ಗೋವುಗಳ ರಕ್ಷಣೆ: ಸಮರ್ಪಕ ಕಾನೂನು ಜಾರಿಗೆ ಆಗ್ರಹಿಸಿ “ಗೋ ಸತ್ಯಾಗ್ರಹ’
Team Udayavani, Feb 27, 2017, 5:36 PM IST
ಪುತ್ತೂರು : ಗೋಮಾತೆ ವಿಚಾರದಲ್ಲಿ ಹಿಂದೂಗಳು ಸೂತಕದ ಛಾಯೆ ಅನುಭವಿಸುತ್ತಿದ್ದಾರೆ. ಸರಕಾರಗಳು ಗೋವುಗಳನ್ನು ಕಾಣುವ ರೀತಿಯಲ್ಲಿ ತ್ವರಿತ ಬದಲಾ ವಣೆ ಕಾಣಬೇಕು. ಗೋ ರಕ್ಷಣೆಯ ಕುರಿತಂತೆ ಮಠಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ಬಿಟ್ಟುಕೊಡಬೇಕು ಎಂದು ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ರಾಜ್ಯ ಗೋಶಾಲೆಗಳ ಒಕ್ಕೂಟವು ವಿವಿಧ ಸಂಘಟನೆಗಳ ಸಹಯೋಗದಲ್ಲಿ ರಾಜ್ಯಾ ದ್ಯಂತ ಸಂತರ ನೇತೃತ್ವದಲ್ಲಿ ನಡೆಸುತ್ತಿರುವ ಗೋ ಸತ್ಯಾಗ್ರಹದ ಅಂಗವಾಗಿ ರವಿವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ವಿಭಾಗ ಮಟ್ಟದ ಸಾರ್ವಜನಿಕ ಗೋ ಸತ್ಯಾಗ್ರಹದಲ್ಲಿ ಆಶೀರ್ವಚನ ನೀಡಿದರು.
ಹಿಂದೂ ಸಂಘಟನೆಗಳು ನಡೆಸುತ್ತಿರುವ ಸತ್ಯಾಗ್ರಹ ಹೋರಾಟ ಪ್ರಧಾನಿಯವರಿಗೆ ತಲುಪಿ ಗೋ ರಕ್ಷಣೆಗಾಗಿ ಸಮರ್ಪಕ ಕಾನೂನು ಜಾರಿಯಾಗಬೇಕು. ಗೋ ರಕ್ಷಣೆಯ ಕುರಿತು ಸರಕಾರ ಮಠಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು.
ಸತ್ಯದ ಆಗ್ರಹ
ದಿಕ್ಸೂಚಿ ಭಾಷಣ ಮಾಡಿದ ವಿಹಿಂಪ ಜಿಲ್ಲಾ ಸತ್ಸಂಗ ಪ್ರಮುಖ್ ಕಶೆಕೋಡಿ ಸೂರ್ಯನಾರಾಯಣ ಭಟ್, ಪವಿತ್ರ ಗೋವಿಗೆ ಅಪಚಾರ ಮಾಡುವ ಮೂಲಕ ಸಮಾಜದ ಸ್ವಾಸ್ಥ Âವನ್ನು ಕದಡುವವರ ವಿರುದ್ಧ ಈ ಸತ್ಯಾಗ್ರಹ ನಡೆಯುತ್ತಿದೆ. ಇದು ನಿಜಕ್ಕೂ ಸತ್ಯಕ್ಕೆ ಮಾಡುವ ಆಗ್ರಹ ವಾಗಿರುವು ದರಿಂದ ಸರಕಾರ ಸ್ಪಂದಿಸಿ ಗೋ ರಕ್ಷಣೆಗಾಗಿ ಸೂಕ್ತ ಕಾನೂನು ತರಬೇಕು ಎಂದು ಆಗ್ರಹಿಸಿದರು. ಇತಿಹಾಸದಿಂದಲೇ ಪ್ರತಿಯೊಂದು ವಂಶವೂ ಬೆಳೆದು ಬಂದಿರುವುದು ಗೋವಿನ ಆರಾಧಾನೆ, ಸಹಕಾರದಿಂದ. ಇದನ್ನು ಪ್ರತಿಯೊಬ್ಬರೂ ಅರಿತು ಕೊಳ್ಳಬೇಕು ಎಂದರು ಹೇಳಿದರು.
