ಭಾರತ-ಆಸ್ಟ್ರೇಲಿಯಾ  ಬೆಂಗಳೂರು ಟೆಸ್ಟ್‌ ನೋಟ


Team Udayavani, Mar 4, 2017, 2:18 PM IST

11.jpg

ಇತಿಹಾಸದಿಂದ ನಾವು ಪಾಠ ಕಲಿಯುವುದಿಲ್ಲ. ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲೂ ನಾವು ತಡಬಡಾಯಿಸಿದ್ದೆವು. ಅವತ್ತು ಡ್ರಾ ತೃಪ್ತಿ ಸಿಕ್ಕಿತ್ತು. ನ್ಯೂಜಿಲೆಂಡ್‌ ಎದುರಿನ ಪ್ರಥಮ ಟೆಸ್ಟ್‌ನಲ್ಲೂ 197 ರನ್‌ನಿಂದ ಗೆಲ್ಲುವ ಮುನ್ನ ಕನಿಷ್ಠ “ಸ್ಪರ್ಧೆ ನಡೆದಿತ್ತು. ಭಾರತದ ಮೊದಲ ಇನ್ನಿಂಗ್ಸ್‌ ಸ್ಕೋರ್‌ ಅವತ್ತು 318. ಭಾರತ ತನ್ನ ನೆಲದಲ್ಲಾಡುವ ಸರಣಿಯ ಮೊದಲ ಟೆಸ್ಟ್‌ ನಲ್ಲಿ ತಿಣುಕಾಡುವುದು ಸಂಪ್ರದಾಯದಂತೆ ನಡೆದುಬಂದಿದೆ. ಈ ಕುರಿತು ಎಚ್ಚರಿಕೆ ಹೊಂದುವ ಬದಲು ಖುದ್ದು ಬಿಸಿಸಿಐ ಮೂರೇ ದಿನದಲ್ಲಿ ಮುಕ್ತಾಯವಾಗುವ “ಡಾಕ್ಟರ್‌x ಪಿಚ್‌ ನಿರ್ಮಾಣಕ್ಕೆ ಆದೇಶ ನೀಡಿದ್ದು ಬೂಮರ್‍ಯಾಂಗ್‌ ಆಗಿದೆ.

ಆಸ್ಟ್ರೇಲಿಯಾಕ್ಕೆ ಈ ಸಲವೂ ಭಾರತ ಪ್ರವಾಸ ಕಬ್ಬಿಣದ ಕಡಲೆಯಾಗಲಿದೆ ಎಂಬ ಕ್ರಿಕೆಟ್‌ ಪ್ರೇಮಿಗಳ ಲೆಕ್ಕಾಚಾರ, ನಿರೀಕ್ಷೆಗೆ ಪುಣೆ ಟೆಸ್ಟ್‌ ಪಂದ್ಯ ಮರ್ಮಾಘಾತವಿಕ್ಕಿದೆ. ಮೂರೇ ದಿನದಲ್ಲಿ ಕೊಹ್ಲಿ ಪಡೆ 333 ರನ್ನುಗಳ ಸೋಲುಂಡು ತತ್ತರಿಸಿದೆ. ಸಹಜವಾಗಿಯೇ ಎಲ್ಲರ ದೃಷ್ಟಿಯೀಗ ಉದ್ಯಾನ ನಗರಿ ಬೆಂಗಳೂರಿನತ್ತ ನೆಟ್ಟಿದೆ.

ಬೆಂಗಳೂರು “ಬಾರ್ಡರ್‌-ಗಾವಸ್ಕರ್‌ ಟ್ರೋಫಿ’ ಸರಣಿಯ ಮುಂದಿನ ನಿಲ್ದಾಣ. ಇಲ್ಲಿ ಸರಣಿಯ ದ್ವಿತೀಯ ಟೆಸ್ಟ್‌ ನಡೆಯಲಿದ್ದು, ಭಾರತ ತಿರುಗೇಟು ನೀಡಲೇಬೇಕಾದ ಒತ್ತಡ ಹಾಗೂ ಅನಿವಾರ್ಯತೆಯಲ್ಲಿದೆ. ಇಲ್ಲೇನು ಸಂಭವಿಸೀತು ಎಂದು ಭವಿಷ್ಯ ನುಡಿಯುವುದು ಸುಲಭವಲ್ಲ. ಆದರೆ ಹಿಂದೇನಾಗಿತ್ತು, ಭಾರತ-ಆಸ್ಟ್ರೇಲಿಯಾ ಇಲ್ಲಿ ಎದುರಾದಾಗ ಎಂತಹ ಫ‌ಲಿತಾಂಶ ದಾಖಲಾಗಿತ್ತು ಎಂಬುದನ್ನು ಒಮ್ಮೆ ಅವಲೋಕಿಸಲಡ್ಡಿಯಿಲ್ಲ.

