತ್ರಿ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದಿದ್ದಾರೆ.
ಇಂದು 5ನೇ ಹಂತದ ಮತದಾನ: ಉತ್ತರಪ್ರದೇಶದ 5ನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕೇಂದ್ರೀಯ ಪಡೆಗಳು ಪಥಸಂಚಲನ ನಡೆಸಿವೆ. ನೇಪಾಳ ಗಡಿ ಭಾಗದ 5 ಕ್ಷೇತ್ರಗಳು ಸೇರಿದಂತೆ 11 ಜಿಲ್ಲೆಗಳ 51 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ರಾಹುಲ್ ಗಾಂಧಿ ಅವರ ತವರುಕ್ಷೇತ್ರ ಅಮೇಠಿಯೂ ಇದರಲ್ಲಿ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್
Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.