ನದಿ ನೀರು ಬಳಕೆಗೆ ಕೋಲ ಕಂಪೆನಿಗಳಿಗೆ ಹೈ ಅನುಮತಿ
Team Udayavani, Mar 3, 2017, 10:51 AM IST
ತಿರುನಲ್ವೇಲಿ: ತಂಪು ಪಾನೀಯ ಕಂಪನಿಗಳಾದ ಪೆಪ್ಸಿ ಮತ್ತು ಕೋಕಕೋಲಗಳಿಗೆ ತಮೀರಾಬರಣಿ ನದಿಯಿಂದ ನೀರು ಪಡೆಯಲು ಮದ್ರಾಸ್ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ. ಇದನ್ನು ವಿರೋಧಿಸಿ ಹಲವಾರು ಜನರು ಮಂಡಿವರೆಗೂ ಇದ್ದ ನದಿ ನೀರಿನಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಪೆಪ್ಸಿ ಕೋಲದಂಥ ಬಹುರಾಷ್ಟ್ರೀಯ ಕಂಪನಿಗಳಿಗೆ ತಂಪು ಪಾನೀಯಗಳಿಗಷ್ಟೇ ಅಲ್ಲದೆ ಕುಡಿಯುವ ನೀರಿನ ಬಾಟಲಿ ತಯಾರಿಕೆಗೂ ನೀರು ಪಡೆದುಕೊಳ್ಳಲು ಕೋರ್ಟ್ ಅನುಮತಿ ನೀಡಿದೆ. ರೈತರು ವ್ಯವಸಾಯಕ್ಕಾಗಿ ನೀರಿನ ಕೊರತೆ ಅನುಭವಿಸುತ್ತಿರುವ ವೇಳೆ ತಂಪು ಪಾನೀಯ ಕಂಪನಿಗಳು ನೀರು ಬಳಸಿಕೊಳ್ಳದಂತೆ ಸರಕಾರ ತಡೆದಿಲ್ಲ ಎಂದು ಸರಕಾರದ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡು ವ್ಯಾಪಾರಿಗಳ ಒಕ್ಕೂಟ ಪೆಪ್ಸಿ ಕೋಲ ಪಾನೀಯಗಳ ಮೇಲೆ ನಿಷೇಧ ಹೇರಿರುವ ಬೆನ್ನಲ್ಲೇ ಈ ತೀರ್ಪು ಹೊರಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.