ಫಾರ್ಮಲ್ ಡ್ರೆಸ್ ಫಾರ್ ವುಮನ್: ಪ್ಯಾಂಟ್‌ಸೂಟ್
Team Udayavani, Mar 3, 2017, 3:45 AM IST
80-90ರ ದಶಕದ ಹೀರೋಗಳನ್ನು ನೆನಪಿಸಿಕೊಳ್ಳಿ. ಮೈಗೆ ಅಂಟಿಕೊಂಡಂತಿರೋ ಶರ್ಟ್, ಅಷ್ಟೇ ಬಿಗಿಯಾದ ಪಾದಕ್ಕಿಂತ ತುಸು ಮೇಲೆಯೇ ನಿಲ್ಲೋ ಪ್ಯಾಂಟ್. ಇದನ್ನು ಆ ಕಾಲದವರೆಲ್ಲ ಫಾಲೋ ಮಾಡಿದ್ದೂ ಆಯ್ತು. ಆ ಕಾಲದ ಟಾಮ್ ಬಾಯಿಶ್ ನೇಚರ್‌ನ ಹುಡುಗಿಯರಿಗೂ ಇದು ಇಷ್ಟವಾಗ್ತಿತ್ತು. ಬೋಲ್ಡ್ ಪಾತ್ರ ಆದ್ರೆ ಹೀರೋಯಿನ್‌ಗೂ ಇದೇ ಬಗೆಯ ಕಾಸ್ಟೂಮ್ ಇರಿ¤ತ್ತು. ಆದರೆ ಆ ಕಾಲದ ಸಂಪ್ರದಾಯಸ್ಥ ಹೆಣ್ಮಕ್ಕಳಿಂದ ಈ ಉಡುಗೆ ದೂರವಿತ್ತು.
ಈಗ ವರ್ಕಿಂಗ್ ಲೇಡೀಸ್ ಓಡಾಟಕ್ಕೆ, ಹೆಚ್ಚು ಹೊತ್ತು ಕೆಲ್ಸ ಮಾಡುವಾಗ ಆರಾಮವಾಗಿರೋ ಡ್ರೆಸ್‌ನ್ನೇ ಹೆಚ್ಚು ಆಯ್ಕೆ ಮಾಡ್ತಾರೆ. ಆದರೆ ವರ್ಕಿಂಗ್ ಪ್ಲೇಸ್‌ನಲ್ಲಿ ಸ್ಟೈಲಿಶ್ ಆಗಿಯೂ ಇರ್ಬೇಕು ಅನ್ನೋರಿಗೆ ಹೇಳಿಮಾಡಿಸಿದ್ದು ಪ್ಯಾಂಟ್‌ಸೂಟ್ ಸ್ಟೈಲ್.
ಆಫೀಸ್‌ಗೆ ಹೋಗೋ ದಾರಿಯಲ್ಲಿ ಒಂಚೂರು ಅತ್ತಿತ್ತ ಕಣ್ಣಾಡಿಸಿ ತಿಳಿಬಣ್ಣದ ಟಾಪ್, ಫಿಟ್ಟಿಂಗ್ ಇರೋ ಫಾರ್ಮಲ್ ಪ್ಯಾಂಟ್ ಮತ್ತೂಂದು ಸಪೂರದ ಬೆಲ್ಟ್ ತೊಟ್ಟುಕೊಂಡು ಓಡಾಡೋ ಹೆಣ್ಮಕ್ಕಳು ಕೆಲವೊಬ್ಬರಾದರೂ ಕಣ್ಣಿಗೆ ಬೀಳಬಹುದು. ಕೆಲವೊಮ್ಮೆ ಈ ಸೆಟ್ ಸಿಂಗಲ್ ಪೀಸ್‌ನಲ್ಲಿ ಸಿಗುತ್ತೆ. ಕೆಲವೊಮ್ಮೆ ಸಪರೇಟ್ಸ್ ಆಗಿರುತ್ತೆ. ಲುಕ್ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತೆ. ಸಿಂಪಲ್ ಪೀಸ್ ಆಗಿದ್ರೆ ಕೆಲವೊಮ್ಮೆ ಬೆಲ್ಟ್ ಬರಲ್ಲ. ಅದೇ ಸಪರೇಟ್ಸ್ ಆಗಿದ್ದರೆ ರಾ ಲುಕ್‌ನ ಬೆಲ್ಟ್ ಹಾಕ್ಕೊಳ್ಳಬಹುದು.
