ಸಮಾಜಮುಖೀ ಕಾರ್ಯಕ್ಕೆ ಪ್ರೋತ್ಸಾಹ ಅಗತ್ಯ


Team Udayavani, Feb 27, 2017, 5:31 PM IST

2602kpk3.jpg

ಪುತ್ತೂರು : ಸಂಘಟನೆಗಳು ಸಮಾಜಮುಖೀ ಚಟುವಟಿಕೆಗಳಲ್ಲಿ ತೊಡಗಿ ರುವವರಿಗೆ ಪ್ರೋತ್ಸಾಹ ನೀಡುವುದು ಉತ್ತಮ ಕಾರ್ಯ. ಈ ನಿಟ್ಟಿನಲ್ಲಿ ಪ್ರತಿಭೆಗಳನ್ನು, ಸಾಧಕರನ್ನು ಗುರುತಿಸುವ ಯುವ ಬಂಟರ ಸಂಘದ ಪ್ರಯತ್ನ ಪ್ರಶಂಸನಿಯ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ತಾ| ಯುವ ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ತಾ| ಸಮಿತಿ, ಬಂಟರ ಸಂಘ ಮಾರ್ಗದರ್ಶನದಲ್ಲಿ ರವಿವಾರ ಕೊಂಬೆಟ್ಟು ಬಂಟರ ಭವನದಲ್ಲಿ ನಡೆದ ಯುವ ಬಂಟರ ದಿನಾಚರಣೆ, ಗಣಪತಿಹೋಮ, ಸತ್ಯನಾರಾಯಣ ಪೂಜೆಯಲ್ಲಿ ಅವರು ಮಾತನಾಡಿದರು. ಸಮಾಜಕೋಸ್ಕರ ಸಂಘಟಿತರಾಗುವ ಮನೋಭಾವ ನಮ್ಮಲ್ಲಿ ಮೂಡಿದಾಗ, ಸಂಘಟನೆಗಳಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ಯುವ ಬಂಟರ ಸಂಘ ಸಾಧಕರನ್ನು, ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿ ಸುತ್ತಿರುವ ಕಾರ್ಯ ನಿರಂತರವಾಗಿ ಸಾಗಲಿ ಎಂದು ಅವರು ಹೇಳಿದರು.

ಸಹಕಾರ ಅಗತ್ಯ
ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಮಾತನಾಡಿ, ಬಂಟರನ್ನು ಒಂದೆಡೆ ಸೇರಿಸುವ ಉದ್ದೇಶದೊಂದಿಗೆ ಮಾತೃಸಂಘ ಯೋಜನೆ ರೂಪಿಸುತ್ತಿದ್ದು, ಅದಕ್ಕೆ ಬಂಟ ಸಮುದಾಯದ ಪ್ರತಿಯೋರ್ವರು ಸಹಕಾರ ನೀಡಬೇಕು. ಬಂಟರ ಸಂಘದ ಕಾರ್ಯಕ್ರಮದಲ್ಲಿ ಪ್ರತಿಯೊರ್ವರು ಭಾಗಿಗಳಾಗಬೇಕು ಎಂದು ಅವರು ಹೇಳಿದರು. ಪ್ರತಿಭಾ ಪುರಸ್ಕಾರಗೈದ ತಾಲೂಕು ಬಂಟರ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ, ಸಮಾಜ ಬಾಂಧವರನ್ನು ಒಟ್ಟುಗೂಡಿಸುವ ಸಂಕಲ್ಪದೊಂದಿಗೆ ಆರಂಭಗೊಂಡ ಯುವ ಬಂಟರ ವೇದಿಕೆ ಸಮಾಜ ಗುರುತಿಸುವ ಕಾಯಕದಲ್ಲಿ ತೊಡಗಿದೆ. ಸಂಘಟಿತರಾಗುವ ಜತೆಗೆ ನಾಯಕತ್ವ ಗುಣಗಳನ್ನು ಬೆಳೆಸುವ ಕಾರ್ಯ ಸಂಘಟನೆಯ ಮೂಲಕ ಆಗಬೇಕು ಎಂದು ಅವರು ಹೇಳಿದರು.

