ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಸಂಶೋಧನಾ ಮೌಖೀಕ ಮೌಲ್ಯಮಾಪನ


Team Udayavani, Mar 1, 2017, 5:12 PM IST

28-Mum11.jpg

ಮುಂಬಯಿ: ಮನುಷ್ಯ  ಬಯಸವುದೇ ಸಮೃದ್ಧಿಯ ಬದುಕು, ವಿಶೇಷವೆಂದರೆ ಎಲ್ಲಾ ಸೌಲಭ್ಯಗಳಿಂದಲೂ ಚಿಂತಾಮುಕ್ತನಾಗುವುದಿಲ್ಲ. ಆದ್ದರಿಂದ ಮನುಷ್ಯ ಅಂತರ್‌ಮುಖೀಯಾಗಬೇಕು. ಆವಾಗಲೇ ಸಮೃದ್ಧಿ ಫಲಿಸುತ್ತದೆ. ಕನ್ನಡ ಮರಾಠಿ ಒಂದೇ ಸಂಸ್ಕೃತಿಯ ಒಂದೇ ಭಾಷೆಗಳಿದ್ದಂತೆ. ಸಾಧನೆ ಮತ್ತು ಅಧ್ಯಯನ ಯೋಗ್ಯಪೂರ್ಣವಾಗಿರಬೇಕು. ಗುಣ ಮತ್ತು ಸಾಮರ್ಥ್ಯದ ಮೇಲೆ ಸಂಶೋಧನೆ ಸಾಧ್ಯವಾಗುತ್ತದೆ. ದೇವರ ಜೊತೆ ಅನುಸಂಧಾನ ಮಾಡಿದಾಗ ಜೀವನ ಹಸನಾಗುವುದು. ಪುರಾಣ ಅಂದರೆ ದೇವರ ಚರಿತ್ರೆಯನ್ನಾಗಿಯೂ, ಹೊಸತನವಾಗಿಯೂ ನೋಡಬೇಕು. ಬಹು ಭಾಷಾ ಬಲ್ಲವರಿಂದ ಬಾಹು ಬಾಂಧವ್ಯ ಸಂಬಂಧಗಳು ಸಾಧ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ  ಪ್ರಾಧ್ಯಾಪಕ ಡಾ| ವಿಟuಲ ರಾವ್‌ ಗಾಯಕ್ವಾಡ್‌ ನುಡಿದರು.

ಫೆ. 28 ರಂದು  ಪೂರ್ವಾಹ್ನ ಸಾಂತಾಕ್ರೂಜ್‌ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿಯ  ಡಬ್ಲೂÂಆರ್‌ಐಸಿ ಭವನದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ್ದ ವಿದ್ಯಾರ್ಥಿಗಳ ಸಂಶೋಧನಾ ಮೌಖೀಕ ಮೌಲ್ಯಮಾಪನ ಮತ್ತು ಘಟಿಕೋತ್ಸವ  ಸಂದರ್ಭದಲ್ಲಿ “ಕನ್ನಡ ಸಾಹಿತ್ಯ ಮತ್ತು ಭಾಷಾಂತರ ಹಾಗೂ ಕನ್ನಡ ದಲಿತ ಸಾಹಿತ್ಯ’ ವಿಚಾರಿತ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನಿತ್ತು ಅವರು ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರ  ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮಾ ಆರ್‌. ಮೂರ್ತಿ ಅವರು ತಮ್ಮ ಎಂ.ಫಿಲ್‌ ಸಂಶೋಧನಾ “ಎಸ್‌.ಎಲ್‌ ಭೈರಪ್ಪನವರ ಪರ್ವ: ಆಯಾಮ ಮತ್ತು ಅನನ್ಯತೆ’ ಸಂಪ್ರಬಂಧವನ್ನೂ ಹಾಗೂ  ಚಂದ್ರ ಮುತಾಲಿಕ್‌ ಜೋಶಿ ತನ್ನ ಪಿಎಚ್‌ಡಿ “ದಾಸ ಸಾಹಿತ್ಯ ಮತ್ತು ಮರಾಠಿ ಸಾಹಿತ್ಯ’ ಮಹಾ ಪ್ರಬಂಧದ  ದಾಖಲಾಧಾರಿತ ವಿಷಯಗಳ ಮೌಖೀಕ ಮೌಲ್ಯಮಾಪನ ನಡೆಸಿದರು. ಬಳಿಕ ಡಾ| ಜಿ. ಎನ್‌. ಉಪಾಧ್ಯ ಹಾಗೂ ಹಿರಿಯ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್‌ ನಿಂಜೂರು ಅವರನ್ನೊಳಗೊಂಡು ಡಾ| ಗಾಯಕ್ವಾಡ್‌ ಅವರು ಚಂದ್ರಾ ಜೋಶಿ ಅವರಿಗೆ ಸ್ವರ್ಣ ಪದಕವನ್ನಿತ್ತು  “ಡಾಕ್ಟರೇಟ್‌ ಪದವಿ’ ಪ್ರದಾನಿಸಿ ಅಭಿನಂದಿಸಿದರು.

