ಲೆಫ್ಟ್-ರೈಟ್ ಧೋರಣೆ ಸರಿಯಲ್ಲ: ಖರ್ಗೆ
Team Udayavani, Mar 1, 2017, 3:39 PM IST
ವಾಡಿ: ಶೋಷಿತ ದಲಿತ ಜನರು ಲೆಫ್ಟ್-ರೈಟ್ ಎಂದು ಒಡೆದು ಹೋಗುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಇಬ್ಬರೂ ಶೋಷಿತರೇ ಎನ್ನುವುದನ್ನು ಅರಿತು ಡಾ| ಬಿ.ಆರ್. ಅಂಬೇಡ್ಕರ್, ಡಾ| ಬಾಬು ಜಗಜೀವನರಾಂ ಅವರಂತೆಸಮಾನತೆಗಾಗಿ ಒಗ್ಗಟ್ಟಿನಿಂದ ಹೆಜ್ಜೆ ಹಾಕಿ ಎಂದು ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಹೇಳಿದರು.
ಹಳಕರ್ಟಿ ಗ್ರಾಮದ ದಲಿತರ ಬಡಾವಣೆಯಲ್ಲಿಸ್ಥಾಪಿಸಲಾದ ಡಾ| ಬಾಬು ಜಗಜೀವನರಾಂ ಅವರ ಆರು ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು. ಬಾಬಾಸಾಹೇಬ ಮತ್ತುಬಾಬುಜೀ ಅವರ ವ್ಯಕ್ತಿತ್ವ ಚಿಂತನೆ ನಮಗೆ ಅಗತ್ಯವಿದೆ. ವ್ಯಕ್ತಿ ಪೂಜೆ ಅನಗತ್ಯ.
ಬಸವಣ್ಣ, ವಿವೇಕಾನಂದ ಹಾಗೂ ಮಹಮದಿ ಅವರನ್ನು ಒಂದೊಂದು ಸಮುದಾಯದ ಮಧ್ಯೆ ಕಟ್ಟಿ ಹಾಕಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಚಿತ್ತಾಪುರ ಮತಕೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬಾಬು ಜಗಜೀವನರಾಂ ಭವನಗಳನ್ನು ನಿರ್ಮಿಸಲು 3.50 ಕೋಟಿ ರೂ. ಅನುದಾನ ತಂದಿದ್ದೇನೆ.
ಹಳಕರ್ಟಿ ಹಳ್ಳಕ್ಕೆ ಸೇತುವೆ ನಿರ್ಮಿಸಲು 90 ಲಕ್ಷ ರೂ. ಮಂಜೂರಾಗಿದೆ. ಅಲ್ಲದೆ ರಾಜ್ಯ ಸರಕಾರ ಎಸ್‌ಸಿ-ಎಸ್‌ಟಿ ಬಜೆಟ್‌ನಲ್ಲಿ 19,500 ಕೋಟಿ ರೂ. ಮೀಸಲಿಟ್ಟಿದೆ.ಅನುದಾನ ಸರಿಯಾಗಿ ಬಳಕೆ ಮಾಡದ ಅಧಿಧಿಕಾರಿಗಳನ್ನು ಜೈಲಿಗೆ ಕಳಿಸುವ ಕಠಿಣ ಕಾನೂನು ಜಾರಿಗೆ ತರಲಾಗಿದೆ.
ಅನ್ನಭಾಗ್ಯದಂತಹ ಯೋಜನೆ ಬಡವರ ಹಸಿವು ನೀಗಿಸುತ್ತಿದೆ. ರಾಜ್ಯ ಸರಕಾರ ಅನೇಕ ಕೊಡುಗೆಗಳನ್ನು ಕೊಟ್ಟಿದೆ ಎಂದರು. ವಿಧಾನ ಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ, ಸಂಸದ ಮಲ್ಲಿಕಾರ್ಜುನ ಖರ್ಗೆ ಒಳ್ಳೆ ಕೆಲಸ ಮಾಡಿಕೊಂಡು ಹೋಗುತ್ತಿರುವುದರಿಂದ ಜನ ಅವರನ್ನು ಆರಿಸಿ ಕಳುಹಿಸುತ್ತಿದ್ದಾರೆ.
ಅವರ ಮಗ ಪ್ರಿಯಾಂಕ್ ಖರ್ಗೆ ಕೂಡ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ರಾಜಕೀಯ ಬೇಧ ಮರೆತು ಬೆನ್ನು ತಟ್ಟಿದರಲ್ಲದೆ, ಚುನಾವಣೆಯಲ್ಲಿ ಎದುರಾ ಬದುರಾ ನಿಂತು ಕುಸ್ತಿ ಹಿಡಿಯೋಣ ಎಂದು ಹಾಸ್ಯ ಚಟಾಕಿ ಹಾರಿಸಿದರು. ಶ್ರೀ ಮುನೀಂದ್ರ ಸ್ವಾಮೀಜಿ, ಶ್ರೀ ರಾಜಶೇಖರ ಸ್ವಾಮೀಜಿ, ಶೇಖಶಹಾ ಗುಲಾಮ ಮಹಮ್ಮದ್ ಫತಿಯೋದ್ಧೀನ್ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಜಿ.ರಾಮಕೃಷ್ಣ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಎಐಸಿಸಿ ಸದಸ್ಯೆ ಚಂದ್ರಿಕಾ ಪರಮೇಶ್ವರ, ರಾಜು ಮುಕ್ಕಣ್ಣ, ಜಿಪಂ ಸದಸ್ಯ ಶಿವಾನಂದ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಗೋವಿಂದ ಜಾಧವ, ಮುಖಂಡರಾದ ಭೀಮಣ್ಣ ಸಾಲಿ, ಟೋಪಣ್ಣಕೋಮಟೆ, ಮಹೆಮೂದ್ ಸಾಹೇಬ, ಜಗದೀಶ ಸಿಂಧೆ, ಅಜೀಜ್ ಸೇಠ ರಾವೂರ, ರವಿ ಚÌಹಾಣ, ಶ್ಯಾಮ ನಾಟೇಕರ ಪಾಲ್ಗೊಂಡಿದ್ದರು. ವೀರಭದ್ರ ಮಣಿಗೇರಿ ಸ್ವಾಗತಿಸಿದರು. ಗುರುನಾಥ ಮಣಿಗೇರಿ ನಿರೂಪಿಸಿದರು. ರಾಜು ಸುಗೂರ ವಂದಿಸಿದರು. ಏಕಲವ್ಯ ಹಾಗೂ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.