ಬೆಂಗಳೂರಿನ “ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಈವರೆಗೆ ಭಾರತ- ಆಸ್ಟ್ರೇಲಿಯಾ 5 ಟೆಸ್ಟ್‌ಗಳಲ್ಲಿ ಮುಖಾ ಮುಖೀಯಾಗಿವೆ. ಕಾಂಗರೂ ಪಡೆ ಎರಡನ್ನು ಗೆದ್ದಿದೆ. ಭಾರತಕ್ಕೆ ಒಲಿದದ್ದು ಒಂದೇ ಗೆಲುವು. ಉಳಿದೆರಡು ಟೆಸ್ಟ್‌ ಡ್ರಾಗೊಂಡಿವೆ.

1979ರಲ್ಲಿ ವಿಶ್ವನಾಥ್‌ ವೈಭವ
ಭಾರತ-ಆಸ್ಟ್ರೇಲಿಯಾ ಮೊದಲ ಸಲ ಬೆಂಗಳೂರಿನಲ್ಲಿ ಮುಖಾ ಮುಖೀಯಾದದ್ದು 1979ರಲ್ಲಿ. ಅದು 6 ಪಂದ್ಯಗಳ ಸರಣಿಯ 2ನೇ ಟೆಸ್ಟ್‌ ಆಗಿತ್ತು. ನಾಯಕರಾಗಿದ್ದವರು ಸುನಿಲ್‌ ಗಾವಸ್ಕರ್‌ ಮತ್ತು ಕಿಮ್‌ ಹ್ಯೂಸ್‌. ಪ್ರತಿಕೂಲ ಹವಾಮಾನ ಕಾಡಿದ್ದರಿಂದ ಪಂದ್ಯ ನೀರಸ ಡ್ರಾದಲ್ಲಿ ಕೊನೆಗೊಂಡಿತು. ಚೊಚ್ಚಲ ಟೆಸ್ಟ್‌ ಆಡಲಿಳಿದ ಸ್ಪಿನ್ನರ್‌ ಶಿವಲಾಲ್‌ ಯಾದವ್‌ ದಾಳಿಗೆ (49ಕ್ಕೆ 4) ಕುಸಿದ ಆಸ್ಟ್ರೇಲಿಯ 333ಕ್ಕೆ ಆಲೌಟ್‌ ಆಗಿತ್ತು. ಭಾರತದ ಪರ ದಿಲೀಪ್‌ ವೆಂಗ್‌ಸರ್ಕಾರ್‌ (112) ಮತ್ತು ತವರಿನ ಬ್ಯಾಟಿಂಗ್‌ ಕಲಾಕಾರ ಜಿ.ಆರ್‌.ವಿಶ್ವನಾಥ್‌ (161) ಅಮೋಘ ಪ್ರದರ್ಶನವಿತ್ತರು. ಸ್ಕೋರ್‌ 5ಕ್ಕೆ 457 ಡಿಕ್ಲೇರ್‌. ಬ್ರೂಸ್‌ ಯಾಡ್ಲಿì 107 ರನ್ನಿತ್ತು 4 ವಿಕೆಟ್‌ ಕಿತ್ತರು. ಆಸೀಸ್‌ ದ್ವಿತೀಯ ಸರದಿಯಲ್ಲಿ 3ಕ್ಕೆ 77 ರನ್‌ ಮಾಡಿತು. ಅಲ್ಲಿಗೆ ಪಂದ್ಯಕ್ಕೆ ಡ್ರಾ ಮುದ್ರೆ ಬಿತ್ತು. ಈ ಮೂರೂ ವಿಕೆಟ್‌ ಯಾದವ್‌ ಬುಟ್ಟಿಗೆ ಬಿದ್ದಿತ್ತು.

