ಉ.ಪ್ರ. 6ನೇ ಹಂತದ ಮತದಾನ : ಭಾರತ-ನೇಪಾಲ ಗಡಿ ಬಂದ್
Team Udayavani, Mar 3, 2017, 7:46 PM IST
ಮಹಾರಾಜ್ಗಂಜ್, ಉತ್ತರ ಪ್ರದೇಶ: ಏಳು ಹಂತಗಳ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಆರನೇ ಹಂತದ ಮತದಾನ ಆರಂಭಕ್ಕೆ 24 ತಾಸುಗಳಿರುವಾಗಲೇ ಉತ್ತರಪ್ರದೇಶಕ್ಕೆ ತಾಗಿಕೊಂಡಿರುವ ಭಾರತ – ನೇಪಾಲ ಗಡಿಯನ್ನು ಮುಚ್ಚಲಾಗಿದೆ.
ನಾಳೆ, ಮಾರ್ಚ್ 4ರ ಶನಿವಾರದಂದು ಉತ್ತರ ಪ್ರದೇಶದ 49 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನಕ್ಕೆ 24 ತಾಸು ಮುನ್ನ 84 ಕಿ.ಮೀ. ಉದ್ದದ ಭಾರತ – ನೇಪಾಲ ಗಡಿಯನ್ನು ಮುಚ್ಚಲಾಗಿದ್ದು ಮತದಾನ ಮುಗಿಯುವ ತನಕವೂ ಅದು ಮುಚ್ಚಿರುತ್ತದೆ. ಈ ಅವಧಿಯಲ್ಲಿ ಕೇವಲ ತುರ್ತು ಸಂಚಾರದ ವಾಹನಗಳಿಗೆ ಮಾತ್ರವೇ ಗಡಿ ದಾಟಿ ಹೋಗಿ – ಬರಲು ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೀರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮತದಾನದ ವೇಳೆ ಜನರ ಅಕ್ರಮ ಹಾಗೂ ಕಾನೂನು ಬಾಹಿರ ಸಂಚಾರವನ್ನು ತಡೆಯುವ ಸಲುವಾಗಿ ವ್ಯಾಪಾರ ವಹಿವಾಟು ಹಾಗೂ ಸಾಗಟ ತಾಣಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಹಾರಾಜಗಂಜ್ ಜಿಲ್ಲೆಯ ಭಾರತ – ನೇಪಾಲ ಗಡಿಯಲ್ಲಿನ ಸೋನೌಲಿ ತಾಣದಲ್ಲಿ ಈ ರೀತಿಯ ಎರಡು ಕ್ಯಾಮರಾಗಳನ್ನು ಈಗಾಗಲೇ ಅಳವಡಿಸಲಾಗಿದೆ ಎಂದು ವೀರೇಂದ್ರ ಕುಮಾರ್ ಸಿಂಗ್ ತಿಳಿಸಿದರು.
ಆರನೇ ಹಂತದಲ್ಲಿ ನಾಳೆ ಶನಿವಾರ ಮತದಾನಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರಗಳೆಂದರೆ ಸಿಸ್ವಾ, ನೌತನ್ವಾ, ಫ್ರೆಂಡಾ, ಪನಿಯಾರಾ ಹಾಗೂ ಮಹಾರಾಜಾಗಂಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.