ಚಂದ್ರಲೋಕ ಪ್ರವಾಸ ಗಗನಯಾತ್ರಿಗೆ ಅನಾರೋಗ್ಯ ಭೂತ
Team Udayavani, Mar 3, 2017, 10:36 AM IST
ನ್ಯೂಯಾರ್ಕ್: ನಿರಂತರ ವಾಂತಿ, ಏದುಸಿರು ಸಮಸ್ಯೆ, ಮೂತ್ರದ ಒತ್ತಡ… ಚಂದ್ರನ ವಾತಾವರಣದಲ್ಲಿ ಒಂದು ವಾರ ಕಳೆಯಲಿರುವ ಗಗನಯಾತ್ರಿಗಳಿಗೆ ಈ ಸಮಸ್ಯೆ ತಪ್ಪಿದ್ದಲ್ಲ!
ಅಮೆರಿಕದ ಪ್ರತಿಷ್ಠಿತ ರಾಕೆಟ್ ನಿರ್ಮಾಣ ಸಂಸ್ಥೆ “ಸ್ಪೇಸ್ ಎಕ್ಸ್’ 2018ರಲ್ಲಿ ಇಬ್ಬರು ಪ್ರವಾಸಿಗರನ್ನು ಚಂದ್ರನಲ್ಲಿಗೆ ಕಳುಹಿಸುವುದಾಗಿ ಘೋಷಿಸಿ ವಾರವೂ ಕಳೆದಿಲ್ಲ. ಅದಾಗಲೇ ಆ ಪ್ರವಾಸಿಗರಿಗೆ ಬಾಹ್ಯಾಕಾಶದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆ ಕಾಡಬಹುದೆಂಬ ಲೆಕ್ಕಾಚಾರ ಶುರು.
ಲಂಡನ್ನಿನ ಬಾಹ್ಯಾಕಾಶ ಮತ್ತು ವಿಕ್ಷಿಪ್ತ ಪರಿಸರ ವೈದ್ಯಕೀಯ ವಿಭಾಗದ ಡೇನಿಯಲ್ ಗ್ರಾಂಟ್ ಹೀಗೊಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಕೆಲವು ಗಗನಯಾತ್ರಿಗಳಿಗೆ ಬಾಹ್ಯಾಕಾಶ ಪ್ರವೇಶಿಸಿದ ಕೆಲವೇ ಗಂಟೆಗಳಲ್ಲಿ, ಮತ್ತೆ ಕೆಲವರಿಗೆ ಮರುದಿನ ಅನಾರೋಗ್ಯ ಕಾಡುತ್ತದೆ. ಉಸಿರಾಟ ಕಷ್ಟವಾಗಿ ಮುಖ ಹಿಂಡುವಿಕೆ, ಕಾಲುಗಳು ಸಪೂರ ಆಗುವುದು, ದೇಹದಲ್ಲೇನೋ ದ್ರವ ಸಂಚಾರ, ಮುಗ್ಗರಿಸಿ ಬಿದ್ದಂತೆ ಅನಿಸುತ್ತದೆ. ಅಲ್ಲದೆ, ಮೂಳೆ ಮತ್ತು ಸ್ನಾಯುಗಳ ಆರೋಗ್ಯದಲ್ಲೂ ಗಣನೀಯ ಏರುಪೇರಾಗುತ್ತದೆ. ಮೂತ್ರ ಬಂದಂತೆ ಆದರೂ ಬರುವುದಿಲ್ಲ, ಮಲವಿಸರ್ಜನೆಯಲ್ಲೂ ಸಂಕಷ್ಟ, ಸರಿಯಾಗಿ ನಿದ್ರೆ ಬರುವುದಿಲ್ಲ- ಮುಂತಾದ ಸಮಸ್ಯೆ ಕಾಡುತ್ತದೆ ಎಂದಿದ್ದಾರೆ.
ವಿಕಿರಣ ತಜ್ಞರು ಹೇಳುವಂತೆ, ಬಾಹ್ಯಾಕಾಶದಲ್ಲಿ ಭೂಮಿಗಿಂತ 100 ಪಟ್ಟು ಶಕ್ತಿಶಾಲಿ ವಿಕಿರಣಗಳು ಅಪ್ಪಳಿಸುತ್ತಿರುತ್ತವೆ. ಗಗನಯಾತ್ರಿ ಎಂಥದ್ದೇ ಗಡಸು ವಸ್ತ್ರ ಧರಿಸಿದರೂ, ವಿಕಿರಣ ತಗುಲಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ. ಗಗನಯಾತ್ರಿಗಳಿಗೆ ಆಯಸ್ಸು ಕಡಿಮೆ ಎಂಬ ವಾದ ಈ ಹಿಂದೆ ಎದ್ದಿತ್ತು. ಇದು ನಿಜ ಕೂಡ ಎಂದು ವೈದ್ಯರು ಭಯ ಹುಟ್ಟಿಸುತ್ತಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಅಮೆರಿಕದ ಪ್ರತಿಷ್ಠಿತ ರಾಕೆಟ್ ನಿರ್ಮಾಣ ಸಂಸ್ಥೆ ಸ್ಪೇಸ್ ಎಕ್ಸ್ ಈ ಯೋಜನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.