1998ರಲ್ಲಿ ಸೋಲಿನ ನಂಟು
1998ರಲ್ಲಿ ಸರಣಿಯ 3ನೇ ಹಾಗೂ ಅಂತಿಮ ಪಂದ್ಯವನ್ನು ಇಲ್ಲಿ ಆಡಲಿಳಿಯುವಾಗ ಅಜರುದ್ದೀನ್‌ ನಾಯಕತ್ವದ ಭಾರತ 2-0 ಮುನ್ನಡೆಯಲ್ಲಿತ್ತು. ಆದರೆ ಮಾರ್ಕ್‌ ಟೇಲರ್‌ ಪಡೆ 8 ವಿಕೆಟ್‌ಗಳಿಂದ ಗೆದ್ದು ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಇತ್ತಂಡಗಳದ್ದು 400ರ ಸಾಧನೆ. ತೆಂಡುಲ್ಕರ್‌ ಅವರ 177 ರನ್‌ ಸಾಹಸದಿಂದ ಭಾರತ 424 ರನ್‌ ಪೇರಿಸಿತು. ಆಸ್ಟ್ರೇಲಿಯಾಕ್ಕೆ ಮಾರ್ಕ್‌ ವೋ (153) ಆಧಾರವಾದರು. ಸ್ಕೋರ್‌ 400ಕ್ಕೆ ಏರಿತು. ಆದರೆ ದ್ವಿತೀಯ ಸರದಿಯಲ್ಲಿ ಕ್ಯಾಸೊøàವಿಚ್‌ ದಾಳಿಗೆ (28ಕ್ಕೆ 5) ಸಿಲುಕಿ 169ಕ್ಕೆ ಕುಸಿದದ್ದು ಭಾರತಕ್ಕೆ ಮುಳುವಾಯಿತು. ಆಸೀಸ್‌ 2ಕ್ಕೆ 195 ರನ್‌ ಬಾರಿಸಿ ಗೆದ್ದು ಬಂದಿತು. ಆಗ ಕಪ್ತಾನ ಟೇಲರ್‌ 102 ರನ್‌ ಮಾಡಿ ಅಜೇಯರಾಗಿದ್ದರು.ಹರ್ಭಜನ್‌ ಸಿಂಗ್‌, ಡ್ಯಾರನ್‌ ಲೇಹ್ಮನ್‌ ಅವರಿಗೆ ಇದು ಚೊಚ್ಚಲ ಟೆಸ್ಟ್‌ ಆಗಿತ್ತು.

ಕ್ಲಾರ್ಕ್‌ ಸ್ಮರಣೀಯ ಪಾದಾರ್ಪಣೆ
2004-05ರ 4 ಪಂದ್ಯಗಳ ಟೆಸ್ಟ್‌ ಸರಣಿಗೆ ನಾಂದಿ ಹಾಡಿದ್ದೇ ಬೆಂಗಳೂರು. ಫ‌ಲಿತಾಂಶ-ಭಾರತಕ್ಕೆ 217 ರನ್‌ ಅಂತರದ ಸೋಲು! ಮೊದಲ ಟೆಸ್ಟ್‌ ಆಡಲಿಳಿದ ಮೈಕಲ್‌ ಕ್ಲಾರ್ಕ್‌ (151), ನಾಯಕ ಆ್ಯಡಂ ಗಿಲ್‌ಕ್ರಿಸ್ಟ್‌ (104) ಪ್ರಚಂಡ ಪ್ರದರ್ಶನವಿತ್ತು ಕಾಂಗರೂ ಮೊತ್ತವನ್ನು 474ಕ್ಕೆ ತಲುಪಿಸಿದರು. ಗಂಗೂಲಿ ಪಡೆ 246ಕ್ಕೆ ಕುಸಿಯಿತು. ಮೆಗ್ರಾತ್‌ (55ಕ್ಕೆ 4) ಆ್ಯಂಡ್‌ ಕಂಪೆನಿ ಘಾತಕ ದಾಳಿ ಸಂಘಟಿಸಿತ್ತು. ದ್ರಾವಿಡ್‌ ಅಪರೂಪಕ್ಕೆ ಖಾತೆ ತೆರೆಯದೇ ಹೋಗಿದ್ದರು. ಆಸೀಸ್‌ ಹರ್ಭಜನ್‌ ಸ್ಪಿನ್‌ ಸುಳಿಗೆ ಸಿಲುಕಿದರೂ (78ಕ್ಕೆ 6) 228 ರನ್‌ ಒಟ್ಟುಗೂಡಿಸಿತು. ಭಾರತಕ್ಕೆ ಲಭಿಸಿದ ಟಾರ್ಗೆಟ್‌ 457 ರನ್‌. ಆದರೆ 239ಕ್ಕೆ ಆಲೌಟ್‌. ದ್ರಾವಿಡ್‌ 60 ರನ್‌ ಮಾಡಿ ಶೂನ್ಯದ ಕೊರತೆ ನೀಗಿಸಿಕೊಂಡರು. ಇರ್ಫಾನ್‌ ಪಠಾಣ್‌ 55 ರನ್‌ ಹೊಡೆದರು. ಕ್ಲಾರ್ಕ್‌ ಚೊಚ್ಚಲ ಟೆಸ್ಟ್‌ನಲ್ಲೇ ಪಂದ್ಯಶ್ರೇಷ್ಠರಾಗಿ ಮೂಡಿಬಂದರು.

