ವನ್ಯಜೀವಿಗಳ ದಾಹ ನೀಗಿಸಲು ಸೌರಪಂಪ್
Team Udayavani, Feb 27, 2017, 12:51 PM IST
ಹುಣಸೂರು: ಜನವಸತಿ ಪ್ರದೇಶದಲ್ಲಿ ನೀರಿಲ್ಲದಿದ್ದರೆ ಪ್ರತಿಭಟನೆಯನ್ನಾದರೂ ಮಾಡಿ ನೀರನ್ನು ಪಡೆಯಬಹುದು. ಆದರೆ ಈಗಾಗಲೇ ಮಾನವ ಅತಿಕ್ರಮಣದಿಂದ ಆಹಾರ ಮತ್ತು ನಿವಾಸ ಸಮಸ್ಯೆ ಎದುರಿಸುತ್ತಿರುವ ವನ್ಯಜೀವಿಗಳು ನೀರಿಲ್ಲದಿದ್ದರೆ ಜನವಸತಿ ಪ್ರದೇಶಗಳ ಕಡೆಗೆ ಬರುವುದೊಂದೇ ಅವುಗಳಿಗಿರುವ ಮಾರ್ಗ.
ಇದರಿಂದ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಕಾರಣ ಗಳಲ್ಲೊಂದಾಗಿರುವ ಅರಣ್ಯದೊಳಗೆ ನೀರಿನ ಸಮಸ್ಯೆಯನ್ನು ನೀಗಿಸಲು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗೆ ಬೋರ್‌ವೆಲ್ ಕೊರೆಯಿಸಿ ಸೌರವಿದ್ಯುತ್ ಬಳಕೆಯ ಮೋಟಾರ್ ಪಂಪ್‌ನ್ನು ಅಳವಡಿಸಿ ಅರಣ್ಯ ಇಲಾಖೆ ವನ್ಯಜೀವಿಗಳಿಗೆ ನೀರು ಪೂರೈಸುತ್ತಿದೆ.
ಈ ವರ್ಷ ಮಳೆ ಕೊರತೆಯಿಂದಾಗಿ ನವೆಂಬರ್ ಆರಂಭದಲ್ಲೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ ವಲಯಗಳಲ್ಲಿ ನೀರು ಇಂಗಿಹೋಗಿ ವನ್ಯಜೀವಿಗಳಿಗೆ ನೀರಿನ ಕೊರತೆ ಎದುರಾಗಿತ್ತು. ಇದರಿಂದ ನàಈರಿಗಾಗಿ ವನ್ಯಜೀವಿಗಳು ಕಾಡಂಚಿನ ಗ್ರಾಮಗಳತ್ತ ಮುಖ ಮಾಡಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಅರಣ್ಯದೊಳಗೆ ಬೋರ್‌ವೆಲ್ ಕೊರೆಯಿಸಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿ ಮೋಟಾರ್‌ಗಳಿಂದ ನೀರಿನ ಮೂಲಗಳನ್ನು ತುಂಬಿಸುವ ಕೆಲಸ ಮಾಡುತ್ತಿದೆ.
ವೀರನಹೊಸಹಳ್ಳಿಯಲ್ಲಿ ಪ್ರಥಮ ಸೌರಪಂಪ್: ಪ್ರಾಯೋಗಿಕವಾಗಿ ಅಂತರಸಂತೆ ವಲಯದ ಟೈಗರ್ ಟ್ಯಾಂಕ್ ಜಿ.ಕೆ.ಕೆರೆ, ಹೊಸಕೆರೆಗೆ ನೀರು ತುಂಬಿಸಲಾಗಿದ್ದು, ಅದೇ ಮಾದರಿಯಲ್ಲಿ ವೀರನಹೊಸಹಳ್ಳಿಯ ಕೆರೆಯನ್ನೂ ತುಂಬಿಸಲಾಗಿದೆ. ಇದೀಗ ನಾಗರಹೊಳೆಯ ಕೆಲವು ಕೋರ್ ಏರಿಯಾ ಹೊರತು ಪಡಿಸಿದರೆ, ನೀರಿನ ಸಮಸ್ಯೆ ಎಲ್ಲೆಡೆ ಸಾಕಷ್ಟಿದೆ. ಇದನ್ನು ನೀಗಿಸಲು ಇಲಾಖೆ ಸೌರ ಪಂಪ್‌ಸೆಟ್ ಮೊರೆ ಹೋಗಿದ್ದು, ಈಗಾಗಲೆ ನಾಯಂಜಿಕಟ್ಟೆ ಬಳಿ ಮತ್ತೂಂದು ಸೌರ ಪಂಪ್‌ಸೆಟ್ ಅಳವಡಿಸಲಾಗುತ್ತಿದೆ.