ಎಲ್ಲರು ಪಾಲ್ಗೊಳ್ಳಿ 
ಕೋಡಿಂಬಾಡಿ ರೈ ಎಸ್ಟೇಟ್‌ನ ಉದ್ಯಮಿ ಅಶೋಕ್‌ ಕುಮಾರ್‌ ರೈ ಮಾತ ನಾಡಿ, ಬಂಟ ಸಮುದಾಯ ಸಮಾಜ ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿದೆ. ಎಲ್ಲರೊಂದಿಗೆ ಜತೆಯಾಗಿ ಸಾಗುವುದರಿಂದ ಸಮುದಾಯದ ಮೇಲಿನ ಗೌರವವೂ ವೃದ್ಧಿಯಾಗುತ್ತದೆ ಎಂದ ಅವರು, ಯುವ ಬಂಟರ ಸಂಘ ಬಲಿಷ್ಠ ಸಂಘಟನೆಯಾಗಿ ರೂಪುಗೊಳ್ಳಲು ಬಂಟ ಸಮುದಾಯ ಪ್ರತಿಯೊಬ್ಬರ ಪಾತ್ರ ಬಹುಮುಖ್ಯವಾದದು. ಸಂಘಟನೆಯ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಅವರು ಹೇಳಿದರು.

ರಾಮನಗರ ಜಿಲ್ಲಾ ಜಯಕರ್ನಾಟಕ ಉಪಾಧ್ಯಕ್ಷ ಭಾಗೆÂàಶ್‌ ರೈ ಕೆಯ್ಯೂರು ಶುಭ ಹಾರೈಸಿದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಮಠಂತಬೆಟ್ಟು, ಕೋಶಾಧಿಕಾರಿ ಶಶಿಕುಮಾರ್‌ ರೈ ಬಾಲೊÂಟ್ಟು, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್‌ ರೈ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಕುಮುದಾ ಎಲ್‌.ಎನ್‌. ಶೆಟ್ಟಿ, ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪುನೀತ್‌ ರೈ ಏಳ್ನಾಡುಗುತ್ತು, ಯುವ ಬಂಟರ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಸಾರಕರೆ, ಜತೆ ಕಾರ್ಯದರ್ಶಿ ಮಲ್ಲಿಕಾ ಪಕ್ಕಳ, ನೂತನ ಅಧ್ಯಕ್ಷ ಕುಂಟುಪುಣಿಗುತ್ತು ರವೀಂದ್ರ ರೈ ನೆಕ್ಕಿಲು, ಕೋಶಾಧಿಕಾರಿ ಎನ್‌. ಸದಾಶಿವ ಶೆಟ್ಟಿ ಮಾರಂಗ, ಜತೆ ಕಾರ್ಯದರ್ಶಿ ಪ್ರಶಾಂತಿ ಎಸ್‌. ರೈ ಮೊದಲಾದವರು ಉಪಸ್ಥಿತರಿದ್ದರು. ಯುವ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಂಬಳತ್ತಡ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಲೋಕನಾಥ ಶೆಟ್ಟಿ ಪೆರುವಾಜೆ ವಂದಿಸಿದರು.  ಸಹ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸಬಿತಾ ಭಂಡಾರಿ ಮತ್ತು ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಪ್ರಸಾದ್‌ ಆಳ್ವ ನಿರೂಪಿಸಿದರು.

ಯುವ ಬಂಟರ ಸಂಘದ ಪದಗ್ರಹಣ 
ಈ ಸಂದರ್ಭ ಯುವ ಬಂಟರ ಸಂಘದ ಪದಗ್ರಹಣ ನಡೆಯಿತು. ನೂತನ ಅಧ್ಯಕ್ಷರಾಗಿ ಕುಂಟುಪುಣಿಗುತ್ತು ರವೀಂದ್ರ ರೈ ನೆಕ್ಕಿಲು, ಪ್ರಧಾನ ಕಾರ್ಯದರ್ಶಿಯಾಗಿ ಲೋಕನಾಥ ಶೆಟ್ಟಿ ಪೆರುವಾಜೆ, ಕೋಶಾಧಿಕಾರಿಯಾಗಿ ಎನ್‌. ಸದಾಶಿವ ಶೆಟ್ಟಿ ಮಾರಂಗ, ಜತೆ ಕಾರ್ಯದರ್ಶಿಯಾಗಿ ಪ್ರಶಾಂತಿ ಎಸ್‌ ರೈ ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಮಂಗಳೂರು ಬಂಟರ ಯಾನೆ ನಾಡವರ ಸಂಘದ ಜತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಕಾವು ಪ್ರಮಾಣ ವಚನ ಬೋಧಿಸಿದರು.