2008ರಲ್ಲಿ ಆಲ್‌ರೌಂಡರ್‌ ಜಹೀರ್‌
2008-09ರ ಸರಣಿಗೂ ಬೆಂಗಳೂರಿನಲ್ಲೇ ಮುಹೂರ್ತ ಇರಿಸಲಾಗಿತ್ತು. ಆಗಿನ ನಾಯಕರು ಧೋನಿ ಮತ್ತು ಪಾಂಟಿಂಗ್‌. ಪಂದ್ಯದ ಫ‌ಲಿತಾಂಶ ಡ್ರಾ. ಆಸ್ಟ್ರೇಲಿಯಾದ ಮೊದಲ ಸರದಿಯಲ್ಲಿ ಮಿಂಚಿದವರು ಪಾಂಟಿಂಗ್‌ (123), ಮೈಕಲ್‌ ಹಸ್ಸಿ (146), ಜಹೀರ್‌ ಖಾನ್‌ (91ಕ್ಕೆ 5) ಮತ್ತು ಇಶಾಂತ್‌ ಶರ್ಮ (77ಕ್ಕೆ 4). ಹೇಡನ್‌ ಶೂನ್ಯಕ್ಕೆ ಔಟಾದರೂ ಆಸೀಸ್‌ ಮೊತ್ತ 430ಕ್ಕೆ ಏರಿತು. ಭಾರತ ಜವಾಬು 360 ರನ್‌. ದ್ರಾವಿಡ್‌ 51, ಹರ್ಭಜನ್‌ 54, ಜಹೀರ್‌ 57 ರನ್‌ ಕೊಡುಗೆ ಸಲ್ಲಿಸಿದರು.

ದ್ವಿತೀಯ ಸರದಿಯಲ್ಲಿ ಆಸೀಸ್‌ 6ಕ್ಕೆ 228 ರನ್‌ಗಳಿಸಿ 299 ರನ್‌ ಟಾರ್ಗೆಟ್‌ ನೀಡಿತು. ಸೆಹವಾಗ್‌, ದ್ರಾವಿಡ್‌ 24 ರನ್‌ ಆಗುವಷ್ಟರಲ್ಲಿ ವಾಪಾಸಾದಾಗ ಸೋಲಿನ ಭೀತಿ ಎದುರಾದರೂ ತೆಂಡುಲ್ಕರ್‌-ಲಕ್ಷ್ಮಣ್‌ ತಂಡದ ರಕ್ಷಣೆಗೆ ನಿಂತರು. ಪಂದ್ಯ ಡ್ರಾ ಆಗುವಾಗ ಭಾರತದ ಸ್ಕೋರ್‌ 4ಕ್ಕೆ 177 ರನ್‌.

2010ರಲ್ಲಿ ಏಕೈಕ ಗೆಲುವು
ಬೆಂಗಳೂರಿನಲ್ಲಿ ಕಾಂಗರೂ ವಿರುದ್ಧ ಭಾರತಕ್ಕೆ ಏಕೈಕ ಗೆಲುವು ಒಲಿದದ್ದು 2010ರ 2 ಪಂದ್ಯಗಳ ಕಿರು ಸರಣಿಯಲ್ಲಿ. ಬೆಂಗಳೂರಿನಲ್ಲಿ ನಡೆದದ್ದು ದ್ವಿತೀಯ ಟೆಸ್ಟ್‌. ಗೆಲುವಿನ ಅಂತರ 7 ವಿಕೆಟ್‌. ಧೋನಿ ಪಡೆಯ ಪಾಲಿಗೆ ಇದು 2-0 ಕ್ಲೀನ್‌ಸಿÌàಪ್‌ ಸಾಹಸವಾಗಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯ 478 ರನ್‌ಗಳಿಸಿದರೆ, ಭಾರತ 495 ರನ್‌ ಪೇರಿಸಿತು. ನಾರ್ತ್‌ (128), ವಿಜಯ್‌ (139) ಶತಕ ಬಾರಿಸಿದರೆ, ತೆಂಡುಲ್ಕರ್‌ ದ್ವಿಶತಕ ಪರಾಕ್ರಮವಾಗಿತ್ತು (214). 2ನೇ ಇನ್ನಿಂಗ್ಸ್‌ನಲ್ಲಿ ಆಸೀಸ್‌ 223ಕ್ಕೆ ಕುಸಿಯಿತು. ಭಾರತ 207 ರನ್‌ ಗೆಲುವಿನ ಗುರಿಯನ್ನು 3 ವಿಕೆಟ್‌ ಕಳೆದುಕೊಂಡು ಯಶಸ್ವಿಯಾಗಿ ತಲುಪಿತು. ಚೇತೇಶ್ವರ್‌ ಪೂಜಾರ ಟೆಸ್ಟ್‌ಕ್ಯಾಪ್‌ ಧರಿಸಿದ್ದು ಇದೇ ಪಂದ್ಯದಲ್ಲಿ.

 ಎಚ್‌.ಪ್ರೇಮಾನಂದ ಕಾಮತ್‌

ಟಾಪ್ ನ್ಯೂಸ್

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.