ಕೊನೆಯಲ್ಲಿ ಕಳೆಯೋ ದಿನಗಳು, ಕೊನೆ ತನಕ ಜೊತೆಯಲ್ಲೇ…
Team Udayavani, Feb 28, 2017, 3:50 AM IST
ಎಲ್ಲರೂ ಜೊತೆ ಜೊತೆಯಾಗಿ ಇದ್ದ ದಿನ ಮರೆಯಾಗೋ ಕಾಲ ಹತ್ತಿರ ಬರಿ¤ದೆ. ಮುಂದೆ ಸಿಗೋ ಫ್ರೆಂಡ್ಸ್ ಬಗ್ಗೆ ಕಲ್ಪನೆ ಕೂಡಾ ಇಲ್ಲ. ಹಿಂದೆ ಸಿಕ್ಕಿರೋ ಫ್ರೆಂಡ್ಸ್‌ಗಳನ್ನ ಬಿಟ್ಟು ಹೋಗೋಕೆ ಮನಸ್ಸಿಲ್ಲ. ನೆನಪಿನ ದೋಣಿಯ ಪಯಣಿಗರು ನಾವು.. ನೆನಪನ್ನೇ ಹೊತ್ತು ಸಾಗೋಣ…
ಇನ್ನೇನು ಜೊತೆಯಾಗಿ ಹೆಚ್ಚಂದ್ರೆ ಮೂರು ತಿಂಗಳು ಇರ್ತೇವೆ, ಆಮೇಲೆ ನಾವೆಲ್ಲೋ, ನೀವೆಲ್ಲೋ ಅನ್ನೋ ಮಾತುಗಳೇ ನನ್ನ ಫ್ರೆಂಡ್ಸ್ ಬಾಯಲ್ಲಿ ಕೇಳಿಬರುತ್ತಿವೆ. ಈ ಮಾತುಗಳು ಕಿವಿಮೇಲೆ ಬಿದ್ದಾಗ, ಆಯ್ಯೋ ಕಣ್ಣು ಮುಚ್ಚಿ ತೆರೆಯೋ ಹೊತ್ತಿಗೆ ಮೂರು ವರುಷ,ಮೂರು ತಿಂಗಳು ಎಂಬಂತೆ ಕಳೆದು ಹೋಯಿತಲ್ಲಾ ಅನ್ಸುತ್ತೆ. ಯಾರನ್ನಾದ್ರೂ ಬೈತಿದ್ರೂ, ಇನ್ನು ಮೂರು ತಿಂಗಳು ಬೈತೀರ. ಆಮೇಲೆ ಯಾರಿಗೆ ಬೈತೀರಿ ಅಂತ ಬೈಯ್ಯೋರ ಬಾುಯನ್ನೂ ಮುಚ್ಚಿಸಿಬಿಡ್ತೇವೆ.
ಡಿಗ್ರಿ ಓದೋವಾಗ ಮಾಡೋ ಎಂಜಾಯ್‌ಮೆಂಟ್, ಪಿ.ಜಿ. ದಿನಗಳಲ್ಲಿ ಇರೋದಿಲ್ಲ. ಪ್ರತೀ ದಿನದಲ್ಲಿ ಒಂದು ಕ್ಲಾಸಿಗಾದ್ರೂ ಬಂಕ್ ಹಾಕಿ ಬೈಕ್ ಹಿಡ್ಕೊಂಡು ಸುತ್ತಾಡೋ ತರೆಲ ಹುಡುಗ್ರು, ಪ್ರತೀ ದಿನ ಕ್ಲಾಸಲ್ಲೇ ಕೂರೋ ಗಾಂಧಿ ಪೀಸ್‌ಗಳು, ಆ ಕಡೆ, ಈ ಕಡೆ ಎರಡ್ರಲ್ಲೂ ಸೇರೋ ಮಧ್ಯವರ್ತಿಗಳು… ಇವೆÅಲ್ಲಾ ಇನ್ನು ಎಲ್ಲೆಲ್ಲಿಗೆ ಹೋಗ್ತಾರೋ… ನಂತ್ರ ಎಲ್ಲಿ ಸಿಗ್ತಾರೋ ಒಂದೂ ಗೊತ್ತಿಲ್ಲ.
