ಪಲ್ಸರ್ ಸುನಿಲ್‌ಗೆ ದುಬೈ ಸೆಕ್ಸ್ ಜಾಲದ ನಂಟು ? ಪೊಲೀಸ್ ತನಿಖೆ
Team Udayavani, Mar 2, 2017, 4:23 PM IST
ತಿರುವನಂತಪುರ : ಕೇರಳದ ಬಹುಭಾಷಾ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಮಾಸ್ಟರ್ ಮೈಂಡ್ ಪಲ್ಸರ್ ಸುನಿಲ್, ಕಾರಿನಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡುವಾಗಿನ ವಿಡಿಯೋ ಹಾಗೂ ಹಲವಾರು ಚಿತ್ರಗಳನ್ನು ತನ್ನ ಸ್ಮಾರ್ಟ್ ಫೋನ್‌ನಲ್ಲಿ ಸೆರೆ ಹಿಡಿದಿದ್ದು ಅವುಗಳನ್ನು ಆತ ತನ್ನ ಸ್ನೇಹಿತರಿಗೆ ತೋರಿಸಿದ್ದಾನೆ ಎಂದು ಕೇರಳ ಪೊಲೀಸರನ್ನು ಉಲ್ಲೇಖೀಸಿ ಸ್ಥಳೀಯ ಮೂಲಗಳು ಹೇಳಿರುವುದಾಗಿ ಟಿವಿ ವರದಿಗಳು ಹೇಳಿವೆ.
ಮಲಯಾಳಂ ಚಿತ್ರ ನಟಿಯ ಅಪಹರಣ, ಲೈಂಗಿಕ ಕಿರುಕುಳ ಘಟನೆಯ ಬಳಿಕ ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಪಲ್ಸರ್ ಸುನಿ, ಆ ದಿನಗಳಲ್ಲಿ ತನ್ನ ಸ್ನೇಹಿತ ಮನು ಎಂಬಾತನನ್ನು ಹಾಗೂ ಅಮಬಲಪ್ಪುಳದಲ್ಲಿನ ಮತ್ತೋರ್ವ ಸ್ನೇಹಿತನನ್ನು ಭೇಟಿಯಾಗಿ ಅವರಿಗೆ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿರುವಾಗಿನ ವಿಡಿಯೋ ಹಾಗೂ ಚಿತ್ರಗಳನ್ನು ತೋರಿಸಿದ್ದಾನೆ ಎನ್ನಲಾಗಿದೆ.
ಆದರೆ ದುರದೃಷ್ಟವಶಾತ್ ಕೇರಳ ಪೊಲೀಸರಿಗೆ ಪಲ್ಸರ್ ಸುನಿಲ್‌ನ ಈ ಸ್ಮಾರ್ಟ್ ಫೋನ್ ಇನ್ನೂ ಸಿಕ್ಕಿಲ್ಲ. ನ್ಯಾಯಾಲಯಕ್ಕೆ ಶರಣಾಗುವ ಮುನ್ನ ತಾನು ಆ ಸ್ಮಾರ್ಟ್ ಫೋನನ್ನು ಗೋಶ್ರೀ ಸೇತುವೆಯ ಕೆಳಕ್ಕೆ ಎಸೆದಿದ್ದೆ ಎಂದು ಪಲ್ಸರ್ ಸುನಿಲ್ ಪೊಲೀಸರಲ್ಲಿ ಹೇಳಿದ್ದ. ಆ ಪ್ರಕಾರ ಅವರು ನೌಕಾಪಡೆಯ ಮುಳುಗು ತಜ್ಞರ ಸಹಾಯ ಪಡೆದು ನದಿಯಲ್ಲಿ ಸ್ಮಾರ್ಟ್ ಫೋನಿಗಾಗಿ ಹುಡುಕಾಡಿಸಿದ್ದರು.
ಆ ಬಳಿಕ ಪಲ್ಸರ್ ಸುನಿಲ್ ತಾನು ಆ ಸ್ಮಾರ್ಟ್ ಫೋನನ್ನು ಬೇರೆಲ್ಲೋ ಒಂದು ಕಡೆ ಎಸದಿದ್ದೇನೆ ಎಂದಿದ್ದ. ಆ ಸ್ಥಳದಲ್ಲೂ ಹುಡುಕಾಟ ನಡೆಸಿದ ಪೊಲೀಸರಿಗೆ ಏನೂ ಸಿಗಲಿಲ್ಲ. ಆ ಸ್ಮಾರ್ಟ್ ಫೋನ್ ಪೊಲೀಸರಿಗೆ, ಪಲ್ಸರ್ ಸುನಿಲ್ ವಿರುದ್ಧದ ಸಾಕ್ಷ್ಯಕ್ಕೆ ಅತೀ ಅಗತ್ಯವಾಗಿದೆ.
ಪಲ್ಸರ್ ಸುನಿಲ್‌ಗೆ ಮಹಿಳೆಯರನ್ನು ದುಬೈಗೆ ಕಳ್ಳಸಾಗಾಟ ಮಾಡುವ ಜಾಲವೂ ಇದೆ; ಆ ನಿಟ್ಟಿನಲ್ಲಿಯೂ ತನಿಖೆ ನಡೆಸಬೇಕು ಎಂದು ಈ ನಡುವೆ ಶಾಸಕ ಪಿ ಟಿ ಥಾಮಸ್ ಪೊಲೀಸರನ್ನು ಆಗ್ರಹಿಸಿದ್ದಾರೆ. ಪಲ್ಸರ್ ಸುನಿಲ್ ಬಳಿ ಮೂರು ನಕಲಿ ಪಾಸ್ ಪೋರ್ಟ್‌ಗಳಿದ್ದು ಆತ ಅವುಗಳನ್ನು ಬಳಸಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿರುವುದು ಪತ್ತೆಯಾಗಿದೆ. ಸಿನೆಮಾದಲ್ಲಿ ಅವಕಾಶಕ್ಕಾಗಿ ತೀವ್ರವಾಗಿ ಹಂಬಲಿಸುವ ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಂಡು, ಬ್ಲಾಕ್ ಮೇಲ್ ಮಾಡಿ, ಬಳಿಕ ಅವರನ್ನು ಉಪಾಯದಿಂದ ದುಬೈಗೆ ಕಳ್ಳಸಾಗಣೆ ಮಾಡುವಲ್ಲಿಯೂ ಪಲ್ಸರ್ ಸುನಿಲ್ ಅಗ್ರಗಣ್ಯನಾಗಿದ್ದ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ದುಬೈಯಲ್ಲಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಸುನೀಲ್ ಸುರೇಂದ್ರನ್ ಎಂಬ ವ್ಯಕ್ತಿ ಇದೇ ಪಲ್ಸರ್ ಸುನಿಲ್ ಇರಬಹುದೇ ಎಂಬ ಗುಮಾನಿ ಈಗ ಪೊಲೀಸರಿಗೆ ಇದೆ. ಸುನೀಲ್ ಸುರೇಂದ್ರನ್ ನ ದುಬೈ ಸೆಕ್ಸ್ ರಾಕೆಟ್ ಬಗ್ಗೆ ಸಿಬಿಐ ತನಿಖೆ ಈಗಲೂ ಜಾರಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.