ಟೆಕ್ಕಿ ಕೊಲೆಗೆ ಟ್ರಂಪ್‌ ಕೊನೆಗೂ ಖಂಡನೆ


Team Udayavani, Mar 2, 2017, 3:45 AM IST

Donald-Trump–9.jpg

ವಾಷಿಂಗ್ಟನ್‌: ಅಮೆರಿಕದ ಕನ್ಸಾಸ್‌ನಲ್ಲಿ ನಿವೃತ್ತ ಯೋಧನಿಂದ ಹತ್ಯೆಗೀಡಾದ ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ್‌ ಕುಚಿಭೋಟ್ಲಾ ಕೊಲೆ ಪ್ರಕರಣವನ್ನು ಕೊನೆಗೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಂಡಿಸಿದ್ದಾರೆ. ಸಂಸತ್ತಿನ ಚೊಚ್ಚಲ ಭಾಷಣದಲ್ಲಿ, “ಜನಾಂಗೀಯ ದ್ವೇಷಪೂರಿತ ಹತ್ಯೆಯನ್ನು ನಾವು ಸಹಿಸುವುದಿಲ್ಲ’ ಎಂದು ಕನ್ಸಾಸ್‌ನಲ್ಲಿನ ದುಷತ್ಯವನ್ನು ವಿರೋಧಿಸಿದರು. 

“ಜನಾಂಗೀಯ ದ್ವೇಷದಿಂದ ದೇಶ ಇಬ್ಭಾಗವಾಗುವ ಅಪಾಯ ಹೆಚ್ಚು. ಇಡೀ ರಾಷ್ಟ್ರ ಒಗ್ಗಟ್ಟಾಗಿ ಇಂಥ ದ್ವೇಷಪೂರಿತ ಕೃತ್ಯಗಳನ್ನು ಖಂಡಿಸುತ್ತದೆ’ ಎಂದು ಜಂಟಿ ಅಧಿವೇಶನದ ಭಾಷಣದಲ್ಲಿ ಟ್ರಂಪ್‌ ಹೇಳಿದ್ದಾರೆ. ಅಲ್ಲದೆ, ರಿಪಬ್ಲಿಕನ್‌ ಸರ್ಕಾರದ ಮುಂದಿನ ಮಹತ್ವದ ಯೋಜನೆಗಳ ಕಿರುಚಿತ್ರಣವನ್ನೂ ಇದೇ ವೇಳೆ ಮುಂದಿಟ್ಟಿದ್ದಾರೆ.

ಕಾರಿನಲ್ಲೇ ಭಾಷಣ ಕಂಠಪಾಠ!
ಸಂಸತ್‌ನಲ್ಲಿನ ಚೊಚ್ಚಲ ಭಾಷಣಕ್ಕೆ ಡೊನಾಲ್ಡ್‌ ಟ್ರಂಪ್‌ ತಮ್ಮ ಲಿಮೋ ಕಾರಿನಲ್ಲೇ ತಯಾರಿ ಮಾಡಿಕೊಂಡ ವಿಡಿಯೋ ವೈರಲ್‌ ಆಗಿದೆ. ಅಮೆರಿಕದ ಮಾಧ್ಯಮಗಳು, ಕ್ಯಾಮೆರಾಮನ್‌ಗಳು ಅವರನ್ನು ಹಿಂಬಾಲಿಸಿದರೂ, ಅದರ ಕಡೆಗೆ ಲಕ್ಷ್ಯ ಕೊಡದ ಟ್ರಂಪ್‌, ಕಾರಿನಲ್ಲಿ ಭಾಷಣವನ್ನು ಅಭ್ಯಸಿಸುತ್ತಿದ್ದರು. ಈ ವಿಡಿಯೋ ಟ್ವಿಟರ್‌ನಲ್ಲಿ ನಾಲ್ಕೇ ಗಂಟೆಯಲ್ಲಿ 1,100 ರಿಟ್ವೀಟ್‌, 1,600 ಲೈಕ್ಸ್‌ ಬಿದ್ದಿವೆ.

ಇಸ್ರೋ ಸಾಧನೆ ಅಮೆರಿಕಕ್ಕೆ ಶಾಕ್‌!
ಭಾರತದ ಇಸ್ರೋ ಫೆ.15ರಂದು ನಭಕ್ಕೆ ಚಿಮ್ಮಿಸಿದ 104 ರಾಕೆಟುಗಳ ವರದಿ ಓದಿ ಅಮೆರಿಕ ಶಾಕ್‌ ಆಗಿತ್ತು! ಟ್ರಂಪ್‌ ಸರ್ಕಾರದ ರಾಷ್ಟ್ರೀಯ ಗುಪ್ತಚರ ಇಲಾಖೆಗೆ ನಿರ್ದೇಶಕರಾಗಿ ಆಯ್ಕೆ ಆಗುತ್ತಿರುವ ಡಾನ್‌ ಕೋಟ್ಸ್‌ ಇದನ್ನು ಒಪ್ಪಿಕೊಂಡಿದ್ದಾರೆ. ಇಸ್ರೋ 104 ರಾಕೆಟುಗಳನ್ನು ಏಕಕಾಲದಲ್ಲಿ ಹಾರಿಬಿಟ್ಟಿದ್ದನ್ನು ಕೇಳಿ ಶಾಕ್‌ ಆದೆವು. ಕಡಿಮೆ ಬಜೆಟ್‌ನಲ್ಲಿ ಇಂಥ ಸಾಧನೆ ಪ್ರಶಂಸನೀಯ ಎಂದಿದ್ದಾರೆ,

