ನೋಟು ರದ್ದತಿಯಿಂದ ವಹಿವಾಟಿಗೆ ತೊಂದರೆ


Team Udayavani, Mar 3, 2017, 3:06 PM IST

hub2.jpg

ಹುಬ್ಬಳ್ಳಿ: ನೋಟುಗಳ ಅಪನಗದೀಕರಣ ಹಲವು ಗೊಂದಲ, ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಇದರ ನೈಜ ಪರಿಣಾಮಗಳ ಬಗ್ಗೆ ಪ್ರತಿಷ್ಠಿತ ಎಂಬಿಎ ಕಾಲೇಜು ಹುಬ್ಬಳ್ಳಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. ವಹಿವಾಟಿಗೆ ತೊಂದರೆಯಾಗಿದೆ ಎಂದು ಶೇ. 80ರಷ್ಟು ವ್ಯಾಪಾರಸ್ಥರು ಹೇಳಿದ್ದ ಸಮೀಕ್ಷೆಯಲ್ಲಿ ಗೋಚರವಾಗಿದೆ. 

2016ರ ನವೆಂಬರ್‌ 8ರಂದು ಕೇಂದ್ರ ಸರಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಅಪನಗದೀಕರಣಗೊಳಿಸಿ ಆದೇಶ ಹೊರಡಿಸಿತ್ತು. ಜನ ಖಾತೆಗಳಿಗೆ ಹಳೆಯ ನೋಟುಗಳನ್ನು ಜಮೆ ಮಾಡಲು, ಹೊಸದಾಗಿ ಹಣ ಪಡೆಯಲು ಸುಮಾರು ಎರಡು ತಿಂಗಳ ಕಾಲ ಪರದಾಡಿದರು. ಈ ಕ್ರಮದ ಕುರಿತಾದ ಪರ-ವಿರೋಧ ಚರ್ಚೆಗಳು ಇಂದಿಗೂ ಮುಂದುವರಿದಿವೆ. 

ಸಮೀಕ್ಷೆ ನಡೆದಿದ್ದು ಹೀಗೆ..: ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ಮತ್ತು ಸಂಶೋಧನಾ ಸ್ಕೂಲ್‌ (ಎಸ್‌ಎಂಎಸ್‌ ಆರ್‌) ವಿದ್ಯಾರ್ಥಿಗಳ ತಂಡ ನೋಟುಗಳ ಅಪನಗದೀಕರಣದಿಂದ ಆಗಿರುವ ಪರಿಣಾಮಗಳ ಕುರಿತಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಮೀಕ್ಷೆ ಕೈಗೊಂಡಿದೆ.

ಅಪನಗದೀಕರಣದ ಬಗ್ಗೆ ಜನರ ವ್ಯಾಖ್ಯಾನ, ವ್ಯಾಪಾರ-ವಹಿವಾಟು ಮೇಲಾದ ಪರಿಣಾಮ, ಹಳೇ ನೋಟು ಬದಲಾವಣೆಯಲ್ಲಿ ಅನುಭವಿಸಿದ ಬವಣೆ, ಮದುವೆಯಂತಹ ಕಾರ್ಯಕ್ರಮಗಳಲ್ಲಿ ಆದ ಸಮಸ್ಯೆ ಕುರಿತಾಗಿ ಮಾಹಿತಿ ಸಂಗ್ರಹಿಸಿದೆ. ಎಸ್‌ಎಂಎಸ್‌ಆರ್‌ ತಂಡ ಸಮೀಕ್ಷೆಗೆ ಮುಂದಾಗಿ, 1000 ಜನರಿಂದ ಮಾಹಿತಿ ಸಂಗ್ರಹಿಸಿದೆ. ಇಬ್ಬರಿಂದ ಆರು ಜನರಿರುವ ಹಾಗೂ ಕನಿಷ್ಠ 5000ದಿಂದ ಗರಿಷ್ಠ 20 ಸಾವಿರ ಆದಾಯವಿರುವ ಕುಟುಂಬಗಳಿಂದ ಮಾಹಿತಿ ಪಡೆಯಲಾಗಿದೆ. 

ಶೇ. 65ರಷ್ಟು ಜನರಿಗೆ ಗೊಂದಲ: ಅಪನಗದೀಕರಣ ಕುರಿತಾದ ಸಮೀಕ್ಷೆಗೆ ಪ್ರತಿಕ್ರಿಯಿಸಿದ ಶೇ. 65ರಷ್ಟು ಜನರು ಸ್ಪಷ್ಟ ವಿವರಣೆ ನೀಡದೆ, ತಮ್ಮದೇ ಆದ ವ್ಯಾಖ್ಯಾನ ನೀಡಿದ್ದಾರೆ. ಕೆಲವರು ಇದು ಎಲೆಕ್ಟ್ರಾನಿಕ್‌ ವಹಿವಾಟು ಎಂದರೆ, ಇನ್ನು ಕೆಲವರು ನಗದು ರಹಿತ ಅರ್ಥವ್ಯವಸ್ಥೆ, ನಕಲಿ ನೋಟುಗಳ ತಡೆಗೆ ಕ್ರಮ, ಕಪ್ಪು ಹಣ ಮತ್ತು ಭ್ರಷ್ಟಾಚಾರ ತಡೆ ಎಂದಿದ್ದಾರೆ.

