ಮಯಾಮಿ ಪ್ರಶಸ್ತಿ ಗೆದ್ದ ಅಮೆರಿಕದ ಸೋಕ್
Team Udayavani, Feb 28, 2017, 11:30 AM IST
ಮಯಾಮಿ: ಎದುರಾಳಿ ಮಿಲೋಸ್ ರಾನಿಕ್ ಗಾಯಾಳಾಗಿ ಹಿಂದೆ ಸರಿದುದರಿಂದ ಅಮೆರಿಕದ ಜಾಕ್ ಸೋಕ್ ಅವರಿಗೆ “ಡೆಲ್ರೆ ಬೀಚ್ ಓಪನ್’ ಟೆನಿಸ್ ಪ್ರಶಸ್ತಿ ಸುಲಭದಲ್ಲಿ ಒಲಿದಿದೆ. ಇದರೊಂದಿಗೆ ಅವರು ವರ್ಷದ 2ನೇ ಎಟಿಪಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಶ್ವದ 4ನೇ ರಾಂಕಿಂಗ್ ಟೆನಿಸಿಗ, ಈ ಕೂಟದ ಅಗ್ರ ಶ್ರೇಯಾಂಕದ ಕೆನಡಾ ಆಟಗಾರ ಮಿಲೋಸ್ ರಾನಿಕ್ ಕಳೆದೊಂದು ವರ್ಷದಿಂದ ನಿರಂತರ ವಾಗಿ ಕಾಲಿನ ಸ್ನಾಯು ಸೆಳೆತಕ್ಕೆ ಸಿಲುಕುತ್ತ ಬಂದಿದ್ದಾರೆ. ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಬಳಿಕ ಅವರು ಆಡುತ್ತಿದ್ದ ಮೊದಲ ಟೂರ್ನಿ ಇದಾಗಿತ್ತು. ಆದರೂ ಇಲ್ಲಿ ಪರಿಪೂರ್ಣ ಫಿಟ್‌ನೆಸ್ ಹೊಂದಲು ಅವರಿಗೆ ಸಾಧ್ಯವಾಗಲಿಲ್ಲ. ಶನಿವಾರ ರಾತ್ರಿ ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಸೆಮಿಫೈನಲ್ ಆಡು ತ್ತಿದ್ದಾಗ ಮತ್ತೆ ಬಲಗಾಲಿನ ಸೆಳೆತಕ್ಕೊಳ ಗಾದರು. ಪಂದ್ಯವನ್ನು ಗೆದ್ದರೂ ಬಳಿಕ ಅವರಿಗೆ ನಡೆಯಲಿಕ್ಕೂ ಸಾಧ್ಯವಾಗಲಿಲ್ಲ. ಹೀಗಾಗಿ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದರು.
“ಇದು ನಿಜಕ್ಕೂ ದುರದೃಷ್ಟ. ನಾವಿಬ್ಬರೂ ಬಹಳಷ್ಟು ಪಂದ್ಯಗಳಲ್ಲಿ ಎದುರಾಗಿ ಉತ್ತಮ ಹೋರಾಟ ಪ್ರದ ರ್ಶಿಸಿದ್ದೇವೆ. ಫೈನಲ್ ಸವಾಲನ್ನು ನಾನು ಎದುರು ನೋಡುತ್ತಿದ್ದೆ…’ ಎಂಬುದಾಗಿ ವಿಜೇತ ಜಾಕ್ ಸೋಕ್ ಹೇಳಿದ್ದಾರೆ. ಇದಕ್ಕೂ ಮುನ್ನ ಅವರು ಆಕ್ಲೆಂಡ್ ಟೆನಿಸ್ ಪ್ರಶಸ್ತಿ ಗೆದ್ದು ಉತ್ತಮ ಫಾರ್ಮ್ ಪ್ರದರ್ಶಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.