ಬೇಡಿಕೆ ಸತ್ಯಾಗ್ರಹ
ಪ್ರಾಸ್ತಾವಿಕವಾಗಿ ಮಾತನಾಡಿದ ವಿಹಿಂಪ ಪ್ರಾಂತ ಗೋ ರಕ್ಷಾ ಪ್ರಮುಖ್ ದಿನೇಶ್ ಪೈ, ರಾಷ್ಟ್ರಮಟ್ಟದಲ್ಲಿ ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ಬರಬೇಕು, ಅಕ್ರಮ ಗೋ ಸಾಗಾಟದಲ್ಲಿ ಗೋವುಗಳಿಗೆ ಹಿಂಸೆ ನೀಡುವವರಿಗೆ 5 ವರ್ಷ ಶಿಕ್ಷೆ, 50 ಸಾವಿರ ರೂ.ಗಿಂತ ಹೆಚ್ಚು ದಂಡ, ವಾಹನ ಮುಟ್ಟುಗೋಲು ಕ್ರಮ ಕೈಗೊಳ್ಳಬೇಕು, ಗೋ ಹಂತಕರಿಗೆ 7 ವರ್ಷ ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಬೇಕು, ಗೋಮಾಳ ಭೂಮಿಯನ್ನು ಅಳತೆ ಮಾಡಿ ಗೋವುಗಳಿಗಾಗಿಯೇ ಮೀಸಲಿಡಬೇಕು ಮೊದಲಾದ ಬೇಡಿಕೆಗಳೊಂದಿಗೆ 30 ಜಿಲ್ಲೆ ಗಳಲ್ಲಿ ಸತ್ಯಾಗ್ರಹ ನಡೆಯುತ್ತಿದೆ ಎಂದರು.
ರಕ್ಷಣೆಯ ನೈತಿಕತೆ ಇದೆ
ಹಿಂದೂ ಧರ್ಮಕ್ಕೆ ಶಕ್ತಿ ಬರಬೇಕಾದರೆ ಗೋವುಗಳು ಸಂತುಷ್ಟವಾಗಿರಬೇಕು. ಇದು ಹಿಂದೂ ಸಮಾಜದ ಜವಾಬ್ದಾರಿಯೂ ಹೌದು. ಸಂವಿಧಾನಕ್ಕೆ ತಿದ್ದುಪಡಿ ತಂದಾದರೂ ಗೋಹತ್ಯೆ ನಿಷೇಧಿಸಬೇಕು. ಈಗಿನ ಪ್ರಧಾನಿಯವರಿಗೆ ಆ ಶಕ್ತಿ ಇದೆ ಎಂದು ಹೇಳಿದ ದಿನೇಶ್ ಪೈ, ಗೋವುಗಳ ರಕ್ಷಣೆ ಮಾಡುವುದನ್ನು ನೈತಿಕ ಪೊಲೀಸ್‌ಗಿರಿ ಎನ್ನುತ್ತಾರೆ. ನಮಗೆ ರಕ್ಷಣೆಯ ನೈತಿಕತೆ ಇದೆ. ಹಟ್ಟಿಯಿಂದ ಕದ್ದು ಕೊಂಡೊಯ್ಯವುದನ್ನು ತಡೆಯುವ ಅಧಿಕಾರ ನಮಗಿದೆ ಎಂದು ಸಮರ್ಥಿಸಿಕೊಂಡರು.
ವಿಹಿಂಪ ಜಿಲ್ಲಾ ಸಹ ಸಂಚಾಲಕ ಗೋವರ್ಧನ್ ವಿಟ್ಲ ಸ್ವಾಗತಿಸಿ, ಸಂಘಟನೆಯ ಮುಖಂಡ ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.
ಗೋವಿಗೆ ಪೂಜೆ
ಕಾರ್ಯಕ್ರಮದ ಆರಂಭದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು. ವಿಹಿಂಪ, ಬಜರಂಗದಳ, ಹಿಂಜಾವೇ, ಗೋಪರಿವಾರ, ಜಿಲ್ಲಾ ಗೋ ಆಂದೋಲನ ಸಮಿತಿ, ಪುತ್ತೂರು ಬಿಜೆಪಿ, ಸನಾತನ ಸಂಸ್ಥೆ, ಪುತ್ತೂರು ಧರ್ಮಜಾಗೃತಿ ಸಮಿತಿ ಹಾಗೂ ವಿವಿಧ ಸಂಘಟನೆಗಳು ಜತೆಗೂಡಿ ನಡೆಸಿದ ಗೋ ಸತ್ಯಾಗ್ರಹದಲ್ಲಿ 500ಕ್ಕೂ ಮಿಕ್ಕಿ ಮಂದಿ ಪಾಲ್ಗೊಂಡು ಬೆಳಗ್ಗಿನಿಂದ ಸಂಜೆ ತನಕ ಉಪವಾಸ ಸತ್ಯಾಗ್ರಹ ನಡೆಸಿದರು.
