ಗಣೇಶ್ ಹೂಡಿದ್ದ ಕೇಸಿನ ವಿಚಾರಣೆ ಮುಂದೂಡಿಕೆ
Team Udayavani, Feb 28, 2017, 12:28 PM IST
ಬೆಂಗಳೂರು: ಅನುಮತಿ ಇಲ್ಲದೆ ಭಾವಚಿತ್ರ ಬಳಕೆ ಮಾಡಿಕೊಂಡ ಆರೋಪದ ಮೇಲೆ ಮೋಕ್ಷ ಅಗರಬತ್ತಿ ಕಂಪನಿ ವಿರುದ್ಧ ನಟ ಗಣೇಶ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸಿಟಿ ಸಿವಿಲ್ ನ್ಯಾಯಾಲಯ ಮಾರ್ಚ್.6ಕ್ಕೆ ಮುಂದೂಡಿದೆ.
ನಟ ಗಣೇಶ್ ಮತ್ತು ಮೋಕ್ಷ ಅಗರಬತ್ತಿ ನಡುವಿನ ಕಾನೂನು ಸಮರದಲ್ಲಿ ನಿರ್ದೇಶಕ ಎಸ್.ನಾರಾಯಣ್ ಅವರನ್ನು ಸಹ ನ್ಯಾಯಾಲಯ ಪ್ರತಿವಾದಿಯನ್ನಾಗಿ ಮಾಡಿ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ನಾರಾಯಣ್ ಅವರು ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರು. ಹೀಗಾಗಿ ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯವು ಮಾ.6ಕ್ಕೆ ಮುಂದೂಡಿದೆ.
ಮೋಕ್ಷ ಅಗರಬತ್ತಿ ಕಂಪನಿಯು ಅನುಮತಿ ಇಲ್ಲದೆ ತಮ್ಮ ಭಾವಚಿತ್ರ ಬಳಕೆ ಮಾಡಿಕೊಂಡಿದೆ. ಇದನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ 75 ಲಕ್ಷ ರೂ. ಪರಿಹಾರ ನೀಡುವಂತೆ ನಟ ಗಣೇಶ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಆದರೆ, ಅಗರಬತ್ತಿ ಕಂಪನಿಯ ಮಾಲೀಕರು, ನಿರ್ದೇಶಕ ಎಸ್.ನಾರಾಯಣ್ ಅನುಮತಿ ನೀಡಿದ್ದು, ಒಪ್ಪಿಗೆ ಮಾಡಿಕೊಳ್ಳಲಾಗಿತ್ತು. ಆದ ಕಾರಣ ಅವರ ಹೇಳಿಕೆಯನ್ನು ದಾಖಲಿಸಬೇಕು ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧಾರದ ಮೇಲೆ ನ್ಯಾಯಾಲಯವು ನಾರಾಯಣ್ ಅವರನ್ನು ಪ್ರತಿವಾದಿ ಮಾಡಿ ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಬೇಸರಗೊಂಡ ನಾರಾಯಣ್ ಅವರು ಗಣೇಶ್‌ಗೆ ಮಾನನಷ್ಟ ಮೊಕದ್ದಮೆ ನೊಟೀಸ್ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.