ಕಿರುತೆರೆ ಟು ಹಿರಿತೆರೆ
Team Udayavani, Mar 1, 2017, 11:31 AM IST
ಕಳೆದ ವರ್ಷ ವಿಜಯ್ ಸೂರ್ಯ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗಿದ್ದವು. ಒಂದು “ಇಷ್ಟಕಾಮ್ಯ’ ಮತ್ತು ಇನ್ನೊಂದು “ಸ’. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಈ ಮಧ್ಯೆ ಕಿರುತೆರೆಯ “ಅಗ್ನಿ ಸಾಕ್ಷಿ’ಯಲ್ಲಿ ಬಿಝಿಯಾಗಿದ್ದ ವಿಜಯ್ ಸೂರ್ಯ, ಈಗ ಮತ್ತೆ ಹಿರಿತೆರೆಗೆ ಬಂದಿದ್ದಾರೆ. ಹೊಸ ಚಿತ್ರವೊಂದರಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ “ಲಕ್ನೋ ಟು ಬೆಂಗಳೂರ್’ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಶಿವರಾತ್ರಿ ಹಬ್ಬದಂದೇ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ.
ಅಂದಹಾಗೆ, ಸ್ವರೂಪ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. “ಬ್ರಹ್ಮ ವಿಷ್ಣು ಮಹೇಶ್ವರ’ ಸಿನಿಮಾ ಮಾಡಿದ್ದ ಸ್ವರೂಪ್, ಆ ನಂತರ ಈ ಚಿತ್ರದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು. ಈಗ ಒಂದು ರೊಮ್ಯಾಂಟಿಕ್ ಲವ್ಸ್ಟೋರಿ ಮಾಡಿಕೊಂಡು, ಅದಕ್ಕೆ ವಿಜಯ್ ಸೂರ್ಯ ಅವರನ್ನು ನಾಯಕನನ್ನಾಗಿ ಮಾಡಿ, ಚಿತ್ರರಂಗಕ್ಕೆ ವಾಪಸ್ಸು ಬರುತ್ತಿದ್ದಾರೆ. ವಿಜಯ್ ಸೂರ್ಯ ಅವರ ಜೋಡಿಯಾಗಿ ಕೀರ್ತಿ ಲಕ್ಷ್ಮೀ ಕಾಣಿಸಿಕೊಳ್ಳುತ್ತಿದ್ದಾರೆ.
ಹೆಸರು ಕೇಳಿದರೆ ಇದೊಂದು ಜರ್ನಿ ಸ್ಟೋರಿ ಎಂದನಿಸಬಹುದು. ಆದರೆ, ಚಿತ್ರತಂಡದವರು ಮಾತ್ರ ಇದುವರೆಗೂ ಚಿತ್ರದ ಕುರಿತಾಗಿ ಯಾವೊಂದು ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಹೆಸರು ಹೇಳುವಂತೆ, ಚಿತ್ರದ ಕಥೆ ಲಕ್ನೋದಲ್ಲಿ ಶುರುವಾಗಿ ಬೆಂಗಳೂರಿಗೆ ಬಂದು ನಿಲ್ಲುತ್ತದೆ ಎಂಬುದನ್ನಷ್ಟೇ ಊಹಿಸಬಹುದು. ಲಕ್ನೋದಿಂದ ಬೆಂಗಳೂರಿನವರೆಗಿನ ಈ ಪ್ರಯಾಣದಲ್ಲಿ ಯಾರ್ಯಾರು ಇರುತ್ತಾರೆ ಮತ್ತು ಏನೆಲ್ಲಾ ಆಗುತ್ತದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಮೈ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಚಿತ್ರ ತಯಾರಾಗುತ್ತಿದ್ದು, ಆನಂದ್ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ವಿನೀತ್ರಾಜ್ ಇಲ್ಲಿ ಸಂಗೀತ ನೀಡುತ್ತಿದ್ದಾರೆ. ಸದ್ಯಕ್ಕೆ ನಾಯಕ, ನಾಯಕಿಯ ಆಯ್ಕೆಯಾಗಿದೆ. ಈ ಚಿತ್ರಕ್ಕೆ ವಿನೀತ್ ರಾಜ್ ಅವರು ಸಂಗೀತ ಸಂಯೋಜಿಸಿದರೆ, ಹರೀಶ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಏಪ್ರಿಲ್ನಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಸದ್ಯಕ್ಕೆ ಭುವನ್ ಗೌಡ ಅವರು ಚಿತ್ರದ ಫೋಟೋ ಶೂಟ್ ಮಾಡಿದ್ದು, ಮಿಕ್ಕಂತೆ ಚಿತ್ರತಂಡದವರು ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indrali ರೈಲ್ವೇ ನಿಲ್ದಾಣಕ್ಕೆ ಶೆಲ್ಟರ್ ಅಳವಡಿಕೆ
Deepavali ಹಿರಿಯರ ನೆನಪಿನ ಬೆಳಕು; ನರಕ ಚತುರ್ದಶಿಗೂ ಮೊದಲೇ ನಡೆಯುತ್ತದೆ ಸೈತಿನಕ್ಲೆನ ಪರ್ಬ
Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…
Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ
Waqf ವಿವಾದ ಹಿನ್ನೆಲೆ ಭೂದಾಖಲೆ ಪರಿಶೀಲನೆಗೆ ವಿಎಚ್ಪಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.