ಎಲ್ಲ ವಲಯಗಳಲ್ಲೂ ಸೌರ ಪಂಪ್‌ಸೆಟ್ ಅಳವಡಿಸಲು ಇಲಾಖೆ ಮುಂದಾಗಿದೆ.ನಾಗರಹೊಳೆಯ ಹೆಬ್ಟಾಗಿಲು, ಅತೀ ಹೆಚ್ಚು ಒಣ ಪ್ರದೇಶವಾದ ವೀರನಹೊಸಹಳ್ಳಿ ವಲಯದಲ್ಲಿ ಸಾಕಷ್ಟು ಕೆರೆ ಕಟ್ಟೆಗಳು ಬತ್ತಿ ಹೋಗಿವೆ. 400 ಅಡಿಗೂ ಹೆಚ್ಚು ಕೊಳವೆ ಬಾವಿ ತೋಡಿದ್ದು, ಕಟ್ಟೆಯ ದಡದಲ್ಲಿ ರೈಲುಕಂಬಿ ಬಳಸಿ, ದೊಡ್ಡದಾದ ಸೌರ ಪ್ಯಾನಲ್ ಅಳವಡಿಸಿದ್ದು, ಮೊದಲ ಬಾರಿಗೆ ಎರೆಕಟ್ಟೆ ಪ್ರದೇಶದಲ್ಲಿ ಸೌರ ಪಂಪ್‌ಸೆಟ್ ಅಳವಡಿಸಿದ್ದು, ಗುರುವಾರದಿಂದ ಕಟ್ಟೆಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿದೆ.
ಈಗಾಗಲೆ ಎರೆಕಟ್ಟೆಯ ಹೂಳನ್ನೆತ್ತಿದ್ದು, ಬಿಸಿಲಿನ ಸಮಯದಲ್ಲಿ ಎರಡು ಇಂಚಿಗೂ ಹೆಚ್ಚು ನೀರು ಹರಿಯುತ್ತಿದೆ. ಇನ್ನು 15 ದಿನದಲ್ಲಿ ಕಟ್ಟೆ ತುಂಬಲಿದೆ, ಈ ಕಟ್ಟೆ ತುಂಬಿದ ನಂತರ ಹತ್ತಿರದ ಹಿತ್ತಲುಗುಂಡಿಕಟ್ಟೆಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸಲಾಗುವುದು, ಅಲ್ಲದೆ ಸುತ್ತಮುತ್ತ ಸ್ವಲ್ಪ ದೂರದಲ್ಲಿ ಗುಂಡಿ ತೋಡಿ, ಪೈಪ್ ಲೈನ್ ಅಳವಡಿಸಿ ಗುಂಡಿಗಳಿಗೂ ನೀರು ತುಂಬಿಸಿ ಪ್ರಾಣಿಗಳ ದಾಹ ಇಂಗಿಸುವ ಪ್ರಯತ್ನ ಇಲ್ಲಿನ ಅಧಿಕಾರಿಗಳದ್ದು, ಈಗಾಗಲೆ ನಾಗರಹೊಳೆ ಮುಖ್ಯರಸ್ತೆಯಲ್ಲಿನ ಮರಳುಕಟ್ಟೆಗೆ ಕಳೆದೆರಡು ತಿಂಗಳಿನಿಂದ ಖಾಸಗಿ ರೈತರ ಜಮೀನಿನ ಪಂಪ್‌ಸೆಟ್‌ನಿಂದ ನೀರು ತುಂಬಿಸಲಾಗುತ್ತಿದೆ.
ಲಕ್ಷ್ಮಣತೀರ್ಥ ಖಾಲಿ: ಉದ್ಯಾನದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಿಂದ ಈಗಾಗಲೆ ಜನರೇಟರ್ ಬಳಸಿ ಹಾಲುದೊಡ್ಡಿಕೊಳ, ಮಂಡಳ್ಳಿಕೆರೆ, ಪಾರದಕೊಳಕ್ಕೆ ನೀರು ತುಂಬಿಸಲಾಗಿದೆ. ಅಲ್ಲದೆ ಮೂರ್ಕಲ್ ಬೋರ್‌ವೆಲ್‌ನಿಂದ ಬಿದಿರುಕಟ್ಟೆ, ಚನ್ನಮ್ಮನಕಟ್ಟೆಗೂ ನೀರು ತುಂಬಿಸಿದ್ದು, ಈ ಬಾಗದಲ್ಲಿ ಸೌರ ಪಂಪ್‌ಸೆಟ್ ಅಳವಡಿಸುವ ಯೋಚನೆ ಇದೆ. ಇದೀಗ ನದಿಯಲ್ಲೂ ನೀರಿಲ್ಲ. ಹೀಗಾಗಿ ಸೌರ ಪಂಪ್‌ಸೆಟ್ ಅತ್ಯವಶ್ಯವಾಗಿದೆ. ರಾಜೇಗೌಡನಕಟ್ಟೆಯ ಕಾಂಕ್ರಿಟ್ ತೊಟ್ಟಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಮಧುಸೂದನ್ ತಿಳಿಸಿದರು.
ಹುಣಸೂರು, ಆನೆಚೌಕೂರು ವಲಯಗಳ ಬಹುತೇಕ ಕೆರೆ- ಕಟ್ಟೆಗಳಲ್ಲೂ ನೀರಿಲ್ಲ, ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ನೀರಿಗೆ ತೊಂದರೆ ಇರುವೆಡೆಗಳಲ್ಲಿ ಬೋರ್‌ವೆಲ್ ಕೊರೆಯಿಸಿ ಸೌರಪಂಪ್ ಅಳವಡಿಸಿ ನೀರು ತುಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೇಗ ಮಳೆ ಆರಂಭವಾಗದಿದ್ದಲ್ಲಿ ಬೋರ್ ವೆಲ್ ನಲ್ಲಿಯೂ ನೀರು ಕಡಿಮೆಯಾಗಲಿದೆ.
-ಪ್ರಸನ್ನಕುಮಾರ್, ಎಸಿಎಫ್
* ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.