ರಸ್ತೆ ಅತಿಕ್ರಮಣ : ವರದಿ ನೀಡಲು ಜಿ.ಪಂ. ಸೂಚನೆ
Team Udayavani, Feb 27, 2017, 5:09 PM IST
ಕಬಕ : ಇಡ್ಕಿದು ಗ್ರಾಮದ ಸೂರ್ಯ ಜಂಕ್ಷನ್‌ನಿಂದ ಬಂಗೇರಕೋಡಿಗೆ ಹೋಗುವ ರಸ್ತೆಯನ್ನು ಖಾಸಗಿ ವ್ಯಕ್ತಿ ಅತಿಕ್ರಮಿಸಿ ಪರವಾನಿಗೆ ಪಡೆಯದೆ ವ್ಯಾಪಾರೀಕರಣದ ಕಟ್ಟಡವನ್ನು ವಿಸ್ತರಿಸಿಯೂ ಕಟ್ಟುತ್ತಿರುವ ಕುರಿತು ನ್ಯಾಯವಾದಿ ಬೆಟ್ಟ ಈಶ್ವರ ಭಟ್ ನೀಡಿದ ದೂರನ್ನು ಪರಿಶೀಲಿಸಿ ವರದಿ ನೀಡುವಂತೆ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಇಡ್ಕಿದು ಗ್ರಾ.ಪಂ. ಪಿಡಿಒಗೆ ಸೂಚಿಸಿದ್ದಾರೆ.
ಗ್ರಾಮದ ಗೋಪಾಲ ಸಪಲ್ಯ ಎಂಬವರು ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ಕೆಲಸ ಮಾಡಿಸುತ್ತಿದ್ದಾರೆ. ಗ್ರಾ.ಪಂ. ಗೆ ಆಕ್ಷೇಪ ಸಲ್ಲಿಸಿದಾಗ ಒಮ್ಮೆ ಕಟ್ಟಡ ಕೆಲಸ ನಿಲ್ಲಿಸಿ ಎಂದು ಆದೇಶ ನೀಡಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಕಟ್ಟಡ ಕಾಮಗಾರಿ ಮುಂದುವರಿಸಿದ್ದಾರೆ.
ಈ ಅಂಗಡಿಗೆ ವ್ಯಾಪಾರಕ್ಕಾಗಿ ಬರುವವರು ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದರಿಂದ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅನನುಕೂಲವಾಗುತ್ತಿದೆ. ಗ್ರಾ.ಪಂ. ಕೂಡ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾಮಗಾರಿಯನ್ನು ಸ್ಥಗಿತಗೊಳಿಸಿ ರಸ್ತೆಗೆ ಆಗಿರುವ ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ಬೆಟ್ಟ ಈಶ್ವರ ಭಟ್ ದೂರು ನೀಡಿದ್ದರು.
ದೂರಿಗೆ ಪ್ರತ್ಯುತ್ತರವಾಗಿ ಪರಿಶೀಲನೆ ನಡೆಸಿ ವರದಿಯನ್ನು ಕಚೇರಿಗೆ ಸಲ್ಲಿಸುವಂತೆ ಜಿ.ಪಂ. ಸಿಇಒ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.