ಟ್ರಂಪ್‌ ಭಾಷಣದ 8 ಹೈಲೈಟ್‌
1.ಇನ್ನು 9 ವರ್ಷಗಳಲ್ಲಿ ಅಮೆರಿಕ ಸ್ವತಂತ್ರಗೊಂಡು 250 ವರ್ಷವಾಗುತ್ತದೆ. ಈ ಮೈಲುಗಲ್ಲಿಗೂ ಮುನ್ನ ಅಮೆರಿಕವನ್ನು ಮತ್ತೂಮ್ಮೆ ಉನ್ನತಕ್ಕೇರಿಸಲು ರಾಜಕೀಯ ಭೇದ ಮರೆತು ಹೆಜ್ಜೆ ಇಡೋಣ.

2.ನಮ್ಮ ಮಧ್ಯಮ ವರ್ಗದವರ ಬದುಕು ಮುಳುಗಿ ಹೋಗಿದೆ. ಇಲ್ಲಿನ ಉದ್ಯೋಗ, ಸಂಪತ್ತು ಬೇರೆ ದೇಶದವರ ಪಾಲಾಗುತ್ತಿದೆ. ಇದನ್ನು ತಡೆಯಲು ಸೂಕ್ತ ಕ್ರಮ.

3.ವಲಸಿಗರ ಅಪರಾಧ ತಡೆಗೆ ಟಾಸ್ಕ್ ಫೋರ್ಸ್‌. ವಾರಕ್ಕೊಮ್ಮೆ  ಕ್ರೈಮ್‌ ಮಾಹಿತಿ ಸಂಗ್ರಹ. ಎಲ್ಲ ವಲಸಿಗರ ಅಪರಾಧ ಕೃತ್ಯಗಳನ್ನೂ ದಾಖಲಿಸಿ, ಹೋಮ್‌ಲ್ಯಾಂಡ್‌ ಸೆಕ್ಯೂರಿಟಿಗೆ ನೀಡುತ್ತದೆ.

4.ವಲಸೆ ನಿರ್ಬಂಧದ 7 ದೇಶಗಳ ಪಟ್ಟಿಯಿಂದ ಇರಾಕ್‌ ಅನ್ನು ಕೈಬಿಡಲಾಗಿದೆ. ಸಿರಿಯಾ, ಇರಾನ್‌, ಸುಡಾನ್‌, ಲಿಬಿಯಾ, ಸೊಮಾಲಿಯಾ, ಯೆಮನ್‌ಗೆ ನಿರ್ಬಂಧ ನೀತಿ 90 ದಿನಗಳವರೆಗೆ ಇರಲಿದೆ.

5.ಡ್ರಗ್ಸ್‌ ಮತ್ತು ಕ್ರೈಮ್‌ ತಡೆಗೆ ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣ ಶೀಘ್ರವೇ ಆರಂಭ. ಆದರೆ, ಇದಕ್ಕೆ ಮೆಕ್ಸಿಕೋ ಎಷ್ಟು ಪಾವತಿಸಬೇಕು ಎಂಬುದರ ಬಗ್ಗೆ ಸರ್ಕಾರ ಇನ್ನೂ ನಿರ್ಧಾರಕ್ಕೆ ಬಂದಿಲ್ಲ.

6.ಯೆಮನ್‌ ದಾಳಿ ವೇಳೆ ಮಡಿದ ಅಮೆರಿಕ ಯೋಧ ವಿಲಿಯಂ ರ್ಯಾನ್‌ ಒವೆನ್ಸ್‌ಗೆ ನಮನ. ಭಯೋತ್ಪಾದಕರ ವಿರುದ್ಧ ಹೋರಾಡಿದ ಅಮೆರಿಕದ ಹೀರೋ ಆತ.

7.ಇಸ್ಲಾಮಿಕ್‌ ಭಯೋತ್ಪಾದನೆಯಿಂದ ಅಮೆರಿಕವನ್ನು ರಕ್ಷಿಸಲು ಎಲ್ಲ ರೀತಿಯ ಕ್ರಮ. ಐಸಿಸ್‌ ಉಗ್ರರು ವಿಶ್ವಕ್ಕೆ ಕೆಟ್ಟ ಛಾಯೆ ಆಗಿದ್ದಾರೆ. ಇಂಥವರಿಂದ ಅಮೆರಿಕ ಯಾವತ್ತೂ ದೂರವೇ ಉಳಿಯುತ್ತದೆ.

8.ಅಮೆರಿಕ ಕಂಪನಿಗಳು ವಿಶ್ವದಲ್ಲೇ ಹೆಚ್ಚು ತೆರಿಗೆ ಕಟ್ಟುತ್ತಿವೆ. ಇದನ್ನು ಕಡಿತಗೊಳಿಸಲು ಎಲ್ಲ ರೀತಿಯ ಕ್ರಮ. ಹೊರ ದೇಶಗಳ ಕಂಪನಿಗಳ ಮೇಲೆ ಹೆಚ್ಚು ತೆರಿಗೆ.

ಟಾಪ್ ನ್ಯೂಸ್

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.