ಬಾಲಿವುಡ್‌ನಲ್ಲಿ ಈ ಸ್ಟೈಲ್ ಈಗ ಭಲೇ ಫೇಮಸ್. “ವರ್ಕ್ ವೇರ್ ಇನ್‌ಸ್ಪಿರೇಶನ್’ ಅನ್ನೋ ಟ್ಯಾಗ್‌ಲೈನ್‌ನಡಿ ಬಹಳಷ್ಟು ಮಂದಿ ಸೆಲೆಬ್ರಿಟಿಗಳು ಇದನ್ನು ತೊಟ್ಟು ಬೆಕ್ಕಿನ ನಡಿಗೆಯಲ್ಲಿ ಹೆಜ್ಜೆ ಹಾಕೋದನ್ನು ನೋಡºಹುದು. ಐಶ್ಚರ್ಯಾ ರೈಯನ್ನೇ ತಗೊಳ್ಳಿ. ತಾನು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸೆಲೆಬ್ರಿಟಿ ಶಿಸ್ತನ್ನೆಂದೂ ಮೀರಬಾರದು ಅಂತ ತನಗೆ ತಾನೇ ನಿಯಮ ಹಾಕ್ಕೊಂಡವರು. ಪಬ್ಲಿಕ್‌ನಲ್ಲಿ ಒಮ್ಮೆಯೂ ಆಕೆ ಅಸಂಬದ್ಧವಾಗಿ ವರ್ತಿಸಿದ್ದು, ಕೆಟ್ಟದಾಗಿ ಡ್ರೆಸ್‌ಮಾಡ್ಕೊಂಡು ಬಂದಿದ್ದು ಇಲ್ಲವೇ ಇಲ್ಲ ಅನ್ನಬಹುದೇನೋ. ತನ್ನ ಈ ಮನಃಸ್ಥಿತಿಗೆ ಟ್ರೆಂಡಿ “ವರ್ಕ್‌ವೇರ್’ ಡ್ರೆಸ್‌ಗಳು ಹೆಚ್ಚು ಹತ್ತಿರವಾಗಿದೆ ಅಂತ ಆಕೆ ಇತ್ತೀಚೆ ಗೊಮ್ಮೆ ಹೇಳ್ಕೊಂಡಿದ್ರು.
ಕಂಗನಾ ಬಿಂದಾಸ್ ಹೇಳಿಕೆಗಳು, ಪ್ರವೃತ್ತಿ ಒಂದು ಹವಾ ಸೃಷ್ಟಿಮಾಡಿದ್ರೆ, ಆಕೆ ತೊಡೋ ಡ್ರೆಸ್‌ಗಳು ಹುಡುಗರು ಹಾಗೂ ಹುಡುಗೀರಲ್ಲಿ ವಿಭಿನ್ನ ಅಲೆ ಎಬ್ಬಿಸುತ್ತವೆ. ಹುಡುಗಿಯರು ಆಕೆಯ ಡ್ರೆಸ್‌ಗೆ ಆದ್ರೆ, ಪಡ್ಡೆಗಳು ಆಕೆಗೇ ಶರಣು ಹೊಡೀತಾರೆ. ಇಂತಿಪ್ಪ ಕಂಗನಾ ಸ್ಟೈಲಿಶ್ ಡ್ರೆಸ್‌ಗೆ ಮತ್ತೂಂದು ಹೆಸರು. ಆಕೆಯೂ ಈಗ ಟ್ರೆಂಡಿ ಪ್ಯಾಂಟ್‌ಸೂಟ್‌ನ ಮೊರೆಹೋಗಿದ್ದಾರೆ.ಇತ್ತೀಚೆಗೆ ಪಾರ್ಟಿಗೆಲ್ಲೊ ಹೊರಟಿದ್ದಾಗ ಕ್ಯಾಮರಾ ಕಣ್ಣಿಗೆ ಬಿದ್ದ ಈ ಬೋಲ್ಡ್ ಸುಂದರಿ, ಇದು ತನ್ನ ಸ್ಟೈಲ್ ಸ್ಟೇಟ್‌ಮೆಂಟ್ ಅಂತ ಸ್ಟೈಲಿಶ್ ಆಗಿ ಹೇಳಿದ್ರು.
ಅನುಷ್ಕಾ ಶರ್ಮಾ ಎಂಬ ನೇರ ಸುಂದರಿ ಇತ್ತೀಚೆಗೆ ಫೆಮಿನಾ ಫೊಟೋಶೂಟ್‌ನಲ್ಲಿ ಈ ಡ್ರೆಸ್ ನಲ್ಲಿ ಕಡು ನೀಲಿಬಣ್ಣದ ವರ್ಕ್ ವೇರ್ ಮಾದರಿಯ ಪ್ಯಾಂಟ್‌ಸೂಟ್‌ನಲ್ಲಿ ಬಂದಿದ್ರು. ಆಕೆಯ ಅಥ್ಲೆಟ್ ಬಾಡಿಸ್ಟೈಲ್‌ಗೆ ಈ ಡ್ರೆಸ್ ಹೇಳಿ ಮಾಡಿಸಿದ ಹಾಗಿತ್ತು. ನೀವೂ ಇಂಥ ಡ್ರೆಸ್ ಹಾಕ್ಕೊಂಡರೆ ಕಾರ್ಪೊರೇಟ್ ಲುಕ್ ನಿಮ್ಮದಾಗುತ್ತೆ. ನಿಮ್ಮ ಪರ್ಸನಾಲಿಟಿ, ಬಣ್ಣ, ಉದ್ದ, ಅಗಲ ಎಲ್ಲ ನೋಡ್ಕೊಂಡು ಅದಕ್ಕೆ ಸರಿಹೊಂದೋ ವರ್ಕ್ ವೇರ್ ಪ್ಯಾಂಟ್ ಸೂಟ್ ಹಾಕ್ಕೊಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.