ಪ್ರತಿಭಾ ಪುರಸ್ಕಾರ
ಬಂಟ ಸಮುದಾಯದ ಯುವ ಸಾಧಕರಾದ ಸಿಂಚನಾ ರೈ (ಕರಾಟೆ), ಅಜಿತ್‌ (ಕ್ರೀಡೆ), ಪವನ್‌ ರೈ (ಕರಾಟೆ), ಜೆ. ನವನ್‌ ರೈ (ಕರಾಟೆ), ಪ್ರತೀಕ್‌Ò ರೈ (ಯೋಗ), ಆಕರ್ಷ ಶೆಟ್ಟಿ (ವಿಜ್ಞಾನ ಮಾದರಿ)ಶಶಾಂಕ್‌ (ಕರಾಟೆ), ಭಾಗ್ಯ (ನಾಟಕ), ನಿಶ್ಚಿತ್‌ ಎಸ್‌ ರೈ (ಕರಾಟೆ), ಸಿಂಚನಾ ಎಲ್‌. ಶೆಟ್ಟಿ (ಕಬಡ್ಡಿ), ಧನ್ವಿ ಜೆ. ರೈ ( ಈಜು), ಪ್ರಣಮ್ಯಾ ಶೆಟ್ಟಿ  (ಕ್ರೀಡೆ), ದಿಶಾಂತ್‌ ಶೆಟ್ಟಿ (ಕ್ರೀಡೆ), ವಿನಯ ರೈ (ಕರಾಟೆ), ಸೂಕ್ತ ರೈ (ರ್ಯಾಲಿ) ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ
ಬೆಳಗ್ಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಟರಿ ನ್ಯಾಯವಾದಿ ಎ. ಅರುಣಾ ದಿನಕರ ರೈ ಉದ್ಘಾಟಿಸಿದರು. ಅನಂತರ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಬಳಗದಿಂದ ಯಕ್ಷಗಾನ ವೈಭವ ನಡೆಯಿತು. ಅನಂತರ ಯುವ ಪ್ರತಿಭೆಗಳಿಂದ ವಿವಿಧ ನೃತ್ಯ ಪ್ರದರ್ಶನಗಳು ಜರಗಿದವು.

ಸಮ್ಮಾನ, ಅಭಿನಂದನೆ
ಈ ಸಂದರ್ಭ ವಿಶ್ರಾಂತ ಪ್ರಾಂಶು ಪಾಲ ಕೊಣಾಲುಗುತ್ತು ವಿಟuಲ್‌ ರೈ, ಉದ್ಯಮಿ ವಿಜಯ ಕುಮಾರ್‌ ರೈ, ಪುತ್ತೂರು ಸಂಚಾರ ಠಾಣಾ ಸಬ್‌ ಇನ್‌ಸ್ಪೆಕ್ಟರ್‌ ವಿಟuಲ ಶೆಟ್ಟಿ ಪೆರುವಾಜೆ, ಯುವ ಉದ್ಯಮಿ ಸುಧೀನ್‌ ಎಸ್‌. ರೈ ನೆಲೊÂಟ್ಟು ಅವರನ್ನು ಸಮ್ಮಾನಿಸಲಾಯಿತು. ಪುತ್ತೂರು ಪುಡಾ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ ಮತ್ತು ಎಲ್‌ಐಸಿ ಸಿಒಟಿ ಕೆದಂಬಾಡಿಗುತ್ತು ರತ್ನಾಕರ ರೈ ಅವರನ್ನು ಅಭಿನಂದಿಸಲಾಯಿತು.

ಟಾಪ್ ನ್ಯೂಸ್

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.