ಆನಂತರ ಕನ್ನಡ ವಿಭಾಗ ಆಯೋಜಿಸಿರುವ ಸದಾನಂದ ಸುವರ್ಣ ಪ್ರಾಯೋಜಿತ ಡಾ| ಶಿವರಾಮ ಕಾರಂತ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್‌ ನಿಂಜೂರು ಅವರು “ಡಾ| ಶಿವರಾಮ ಕಾರಂತರ ಅನನ್ಯತೆ’ ವಿಷಯದಲ್ಲಿ  ಉಪನ್ಯಾಸ ನೀಡಿದರು. ಸುಗಂಧಾ ಸತ್ಯಮೂರ್ತಿ ಸ್ವಾಗತಗೀತೆ ಹಾಡಿದರು. ಡಾ| ರಮಾ ಉಡುಪ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪ‌ಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ವಂದಿಸಿದರು.

ಆನಂದ್‌ ಮುತಾಲಿಕ್‌, ಸುಹಾಸ್‌ ಕುಲ್ಕರ್ಣಿ, ಬಿ. ಎಸ್‌. ಕುರ್ಕಾಲ್‌, ಡಾ| ಜೀವಿ  ಕುಲ್ಕರ್ಣಿ, ಡಾ| ವಿಶ್ವನಾಥ ಕಾರ್ನಾಡ್‌, ಡಾ| ಕೆ. ರಘುನಾಥ್‌, ರತ್ನಾಕರ ಆರ್‌. ಶೆಟ್ಟಿ, ವೈ. ವಿ. ಮಧುಸೂದನ ರಾವ್‌, ಎಸ್‌. ಕೆ. ಸುಂದರ್‌, ಯಜ್ಞ ನಾರಾಯಣ ಕೆ. ಸುವರ್ಣ, ಸುಶೀಲಾ ಎಸ್‌. ದೇವಾಡಿಗ, ಶಾರದಾ ಯು. ಅಂಬೇಸಂಗೆ, ಶ್ಯಾಮಲಾ ಪ್ರಕಾಶ್‌, ಸುರೇಖಾ ಸುಂದರೇಶ್‌ ದೇವಾಡಿಗ, ಉಮಾ ರಾಮರಾವ್‌, ಮಮ್ತಾ ಮಲ್ಹಾರ, ಸುರೇಖಾ ಆರ್‌. ನಾಯ್ಕ, ಕರುಣಾಕರ್‌ ಹೆಜ್ಮಾಡಿ, ಕುಮುದಾ ಕೆ. ಆಳ್ವ, ಗೀತಾ ಆರ್‌. ಎಸ್‌, ಶಿವರಾಮ ಎಸ್‌. ಕೋಟ್ಯಾನ್‌, ದಾûಾಯಣಿ ಯಡಹಳ್ಳಿ, ಶಿವರಾಜ್‌ ಎಂ. ಜೆ., ಎಚ್‌. ಪರಸ‌ಪ್ಪ, ವೀಣಾ ಶಾಸ್ತ್ರಿ, ಮೇಧಾ ಕುಲ್ಕರ್ಣಿ, ಮನೋಹರ ಕುಲ್ಕರ್ಣಿ, ಅನಸೂಯಾ ಗಲಗಲಿ, ಅಕ್ಷತಾ ದೇಶ್‌ಪಾಂಡೆ, ಅಪರ್ಣಾ ರಾಮ್‌ ಗಾಂವ್ಕರ್‌, ದಿನಕರ ಎನ್‌. ಚಂದನ್‌, ಎಂ. ನಾರಾಯಣ, ಅನಿತಾ ಎಸ್‌. ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದು, ಉಮಾ ಮೂರ್ತಿ ಮತ್ತು ಚಂದ್ರ ಜೋಶಿ ಅವರನ್ನು ಅಭಿನಂದಿಸಿದರು.

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.