ಆಸ್ತಿ ಕೈತಪ್ಪಿ ಹೋಗುವ ಭೀತಿಯಲ್ಲಿ ನಾದಿನಿಯನ್ನೇ ಕೊಂದ ಬಾವ
Team Udayavani, Feb 28, 2017, 12:09 PM IST
ಬೆಂಗಳೂರು: ಆಸ್ತಿಗಾಗಿ ನಾದಿನಿ ಕೊಂದು ಬಳಿಕ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ನಾಟಕವಾಡಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ನಾಯ್ದು ಲೇಔಟ್ ನಿವಾಸಿ ಪವಿತ್ರ (18) ಕೊಲೆಯಾದ ಮಹಿಳೆ. ಆರೋಪಿ ಜಗದೀಶ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪವಿತ್ರ ಉಸಿರುಗಟ್ಟಿ ಸಾವನ್ನಪ್ಪಿಲ್ಲ, ಕೊಲೆ ನಡೆದಿದೆ ಎಂದು ಸಂಬಂಧಿಕರು ಮನೆ ಎದುರು ಗಲಾಟೆ ಮಾಡಿದ್ದಾರೆ. ಬಳಿಕ ಮಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಮೃತ ಮಹಿಳೆಯ ತಾಯಿ ಲಕ್ಷ್ಮಮ್ಮ ಠಾಣೆಗೆ ಹೋಗಿ ದೂರು ನೀಡಿದ್ದರು. ಅನುಮಾನಗೊಂಡು ಪೊಲೀಸರು ಆರೋಪಿ ಜಗದೀಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಘಟನೆ?: ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚನ್ನಯ್ಯ, ಲಕ್ಷ್ಮಮ್ಮ ದಂಪತಿ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಐದು ವರ್ಷಗಳ ಹಿಂದೆ ಹಿರಿಯ ಮಗಳನ್ನು ಆರೋಪಿ ಜಗದೀಶ್‌ಗೆ ಕೊಟ್ಟು ವಿವಾಹ ಮಾಡಿದ್ದರು. ಚನ್ನಯ್ಯ ಅವರಿಗೆ ನಗರದ ನಾಯ್ದು ಲೇಔಟ್‌ನಲ್ಲಿ 20×30 ವಿಸ್ತೀರ್ಣದ ನಿವೇಶನ ಹಾಗೂ ಚಿತ್ತೂರಿನಲ್ಲಿ ಜಮೀನಿದೆ. ಮೃತ ಪವಿತ್ರ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು.
ಇದು ಮನೆಯವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಮಗಳನ್ನು ಮತ್ತೂಬ್ಬರಿಗೆ ಕೊಟ್ಟು ವಿವಾಹ ಮಾಡಿಸಿದ್ದರು. ವಿವಾಹವಾದ ಒಂದು ವಾರಕ್ಕೆ ಪವಿತ್ರ ಪತಿ ತೊರೆದು ತವರು ಮನೆ ಸೇರಿದ್ದಳು. ಮಗಳು ತವರು ಮನೆ ಸೇರಿದ್ದರಿಂದ ಪೋಷಕರು ನೊಂದಿದ್ದರು. ಈ ಬಗ್ಗೆ ಅಳಿಯ ಜಗದೀಶ್ ಬಳಿ ಚರ್ಚಿಸಿದ್ದರು. ಆದರೆ, ಅತ್ತೆ-ಮಾವನ ಬಳಿಯಿದ್ದ ಆಸ್ತಿ ಮೇಲೆ ಜಗದೀಶ್ ಕಣ್ಣು ಹಾಕಿದ್ದ. ಪವಿತ್ರಾ ಅವರನ್ನು ಪುನಃ ಗಂಡನ ಮನೆಗೆ ಕಳುಹಿಸಿ ಸಂಸಾರ ಸರಿ ಮಾಡುತ್ತೇನೆ.
ಅದಕ್ಕಾಗಿ ಚಿತ್ತೂರಿಗೆ ಹೋಗಿ ಮಾಟ ಮಾಡಿಸಿಕೊಂಡು ಬರುತ್ತೇನೆ ಎಂದು ಅತ್ತೆ-ಮಾವನನ್ನು ನಂಬಿಸಿದ್ದ. ಬಳಿಕ ಪವಿತ್ರಾ ಅವರನ್ನು ಫೆ.25 ರಂದು ರಾತ್ರಿ ಚಿತ್ತೂರಿಗೆ ಕರೆದೊಯ್ಯಲು ನಿರ್ಧರಿಸಿದ್ದರು. ಈ ವೇಳೆ ಪವಿತ್ರ ಕೊಠಡಿಗೆ ಹೋಗಿದ್ದ ಜಗದೀಶ್ ಬಾಯಿಗೆ ಬಟ್ಟೆ ತೂರುಕಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಪವಿತ್ರ ಮೂಛೆì ಹೋಗಿದ್ದಾಳೆ ಎಂದು ಹೇಳಿ ಕಾರಿನಲ್ಲೆ ಶವವನ್ನು ಇಟ್ಟುಕೊಂಡು, ಚಿತ್ತೂರಿನಲ್ಲಿನ ಸಂಬಂಧಿಕರ ಮನೆಗೆ ಕರೆದೊಯ್ದಿದ್ದ.