ಶೇ. 32ರಷ್ಟು ಜನರು 500 ಹಾಗೂ 1000ರೂ. ಮುಖಬೆಲೆಯ ರದ್ದತಿಯೇ ಅಪನಗದೀಕರಣ ಎಂದಿದ್ದರೆ, ಶೇ. 28ರಷ್ಟು ಜನರು ಕಪ್ಪುಹಣ ನಿಯಂತ್ರಣಕ್ಕೆ ಮಾರ್ಗವೆಂದು, ಶೇ. 21ರಷ್ಟು ಜನರು ಆರ್ಥಿಕ ಸ್ವಾತಂತ್ರ್ಯವೆಂದು, ಶೇ. 19ರಷ್ಟು ಜನರು ಎಲೆಕ್ಟ್ರಾನಿಕ್‌ ವಹಿವಾಟು ವಿಧಾನವೆಂದು ವ್ಯಾಖ್ಯಾನಿಸಿದ್ದಾರೆ. 

ಹಳೆಯ ನೋಟುಗಳ ಬದಲಾವಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಶೇ.36ರಷ್ಟು ಜನರು ಹೆಚ್ಚಿನ ತೊಂದರೆ ಅನುಭವಿಸಿದ್ದಾಗಿ ಹೇಳಿದ್ದರೆ, ಶೇ. 27ರಷ್ಟು ಜನರು ಸ್ವಲ್ಪ ತೊಂದರೆ ಆಗಿದೆ ಎಂದು, ಶೇ. 9ರಷ್ಟು ಜನರು ಅತ್ಯಲ್ಪ ಎಂದು ಹೇಳಿದ್ದರೆ, ಶೇ. 13ರಷ್ಟು ಜನರು ಏನೂ ಹೇಳಿಲ್ಲ. ಅಪನಗದೀಕರಣದಿಂದ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ತೊಂದರೆಯಾಗಿದೆ ಎಂಬ ಅಭಿಪ್ರಾಯ ಶೇ. 50ಕ್ಕಿಂತ ಹೆಚ್ಚು ಜನರಿಂದ ವ್ಯಕ್ತವಾಗಿದ್ದರೆ, ಶೇ. 21ರಷ್ಟು ಜನರು ಪರಿಣಾಮ ಬೀರಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 

ವಹಿವಾಟು ಮೇಲೆ ಪರಿಣಾಮ: ಅಪನಗದೀಕರಣದಿಂದ ವ್ಯಾಪಾರ-ವಹಿವಾಟಿಗೆ ತೊಂದರೆಯಾಗಿದೆ ಎಂದು ಶೇ. 80ರಷ್ಟು ವ್ಯಾಪಾರಸ್ಥರು ಅನಿಸಿಕೆ ವ್ಯಕ್ತಪಡಿಸಿದ್ದರೆ, ಶೇ. 50ರಷ್ಟು ಜನರು ಕೆಟ್ಟ ಪರಿಣಾಮ ಬೀರಿದೆ ಎಂದಿದ್ದಾರೆ. ಶೇ. 32ರಷ್ಟು ಜನರು, ಅಪನಗದೀಕರಣದಿಂದ ವಹಿವಾಟಿಗೆ ಶೇ.50ರಿಂದ ಶೇ. 75ರಷ್ಟು ಹೊಡೆತ ಬಿದ್ದಿದೆ ಎಂದಿದ್ದಾರೆ.

ಶೇ. 25ರಷ್ಟು ಪರಿಣಾಮ ಬೀರಿದೆ ಎಂದವರ ಸಂಖ್ಯೆಯೂ ಶೇ. 32ರಷ್ಟಿದೆ. ಶೇ. 7ರಷ್ಟು ಜನರು ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾಗಿ ಸಮೀಕ್ಷೆ ತಿಳಿಸಿದೆ. ದೀರ್ಘಾವಧಿ ವ್ಯಾಪಾರ-ವಹಿವಾಟಿನ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯವನ್ನು ಶೇ. 76ರಷ್ಟು ಜನ ವ್ಯಕ್ತಪಡಿಸಿದ್ದರೆ, ಗಂಭೀರ ಪರಿಣಾಮ ಆಗುತ್ತದೆ ಎನ್ನುವ ಆತಂಕ ಶೇ. 58ರಷ್ಟು ಜನರಲ್ಲಿರುವುದೂ ಗೊತ್ತಾಗಿದೆ.

ದೀರ್ಘಾವಧಿ ಆರ್ಥಿಕತೆ ಮೇಲೂ ಅಪನಗದೀಕರಣ ದೊಡ್ಡ ಪರಿಣಾಮ ಬೀರಲಿದೆ ಎಂದು ಶೇ. 36ರಷ್ಟು ಜನ ಹೇಳಿದ್ದಾರೆ. ಸ್ವಲ್ಪ ಪರಿಣಾಮ ಆದೀತೆಂದು ಶೇ. 28ರಷ್ಟು ಜನ, ಅತ್ಯಲ್ಪ ಪರಿಣಾಮವೆಂದು ಶೇ. 12ರಷ್ಟು ಜನ ಹೇಳಿದ್ದರೆ, ಶೇ. 2ರಷ್ಟು ಜನ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಸಣ್ಣ ಆದಾಯ ಇರುವವರು, ಸಣ್ಣ ವ್ಯಾಪಾರಸ್ಥರ ಮೇಲೇ ಅಪನಗದೀಕರಣದ ಪರಿಣಾಮ ಹೆಚ್ಚೆಂಬ ಅಭಿಪ್ರಾಯ ಸಮೀಕ್ಷೆ ವೇಳೆ ವ್ಯಕ್ತವಾಗಿದೆ. 

* ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.