ಸ್ವಸ್ತಿಕ್‌ ಫ್ರೆಂಡ್ಸ್‌  ಕ್ಲಬ್‌:  ಸಾಮೂಹಿಕ ವಿವಾಹ ನಿಶ್ಚಿತಾರ್ಥ


Team Udayavani, Feb 27, 2017, 12:22 PM IST

2602pkt2.jpg

ಪುಂಜಾಲಕಟ್ಟೆ : ಇಲ್ಲಿನ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ನ ವತಿಯಿಂದ ಮಾ. 5ರಂದು ನಡೆಯಲಿರುವ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ವಧೂ-ವರರ ನಿಶ್ಚಿತಾರ್ಥ ಕಾರ್ಯಕ್ರಮ ರವಿವಾರ ಪುಂಜಾಲಕಟ್ಟೆ  ಬಂಗ್ಲೆ ಮೈದಾನ ಸಭಾಂಗಣದಲ್ಲಿ ಜರಗಿತು.

ಉದ್ಯಮಿ ಓಂಪ್ರಸಾದ್‌  ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕ್ಲಬ್‌ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಬಡವರೂ ಅದ್ದೂರಿಯ ವಿವಾಹ ನೆರವೇರಿಸಲು ಸಾಮೂಹಿಕ ವಿವಾಹ ವೇದಿಕೆಯಾಗಿದ್ದು ಸ್ವಸ್ತಿಕ್‌ ಕ್ಲಬ್‌ ವತಿಯಿಂದ ವಿಜೃಂಭಣೆಯಿಂದ ನಡೆಯಲಿದೆ. 

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ರಾಜಕೀಯ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದು ನಿಶ್ಚಿತಾರ್ಥ,ದಿಬ್ಬಣಗಳಿಂದ ಸಾಮೂಹಿಕ ವಿವಾಹ ರಾಜ್ಯದಲ್ಲಿಯೇ ವಿಶಿಷ್ಟವಾಗಿದೆ  ಎಂದು ಹೇಳಿದರು.

ಇದೇ ವೇಳೆ ವಧೂ-ವರರಿಗೆ ಮಂಗಳವಸ್ತ್ರ ವಿತರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ದೇವಪ್ಪ ಶೆಟ್ಟಿ  ಕುಂಟಜಾಲು, ರಂಗ ಕಲಾವಿದ ಎಚ್‌.ಕೆ. ನಯನಾಡು, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಮೋಹನ ಸಾಲ್ಯಾನ್‌, ಅಣ್ಣಳಿಕೆ  ಫ್ರೆಂಡ್ಸ್‌ ಸಂಚಾಲಕ ರಾಮಚಂದ್ರ ಶೆಟ್ಟಿಗಾರ್‌, ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಬಡಗಕಜೆಕಾರು ಗ್ರಾ.ಪಂ. ಸದಸ್ಯ ಗಂಗಾಧರ ಪೂಜಾರಿ, ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿಶ್ವನಾಥ  ಪೂಜಾರಿ, ಮುಖ್ಯ ಶಿಕ್ಷಕ ರಾಮ ಪಿ. ಸಾಲ್ಯಾನ್‌ ಮತ್ತಿತರರು  ಉಪಸ್ಥಿತರಿದ್ದರು.

ಕ್ಲಬ್‌ ಅಧ್ಯಕ್ಷ ಪ್ರಶಾಂತ್‌ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ ಅತ್ತಾಜೆ, ಕೋಶಾಧಿಕಾರಿ ರಾಜೇಶ್‌ ಬಂಗೇರ ಪುಳಿಮಜಲು ಮತ್ತಿತರ ಸದಸ್ಯರು ಭಾಗವಹಿಸಿದ್ದರು.

ಸಾಮೂಹಿಕ ವಿವಾಹ ಸಮಿತಿಯ ದೇವಪ್ಪ ಶೆಟ್ಟಿ ಕುಂಟಜಾಲು ಅವರ ಮುಂದಾಳತ್ವದಲ್ಲಿ ವರನ ಕಡೆಯಿಂದ ಸಂಜೀವ  ಶೆಟ್ಟಿ ಮೊಗೆರೋಡಿ ಅವರು ಹಾಗೂ ವಧುವಿನ ಕಡೆಯಿಂದ ಪ್ರಶಾಂತ್‌ ಪೂಜಾರಿ ಗುರಿಕಾರರಾಗಿ ಭಾಗವಹಿಸಿ ನಿಶ್ಚಯ ತಾಂಬೂಲ ನೆರವೇರಿಸಿದರು. ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳೆÂದೆಲೆ, ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಹಿಡಿದು ಮೂರು ಬಾರಿ ಪರಸ್ಪರ ಬದಲಾಯಿಸಿಕೊಂಡರು. ವಧೂ-ವರರು ಉಂಗುರ ವಿನಿಮಯ ಮಾಡಿಕೊಂಡರು. 20ಜೋಡಿ ವಧೂ-ವರರು ಸೇರಿದಂತೆ ಅವರವರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕ್ಲಬ್‌ನ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.  ಸ್ವಾಗತಿಸಿದರು.ಭರತ್‌ರಾಜ್‌ ಜೈನ್‌ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

“Koragajja” Movie producer gifted a car to the director

Kannada Film; ʼಕೊರಗಜ್ಜʼ ನಿರ್ದೇಶಕರಿಗೆ ಕಾರ್‌ ಗಿಫ್ಟ್ ಮಾಡಿದ ನಿರ್ಮಾಪಕ

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

5-

Mangaluru: ಸೆನ್‌ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

Mangaluru: ಸೈಬರ್‌ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ

Mangaluru: ಸೈಬರ್‌ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

5-

Mangaluru: ಸೆನ್‌ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.