ಕೊನೆಯ ದಿನಗಳು ಬರ್ತಾ ಇದ್ದ ಹಾಗೆ ಡಿಗ್ರಿ ಲಾಸ್ಟ್ ಇಯರ್‌ಗೆ ಒಂದಷ್ಟು ಜಾಸ್ತಿ ದಿನಗಳು ಇರಾºರ್ದಿತ್ತಾ ಅನ್ಸುತ್ತೆ. ಕಾಲೇಜ್‌ಗೆ ಸೇರಿದ ಮೊದಲ ವರ್ಷದಿಂದ ಪರಿಚಯವಾಗೋ ಸ್ನೇಹ ಸಂಬಂಧಗಳು ಕೊನೆ ವರ್ಷ ಮುಗಿಯೋವಾಗ ಸಾಗರದಂತೆ ಹಬ್ಬಿಕೊಂಡಿರುತ್ತೆ. ಕ್ಲಾಸ್ ಕ್ಲಾಸ್‌ಗಳಿಂದ ಒಟ್ಟಾಗಿ ಸೇರಿ ಮಾಡೋ ಟ್ಯಾಲೆಂಟ್ಸ್ ಡೇ, ಕಾಲೇಜ್ ಡೇ, ನ್ಪೋರ್ಟ್ಸ್ ಡೇ ಇವುಗಳಲ್ಲಿ ನಮ್ಮ ಕ್ಲಾಸ್‌ಗೆ ಜಾಸ್ತಿ ಪಾಯಿಂಟ್ಸ್ ಬರ್ಬೇಕು ಅಂತ ಲೀಡರ್‌ಶಿಪ್ ತೆಗೆದುಕೊಳ್ಳೋ ಸ್ಟ್ರಾಂಗ್ ಪರ್ಸನ್ಸ್, ಎಲ್ಲರನ್ನೂ ಜೊತೆ ಕೂರಿಸ್ಕೊಂಡು ಪ್ಲಾನಿಂಗ್ ಹಾಕೋವಾಗ ಡಿಫರೆಂಟ್ ಐಡಿಯಾ ಕೊಡೋ ನಮ್ ಫ್ರೆಂಡ್ಸ್‌ಗಳು: ಕೊನೆ ವರ್ಷ, ಈ ಬಾರಿ ಎಷ್ಟು ಖರ್ಚಾದ್ರೂ ಪರ್ವಾಗಿಲ್ಲ. ನಮ್ ಟ್ಯಾಲೆಂಟ್‌ನ ಭರ್ಜರಿಯಾಗಿ ತೋರಿಸಿಕೊಡೋಣ ಅನ್ನೋ ಕ್ಲಾಸ್ ಮುಖ್ಯಮಂತ್ರಿಗಳು, ನ್ಪೊ$àರ್ಟ್ಸ್ಲ್ಲೂ ಜಾಸ್ತಿ ಪ್ರಶಸ್ತಿ ಬರಬೇಕು ಅಂತೆಲ್ಲಾ ಡೀಪ್ ಡಿಸ್ಕಶನ್ ಆಗ್ತಾ ಇದ್ರೆ ಲಾಸ್ಟಲ್ಲಿ ಕುಳಿತು ನಮ್ಮದೇ ಲೋಕದಲ್ಲಿ ತೇಲಾಡೋ ನಾಲ್ಕು ಹುಡುಗೀರು. ಈ ಕ್ಷಣಗಳೆಲ್ಲ ಇನ್ಮುಂದೆ ಬರೀ ನೆನಪಿನ ಪುಸ್ತಕದೊಳಗೆ ಸೇರಿಬಿಡತ್ತೋ ಏನೋ..?
ಹುಟ್ಟು ಹಬ್ಟಾನ ಫ್ರೆಂಡ್ಸ್ ಜೊತೆ ಸೆಲೆಬ್ರೇಷನ್ ಮಾಡಿ ಎಂಜಾಯ್ ಮಾಡಿದ ದಿನ, ಸೆಮ್ ಮುಗಿಯೋವಾಗ ನಲವತ್ತು ಗಂಟೆ ಲೈಬ್ರರಿ ಅವರ್ ಮಾಡಿಲ್ಲ ಅಂತ ಸ್ಟಡೀ ಹಾಲಿಡೇ ಪೂರ್ತಿ ಅಲ್ಲೇ ಕೂತು ನಿದ್ದೆ ಮಾಡೋ ತನಕ ತಲುಪಿದ ಓದು. ಎಗಾÕಮ್‌ಗೆ ಓದದೇ ಬಂದು ಪಕ್ಕದವನಿಗೆ ಟಾರ್ಚರ್ ಕೊಡೋ ಫ್ರೆಂಡ್ಸ್‌ಗಳು. ಕ್ಲಾಸಿಗೆ ಬರೋವಾಗ ಖಾಲಿ ಕೈಯ್ಯಲ್ಲಿ ಬಂದು ದಿನಾ ಒಬ್ಬೊಬ್ಬರಲ್ಲಿ ಪೆನ್ ತೆಗೆದುಕಂಡು ಕ್ಲಾಸ್ ಮುಗಿಸ್ಕೊಂಡು ಹೋಗೋ ಸಾಚಾಗಳು,ದಿನಾ ಕ್ಲಾಸ್‌ಗೆ ಲೇಟಾಗಿ ಬಂದು ಲೆಕ್ಚರರ್ ಹತ್ರ ಉಗಿಸ್ಕೊಳ್ಳೋ ಲೇಟೆಸ್ಟ್ ಇಂಥಾ ಹಿನ್ನೆಲೆಯ ನಾವೆಲ್ಲಾ ಇನ್ನು ಮೂರು ತಿಂಗಳು ಕಳೆದ ಮೇಲೆ ನೂರು ಕಡೆಗಳಿಗೆ ತೆರಳೆ¤àವೆ ಅನ್ನೋ ನೋವು ನಮ್ಮನ್ನ ಕಾಡುತ್ತೆ.