ಬಿಜೆಪಿ ಪಕ್ಷ ಹಾಗೂ ಸಂಘಟನೆಗಳ ಪ್ರಮುಖರಾದ ವಿದ್ಯಾಗೌರಿ, ಕೆ.ಟಿ. ಶೈಲಜಾ ಭಟ್, ಹರೀಶ್ ಪೂಂಜಾ, ಪದ್ಮನಾಭ ಕೊಟ್ಟಾರಿ, ಪ್ರಭಾಕರ ಬಂಗೇರ, ಗೋಪಾಲಕೃಷ್ಣ ಹೇರಳೆ, ಜೀವಂಧರ್ ಜೈನ್, ಪುಯಿಲ ಕೇಶವ ಗೌಡ, ರಾಜೇಶ್ ಬನ್ನೂರು, ಚನಿಲ ತಿಮ್ಮಪ್ಪ ಶೆಟ್ಟಿ, ಚಂದ್ರಶೇಖರ ರಾವ್ ಬಪ್ಪಳಿಗೆ, ಬಜರಂಗದಳ ದಕ್ಷಿಣ ಪ್ರಾಂತ ಗೋರûಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಇ. ಶಿವಪ್ರಸಾದ್, ಸುನೀಲ್ ಕುಮಾರ್ ದಡ್ಡು, ಶಂಭು ಭಟ್, ಅನಿಲ್ ತೆಂಕಿಲ, ಸೀತಾರಾಮ ಗೌಡ ಪೊಸವಳಿಕೆ, ಕೃಷ್ಣ ಪ್ರಸಾದ್ ಮಡ್ತಿಲ, ಮಿತ್ತೂರು ಸುರೇಶ್ ಭಟ್, ಜಯರಾಮ ಪೂಜಾರಿ ಬಡಾವು, ನ್ಯಾಯವಾದಿಗಳಾದ ಜಯಾನಂದ, ಮಾಧವ ಪೂಜಾರಿ, ಹರೀಶ್ ನಾೖಕ್ ಮಾಲೊ¤ಟ್ಟು, ಕೋಲ್ಪೆಗುತ್ತು ರಾಜಾರಾಮ ಶೆಟ್ಟಿ, ಭಾಸ್ಕರ ಧರ್ಮಸ್ಥಳ, ಬೆಟ್ಟ ಜನಾರ್ದನ, , ಶ್ರೀಧರ್ ತೆಂಕಿಲ, ರವಿ ಇಳಂತಿಲ, ಶಿವಪ್ರಸಾದ್, ಆನಂದ ಬಂಟ್ವಾಳ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡರು.
ಇಚ್ಛಾಶಕ್ತಿ ಬೇಕು
ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಎಲ್ಲ ಪ್ರಯತ್ನ ನಡೆಸಿತ್ತು. ಆದರೆ ಬಳಿಕ ಬಂದ ಸರಕಾರ ಅದನ್ನು ನಿರಾಕರಿಸಿತು. ರಾಜ್ಯ ಸರಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಕಾನೂನು ಜಾರಿಗೆ ತರಲು ಸಾಧ್ಯವಿದೆ ಎಂದರು. ವಿಚಾರವನ್ನು ಕೇಂದ್ರ ಸರಕಾರರದ ಗಮನಕ್ಕೆ ತರಲಿದ್ದು, 5 ವರ್ಷದ ಒಳಗಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದೇ ಬರುತ್ತದೆ ಎಂದು ಹೇಳಿದರು. ಶಾಸಕ ಎಸ್. ಅಂಗಾರ, ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧದ ಕುರಿತು ಪ್ರಸ್ತಾಪಿಸಲಿದ್ದೇನೆ ಎಂದರು.
ಮನವಿ
ಗೋ ಹತ್ಯಾ ನಿಷೇಧ ಕಾನೂನು ಸಹಿತ ಗೋ ರಕ್ಷಣೆಗಾಗಿ ವಿವಿಧ ಬೇಡಿಕೆಗಳ ಮನವಿಯನ್ನು ಕೇಂದ್ರ ಸರಕಾರಕ್ಕೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ರಾಜ್ಯ ಸರಕಾರಕ್ಕೆ ಸುಳ್ಯ ಶಾಸಕ ಎಸ್. ಅಂಗಾರ ಅವರ ಮೂಲಕ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ನೀಡಲಾಯಿತು. ವಿಹಿಂಪ ಜಿಲ್ಲಾ ಸಹ ಕಾರ್ಯದರ್ಶಿ ಡಿ.ಎಸ್. ಸತೀಶ್ ಮನವಿ ಓದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.