ಹಾಡಹಗಲೇ ಗಟಾರದ ತಾಜ್ಯ ಸ್ವತ್ಛತೆ ದುರ್ನಾತಕ್ಕೆ ಸಾರ್ವಜನಿಕರು ಕಂಗಾಲು
Team Udayavani, Feb 27, 2017, 3:36 PM IST
ಕುಂದಾಪುರ: ಕುಂದಾಪುರ ಜನ ನಿಬಿಡ ಪ್ರದೇಶವಾದ ಬಸ್ಸು ನಿಲ್ದಾಣದ ಬಳಿ ಹಾಡುಹಗಲೇ ಗಟಾರದ ತಾಜ್ಯವನ್ನು ವಾಹನದಲ್ಲಿ ಸಂಗ್ರಹಿಸಲು ಹೊರಟ ಕುಂದಾಪುರ ಪುರಸಭೆಯ ಕ್ರಮವನ್ನು ಸಾರ್ವಜನಿಕರು ವಿರೋಧಿಸಿದ್ದಾರೆ. ಈ ಸಂದರ್ಭದಲ್ಲಿ ಅಸಹನೀಯ ವಾಸನೆಯಿಂದಾಗಿ ಮೂಗು ಮುಚ್ಚಿ ನಡೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಬುಧವಾರ ನಡು ಮಧ್ಯಾಹ್ನದ ಸಮಯ ಪುರಸಭೆಯ ಮಲಿನ ತಾಜ್ಯ ಸಂಗ್ರಹಿಸುವ ವಾಹನಕ್ಕೆ ಹೊಸ ಬಸ್ಸು ನಿಲ್ದಾಣದ ಬಳಿ ಹಲವು ಹೊಟೇಲ್, ಮನೆಗಳಿಂದ ಸಂಗ್ರಹವಾಗುವ ಗಟಾರದಿಂದ ತಾಜ್ಯ ವನ್ನು ಸಂಗ್ರಹಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹಬ್ಬಿದ ದುರ್ನಾತವು ಪರಿಸರದಲ್ಲಿ ಅಸಹನೀಯ ವಾಸನೆಯನ್ನು ಉಂಟು ಮಾಡಿದ್ದು ಕೆಲ ಗಂಟೆಗಳ ಕಾಲ ಸಾರ್ವಜನಿಕರು ಕಂಗಲಾಗಿ ಹೋಗಿದ್ದರು.
ಹೆಚ್ಚಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಮಾತ್ರ ತಾಜ್ಯವನ್ನು ಸಗ್ರಹಿಸುವುದು ವಾಡಿಕೆ ಆದರೆ ಇದು ತನಗೆ ಸಂಬಂಧವೇ ಇಲ್ಲದಂತೆ ಹಾಡು ಹಗಲೇ ತಾಜ್ಯವನ್ನು ಸಂಗ್ರಹಿಸಿ ಅಸಹನೀಯ ದುರ್ನಾತಕ್ಕೆ ಕಾರಣವಾದ ಪುರಸಭೆಯ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.