ಇನ್ನು ಹಾಸ್ಟೆಲ್‌ಗಳಲ್ಲಿ ಜೊತೆಯಿರೋ ಫ್ರೆಂಡ್ಸ್‌ಗಳಿಗೂ ಹಾಸ್ಟೆಲ್ ಬಿಟ್ಟು ತೆರಳ್ಬೇಕಲ್ಲಾ ಅನ್ನೋ ಬೇಸರ. ಒಂದು ರೂಪಾಯಿ ಕಾಯಿನ್‌ನ ಬೆಲೆ ತಿಳಿಸಿಕೊಟ್ಟ ಕಾಯಿನ್ ಫೋನ್, ಕಾಯಿನ್ ಬಾಕ್ಸ್ ಹಾಳಾಗಿ ಮನೆಯವರೊಂದಿಗೆ ಮಾತಾಡದೇ ಕಳೆದ ವಾರಗಳು. ಸಣ್ಣ ಪುಟ್ಟ ವಿಚಾರಗಳಿಗೂ ಸಿಟ್ಟು ಮಾಡ್ಕೊಳ್ಳೋ ಕ್ಯೂಟ್ ಫ್ರೆಂಡ್ಸ್. ಹಾಸ್ಟೆಲ್ ರೂಲ್ಸ್ ಬ್ರೇಕ್ ಮಾಡಿ ಸಿಕ್ಕಿ ಬಿದ್ದು ಬೈಗುಳ ತಿಂದ ದಿನಗಳು, ಮನೆಯಿಂದ ಬರೋವ್ರನ್ನ ಬೆಳಗ್ಗೆಯಿಂದೆÉà ಕಾದು ಕೂರೋ ಗೆಳತಿಯರು, ಕಲರ್‌ಫುಲ್ ಆಗಿ ರೆಡಿಯಾಗೋ ಹುಡ್ಗಿàರು, ಒಂದೇ ತಟ್ಟೇಲಿ ಊಟ ಮಾಡ್ಕೊಂಡು, ನಮ್ಗೆ ನಾವೇ ಎಲ್ಲಾ ಅಂದೊRಂಡು ಮೂರು ವರ್ಷ ನೆಲೆ ಕೊಡಿಸಿದ ಹಾಸ್ಟೆಲ್‌ನ ಋಣಾನೂ ಮುಗಿಯೋ ದಿನ ಬರ್ತಾ ಇದೆ ಅಂದ್ರೆ ಕಣ್ಣಲ್ಲಿ ನೀರು ಬರದೇ ಇರುತ್ತಾ?
ಕೊನೆಯಲ್ಲಿ ಕಳೆಯೋ ದಿನಗಳು ಕೊನೆತನಕ ನೆನಪಲ್ಲಿ ಉಳಿಯುತ್ತೆ. ನೋವು-ನಲಿವುಗಳಲ್ಲಿ ಒಂದಾಗಿದ್ದ ಫ್ರೆಂಡ್ಸ್‌ಗಳಲ್ಲಿ ಬೇರೆ ಬೇರೆ ದಿಕ್ಕುಗಳಿಗೆ ಪ್ರಯಾಣ ಬೆಳೆಸೋ ದಿನ ಬರುತ್ತಿದೆ. ಎಲ್ಲರ ಪ್ರಯಾಣದಲ್ಲೂ ಅವರವರ ಜೀವನದ ಹಾದಿ, ಹಾದಿಯುದ್ದಕ್ಕೂ ಮರುಕಳಿಸುತ್ತಾ ಇರೋ ಸಿಹಿ- ಕಹಿ ನೆನಪುಗಳು, ನೆನಪುಗಳನ್ನೇ ಮರೆಸೋ ಕೆಲವೊಂದು ನೋವುಗಳು.
ಎಲ್ಲರೂ ಜೊತೆ ಜೊತೆಯಾಗಿ ಇದ್ದ ದಿನ ಮರೆಯಾಗೋ ಕಾಲ ಹತ್ತಿರ ಬರಿ¤ದೆ. ಮುಂದೆ ಸಿಗೋ ಫ್ರೆಂಡ್ಸ್ ಬಗ್ಗೆ ಕಲ್ಪನೆ ಕೂಡಾ ಇಲ್ಲ. ಹಿಂದೆ ಸಿಕ್ಕಿರೋ ಫ್ರೆಂಡ್ಸ್‌ಗಳನ್ನ ಬಿಟ್ಟು ಹೋಗೋಕೆ ಮನಸ್ಸಿಲ್ಲ. ನೆನಪಿನ ದೋಣಿಯ ಪಯಣಿಗರು ನಾವು.. ನೆನಪನ್ನೇ ಹೊತ್ತು ಸಾಗೋಣ..
– ದೀಕ್ಷಾ ಬಿ. ಪೂಜಾರಿ, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.