ಕೈದಾಳದ ಚನ್ನಕೇಶವ


Team Udayavani, Mar 4, 2017, 2:32 PM IST

8.jpg

ಮುಂಬೈನಿಂದ ಬಂದಿದ್ದ ಗೆಳೆಯ ಸಿನಿಮಾ ಛಾಯಾಗ್ರಾಹಕ ಶಿವಕುಮಾರ್‌  ಮತ್ತು ನಾನು ತುಮಕೂರಿನಿಂದ ಬೆಳ್ಳಂಬೆಳಿಗ್ಗೆ ಚಹಾ ಕುಡಿದು ಶಿಲ್ಪಕಲೆಯ ತವರೂರಾದ ಕೈದಾಳದತ್ತ ಪ್ರಯಾಣ ಬೆಳೆಸಿದವು. ಸೂರ್ಯ ಆಗ ತಾನೇ ಉದಯಿಸಿದ್ದರೂ ಸಹ ಚುಮುಚುಮು ಚಳಿಯ ವಾತಾವರಣ ನಮ್ಮ ಮನಸ್ಸಿಗೆ ಮುದ ನೀಡುತ್ತಿತ್ತು.

ಕನ್ನಡನಾಡಿನ ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ದೇವಾಲಯಗಳನ್ನು ಕೆತ್ತಿದ ಅಮರಶಿಲ್ಪಿ ಎಂದು ಹೆಸರಾದ ಜಕಣಾಚಾರಿಯ ಜನ್ಮಸ್ಥಳವನ್ನು ನೋಡುವ ಕುತೂಹಲ ಯಾರಲ್ಲಿ ಇರುವುದಿಲ್ಲ ಹೇಳಿ?  ತುಮಕೂರು ನಗರದಿಂದ ಕುಣಿಗಲ್‌ ಮಾರ್ಗದಲ್ಲಿ ಕೇವಲ ನಾಲ್ಕು ಕಿಲೋಮೀಟರ್‌  ಸಾಗಿದರೆ ಕೆಲವೇ ನಿಮಿಷಗಳಲ್ಲಿ ಗೂಳೂರು ಸಿಗುತ್ತದೆ. ಗೂಳೂರು ಸಹ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿನ ಗಣೇಶ ರಾಜ್ಯದಲ್ಲಿಯೇ ಪ್ರಸಿದ್ಧವಾದುದು. ಮೊದಲು ಗಣೇಶನ ದರ್ಶನ ಪಡೆದನಂತರ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಕೈದಾಳ ಸಿಗುತ್ತದೆ. 

ಕೈದಾಳದ ಚನ್ನಕೇಶವ ದೇವಾಲಯ ಕ್ರಿ.ಶ. 1150 ರಲ್ಲಿ ಸ್ಥಾಪನೆಯಾಗಿದೆ. ಹೊಯ್ಸಳರ ನರಸಿಂಹನ ಸಾಮಂತ ಗೂಳೆಬಾಚಿ ದೇವನ ಕಾಲದಲ್ಲಿ ನಿರ್ಮಾಣಗೊಂಡಿದೆ. ಹಾಗಾಗಿ ಮಹಾದ್ವಾರದ ಕಲ್ಲಿನ ಕಂಬದಲ್ಲಿ ಬಾಚಿದೇವನ ವಿಗ್ರಹ ಕೆತ್ತಲಾಗಿದೆ.

ವಿಶಾಲವಾದ ಸ್ಥಳದಲ್ಲಿರುವ ಈ ದೇವಾಲಯ ದ್ರಾವಿಢ ಶೈಲಿಯಲ್ಲಿದೆ. ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಪ್ರವೇಶದ್ವಾರಗಳಿವೆ. ನವರಂಗದಲ್ಲಿ ಕೆತ್ತನೆಯಿಂದ ಕೂಡಿರುವ ಕಂಬಗಳಿವೆ. ಗರ್ಭಗೃಹದಲ್ಲಿರುವ ಚನ್ನಕೇಶವ ವಿಗ್ರಹ ಸುಮಾರು ಐದು ಅಡಿ ಎತ್ತರವಿದ್ದು ಕುಸುರಿ ಕೆಲಸಗಳಿಂದ ಕೂಡಿದೆ. ಎಡಭಾಗಗಳಲ್ಲಿ ಶ್ರೀದೇವಿ, ಭೂದೇವಿಯರ ವಿಗ್ರಹಗಳ ಕೆತ್ತನೆಯಿದೆ. ಈ ಸುಂದರ ಮೂರ್ತಿ ಬೇಲೂರಿನ ಚನ್ನಕೇಶವನನ್ನು ಹೋಲುತ್ತದೆ.

ಪ್ರಕೃತಿ ದತ್ತವಾದ ಸೂರ್ಯನ ಕಿರಣಗಳು ಈ ವಿಗ್ರಹದ ಮೇಲೆ ಬೀಳುವಂತೆ ಪ್ರಾಂಗಣವನ್ನು ಅಂದಿನ ಕಾಲದಲ್ಲಿಯೇ ನಿರ್ಮಿಸಿರುವುದು ಇಲ್ಲಿನ ಅಚ್ಚರಿಯ ಸಂಗತಿಯಾಗಿದೆ.

