ನೊಡೋಣ, ಪರಿಶೀಲಿಸೋಣ…
Team Udayavani, Mar 3, 2017, 11:00 AM IST
ಬ್ಯಾಂಕ್‌ಗಳ ಶುಲ್ಕ ಕುರಿತು ಸಚಿವ ರವಿಶಂಕರ್ ಪ್ರಸಾದ್ ಅಭಿಮತ
ಹೊಸದಿಲ್ಲಿ: ತಿಂಗಳಲ್ಲಿ ನೀಡಲಾಗುವ ನಾಲ್ಕು ಉಚಿತ ವಹಿವಾಟಿನ ನಂತರ ಹಾಗೂ ವಿತ್‌ಡ್ರಾ ಮತ್ತು ಡಿಪಾಸಿಟ್‌ಗಳ ಮೇಲೆ ಶುಲ್ಕ ಪಡೆಯುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್, ಹೆಚ್ಚಿನ ಮಾಹಿತಿ ಸಿಕ್ಕ ಬಳಿಕ ಪರಿಶೀಲಿಸುವುದಾಗಿ ಹೇಳಿದ್ದಾರೆ. ಡಿಜಿಟಲ್ ಪಾವತಿ ಬಳಕೆದಾರರ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳ ಆಗಿದೆ. 1.72 ಕೋಟಿಗೂ ಜಾಸ್ತಿ ಜನರು ಸರಕಾರದ ಭೀಮ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಬ್ಯಾಂಕ್‌ಗಳು ಏನು ಹೇಳಿದ್ದವು?
ವಹಿವಾಟು ಮೇಲಿನ ಶುಲ್ಕಕ್ಕೆ ಸಂಬಂಧಿಸಿ ಪ್ರತಿಷ್ಠಿತ ಬ್ಯಾಂಕ್‌ಗಳಾದ ಎಚ್‌ಡಿಎಫ್ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್‌ಗಳು ಹೊಸ ನಿಯಮಗಳನ್ನು ಪ್ರಕಟಿಸಿ, ಮಾರ್ಚ್ 1ರಿಂದಲೇ ಇದು ಜಾರಿಗೆ ಬರುವುದಾಗಿ ಪ್ರಕಟಿಸಿತ್ತು.
– ತಿಂಗಳಿನ ನಾಲ್ಕು ಉಚಿತ ವಹಿವಾಟಿನ ಬಳಿಕ ಐದನೇ ವಹಿವಾಟು ಅಂದರೆ, ಪ್ರತಿ ವಿತ್‌ಡ್ರಾ ಮತ್ತು ಡಿಪಾಸಿಟ್‌ಗೆ (ಪ್ರತಿ ಸಾವಿರ ವಹಿವಾಟಿಗೆ 5.ರೂ.ನಂತೆ) ಕನಿಷ್ಠ 150 ರೂ ಶುಲ್ಕ ವಿಧಿಸಲಾಗುತ್ತದೆ.
– ತಿಂಗಳಲ್ಲಿ ಬ್ಯಾಂಕ್‌ಗಳು ನೀಡಿರುವ ಶುಲ್ಕ ರಹಿತ ವಹಿವಾಟು ಬಳಕೆಯಾದ ಬಳಿಕ ಪ್ರತಿಯೊಂದು ವಹಿವಾಟು ಶುಲ್ಕವನ್ನು ಒಳಗೊಂಡಿರುತ್ತದೆ.
– ಎಟಿಎಂ ನಿಯಮ ಬದಲಾವಣೆ ಇಲ್ಲ! ಎಟಿಎಂ ಬಳಕೆಗೆ ಸಂಬಂಧಿ ಗೊಂದಲ ಬೇಕಾಗಿಲ್ಲ. ಈಗಾಗಲೇ ಚಾಲ್ತಿಯಲ್ಲಿರುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
– ಖಾತೆ ಹೊಂದಿರುವ ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ತಿಂಗಳಿಗೆ ಐದು ಬಾರಿ ಹಣ ಪಡೆದರೆ (ವಿತ್‌ಡ್ರಾ) ಅವು ಉಚಿತ. ಆದರೆ 6ನೇ ವಹಿವಾಟಿನಿಂದ 20 ರೂ. ಸೇವಾ ಶುಲ್ಕ ನೀಡಬೇಕಾಗುತ್ತದೆ.
– ಖಾತೆ ಇಲ್ಲದ ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಬಾರಿ ಹಣ ಪಡೆದರೆ ಅವು ಉಚಿತ. ಆದರೆ 6ನೇ ವಹಿವಾಟಿನಿಂದ 20 ರೂ. ಸೇವಾ ಶುಲ್ಕ ನೀಡಬೇಕಾಗುತ್ತದೆ.
ಎಚ್‌ಡಿಎಫ್ಸಿಯಿಂದ ತೆರಿಗೆ
– ತಿಂಗಳಲ್ಲಿನ ನಾಲ್ಕು ಉಚಿತ ವಹಿವಾಟಿನ ನಂತರದ ವಹಿವಾಟಿಗೆ ಪಡೆಯಲಾಗುವ 150 ರೂ. ಶುಲ್ಕದ ಜತೆ ತೆರಿಗೆ ಮತ್ತು ಸೆಸ್ ಕೂಡ ಪಡೆಯಲಾಗುತ್ತದೆ.
– ಖಾತೆ ಹೊಂದಿರುವ ಬ್ಯಾಂಕ್‌ನಲ್ಲಿ ವಿತ್‌ಡ್ರಾ ಮತ್ತು ಡಿಪಾಸಿಟ್ ಮಿತಿ 2 ಲಕ್ಷ ರೂ. ಆಗಿದ್ದು, ಇದಕ್ಕಿಂತ ಜಾಸ್ತಿ ವಹಿವಾಟು ಮಾಡಿದಲ್ಲಿ ಅವೆಲ್ಲದಕ್ಕೂ ಶುಲ್ಕ ನೀಡಬೇಕಾಗುತ್ತದೆ.
ಪರಿಣಾಮ ಏನೇನು, ಹೇಗೆ?
– ಉಳಿತಾಯ ಮತ್ತು ವೇತನ (ಸ್ಯಾಲರಿ) ಖಾತೆದಾರರಿಗೆ ವಹಿವಾಟು ಶುಲ್ಕ ಅನ್ವಯವಾಗಲಿದೆ.
– ಪ್ರೈಮ್, ಕ್ಲಾಸಿಕ್, ಪ್ರಿಫರ್ಡ್, ಇಂಪೇರಿಯ ಅಥವಾ ಇತರೆ ಗ್ರಾಹಕರಿಗೂ ಅನ್ವಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.