ಪ್ರಜ್ಞಾನಹೀನ ಸ್ಥಿತಿಯಲ್ಲಿದ್ದ ಪವಿತ್ರಾ ಬಗ್ಗೆ ಕೇಳಿದಾಗ, ಅವಳು ಮೂಛೆì ಹೋಗಿದ್ದಾಳೆ ಎಂದು ಹೇಳಿ ಅವರ ಸಹಾಯ ಪಡೆದು ವೆಲ್ಲೂರಿನ ಆಸ್ಪತ್ರೆಗೆ ಕರೆದೊಯ್ದಿದ್ದ. ಆರೋಗ್ಯ ತಪಾಸಣೆ ಮಾಡಿದ್ದ ವೈದ್ಯರು, ಪವಿತ್ರಾ ಮೃತಪಟ್ಟಿದ್ದಾಗಿ ಹೇಳಿದ್ದರು ಎಂದು ಪೊಲೀಸರು ತಿಳಿಸಿದರು.
ಹಿರಿಯ ಮಗಳ ಭವಿಷ್ಯ ಹಾಳಾಗುತ್ತೆ: ಪವಿತ್ರ ಸಂಸಾರ ಸರಿ ಮಾಡಲು ಹೋಗಿ ಈ ರೀತಿ ಅನಾಹುತ ನಡೆದು ಹೋಗಿದೆ. ಪೊಲೀಸರಿಗೆ ದೂರು ನೀಡಬೇಡಿ. ನಿಮ್ಮ ಹಿರಿಯ ಮಗಳ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದ್ದ. ಬಳಿಕ ಶನಿವಾರ ಮಧ್ಯಾರಾತ್ರಿ ಶವದೊಂದಿಗೆ ನಗರಕ್ಕೆ ಬಂದಿದ್ದರು.
ಈ ವೇಳೆ ಪವಿತ್ರ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರು ಮತ್ತು ಸ್ಥಳೀಯರ ಬಳಿ ಆರೋಪಿ ಹೇಳಿದ್ದಾನೆ. ಇದನ್ನು ಒಪ್ಪದ ಸ್ಥಳೀಯರು ಕೊಲೆಯಾಗಿದೆ ಠಾಣೆಗೆ ದೂರು ನೀಡುವಂತೆ ಹೇಳಿದ್ದಾರೆ. ಲಕ್ಷ್ಮಮ್ಮ ಠಾಣೆಗೆ ಹೋಗಿ ಮಗಳು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಹೇಳಿಕೆ ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೇ ಪ್ರಿಯಕರನೊಂದಿಗೆ ಮತ್ತೆ ಅಫೇರ್!
ಪಿಯುಸಿ ಓದುತ್ತಿದ್ದ ವೇಳೆ ಯಶವಂತ್ ಎಂಬಾತಧಿನನ್ನು ಪವಿತ್ರಾ ಪ್ರೀತಿಸುತ್ತಿದ್ದರು. ಆತನೊಂದಿಗೆ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಆಗ ಜಗದೀಶ್ ಹಾಗೂ ಸಂಬಂಧಿಕರು, ಯುವಕನ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲೆ ಪೋಕೊÕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಯುವಕನನ್ನು ಬಂಧಿಸಿದ ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದ್ದರು. ಬಳಿಕ ಪರಿಚಯಸ್ಥ ಯುವಕನೊಂದಿಗೆ ಮಗಳನ್ನು ಚನ್ನಯ್ಯ ವಿವಾಹ ಮಾಡಿಸಿದ್ದರು. ಆತನೊಂದಿಗೆ ಸಂಸಾರ ನಡೆಸದ ಪವಿತ್ರಾ ಒಂದು ವಾರಕ್ಕೆ ಪತಿ ತ್ಯಜಿಸಿ ತವರು ಮನೆಗೆ ಬಂದಿದ್ದಳು. ಕಳೆದ ತಿಂಗಳಷ್ಟೇ ಜೈಲಿನಿಂದ ಯಶವಂತ್ ಬಿಡುಗಡೆಯಾಗಿದ್ದ. ಆತನೊಂದಿಗೆ ಪುನಃ ಪವಿತ್ರಾ ಒಡನಾಟ ಇಟ್ಟುಕೊಂಡಿದ್ದಳು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.