ಗರ್ಭಗೃಹದ ಎದುರಿನ ಸಣ್ಣ ದೇವಾಲಯದಲ್ಲಿ ಗರುಡಮೂರ್ತಿಯ ಸುಂದರ ವಿಗ್ರಹವಿದ್ದು ಚನ್ನಕೇಶವನ ನೇರದಲ್ಲಿ ಪ್ರತಿಷ್ಟಾಪಿಸಲಾಗಿದೆ. ಈ ದೇವಾಲಯದ ಪಕ್ಕದಲ್ಲಿಯೇ ಗಂಗಾಧರೇಶ್ವರನ ಮತ್ತೂಂದು ದೇವಾಲಯವನ್ನು ನೋಡಬಹುದು.

 ಕೈದಾಳದ ಇನ್ನೊಂದು ವಿಶೇಷತೆ ಎಂದರೆ ಅಮರಶಿಲ್ಪಿ ಜಕಣಾಚಾರಿಗೆ ಜನ್ಮ ನೀಡಿದ ಪುಣ್ಯದೂರು. ಬೇಲೂರಿನಲ್ಲಿ ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಓರ್ವ ಯುವಕ ಬಂದು ಈ ದೇವಾಲಯದ ವಿಗ್ರಹವೊಂದರಲ್ಲಿ ಲೋಪವಿದೆ ಎಂದಾಗ ಅಲ್ಲಿದ್ದ ಶಿಲ್ಪಿ ಜಕಣಾಚಾರಿಯು ಕೋಪಗೊಂಡು ದೋಷವನ್ನು ತೋರಿಸಿದರೆ ನನ್ನ ಬಲಗೈಯನ್ನು ಕತ್ತರಿಸಿಕೊಳ್ಳುವನೆಂದು ಯುವಕನಿಗೆ ಸವಾಲೆಸೆಯುತ್ತಾರೆ.

ಆಗ ಯುವಕ ಉಳಿಯನ್ನು ಹಿಡಿದು ಒಂದು ವಿಗ್ರಹದ ಹೊಟ್ಟೆಯ ಭಾಗಕ್ಕೆ ಹೊಡೆದಾಗ ಅದರಲ್ಲಿ ಒಂದು ಕಪ್ಪೆ , ಮರಳು, ನೀರು ಹೊರ ಬಂತು. ತಕ್ಷಣ ಶಿಲ್ಪಿ ಜಕಣಾಚಾರಿ ತನ್ನ ಕೈಯನ್ನು ಕತ್ತರಿಸಿಕೊಂಡರು. ಆನಂತರ ಆ ಶಿಲ್ಪಿಗೆ ಈ ಯುವಕ ತನ್ನ ಮಗ ಡಂಕಣಾಚಾರಿ ಎಂದು ತಿಳಿದಾಗ ಅಚ್ಚರಿಯಾಗಿತ್ತು.

ಕೊನೆಗೆ ಮಗನ ಜೊತೆ ತನ್ನ ಹುಟ್ಟೂರು ಕೈದಾಳಕ್ಕೆ ಬಂದು ಇಲ್ಲಿ ಇಬ್ಬರೂ ಸೇರಿ ಚನ್ನಕೇಶವ ದೇವಾಲಯವನ್ನು ನಿರ್ಮಿಸಿದಾಗ ಕತ್ತರಿಸಿದ್ದ ಕೈ ಮತ್ತೆ ಬೆಳೆಯಿತು. ಆದ್ದರಿಂದ ಈ ಹಿಂದೆ ಕ್ರೀಡಾಪುರವೆಂದು ಕರೆಯುತ್ತಿದ್ದ ಈ ಊರಿಗೆ ಕೈದಾಳ ಎಂಬ ಹೆಸರು ಬಂತೆಂದು ಪ್ರತೀತಿ ಇದೆ. ಇಲ್ಲಿನ ದೇವಾಲಯದ ಹೊರಗಡೆಯ ಮೇಲೆ ಇಬ್ಬರು ವ್ಯಕ್ತಿಗಳ ಮೂರ್ತಿಗಳನ್ನು ಕೆತ್ತಲಾಗಿದೆ. ಇದು ಆ ತಂದೆ ಮಗನ ಚಿತ್ರಗಳೆಂದು ಊರಿನ ಹಿರಿಯರು ಅನಾದಿಕಾಲದಿಂದ ಹೇಳುತ್ತಾರೆ ಎನ್ನುತ್ತಾರೆ ಅರ್ಚಕರಾದ ಜಯಸಿಂಹ ಭಟ್‌.

ದಂಡಿನ ಶಿವರ ಮಂಜುನಾಥ್‌

ಟಾಪ್ ನ್ಯೂಸ್

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.