ಚಂಡೆ ಹುಡುಗಿ

Team Udayavani, Mar 4, 2017, 2:51 PM IST

6.jpg

ಯಕ್ಷಗಾನದ ಹಿಮ್ಮೇಳದ ಚಂಡೆ ಮತ್ತು ಮದ್ದಲೆವಾದನದಲ್ಲಿ ಅದ್ಭುತ ಪರಿಣತಿಯನ್ನು ಸಾಧಿಸಿರುವುದರಲ್ಲಿ ಬಹುತೇಕರು ಗಂಡಸರೇ. ಆದರೆ ಈಗ ಇನ್ನೊಂದು ಹೆಸರಿದೆ. ಅದು ಅಪೂರ್ವ ಆರ್‌. ಸುರತ್ಕಲ್‌.

ಯಕ್ಷಗಾನದಲ್ಲಿ ಎರಡು ಪ್ರಕಾರಗಳಿವೆ. ಒಂದು ತೆಂಕುತಿಟ್ಟು, ಇನ್ನೊಂದು ಬಡಗುತಿಟ್ಟು. ಯಕ್ಷಗಾನ ಎಂದಾಗಥಟ್ಟನೆ ನೆನಪಿಗೆ ಬರುವುದು ಚಂಡೆಯ ಅದ್ಭುತ ಶಬ್ದ, ಭಿನ್ನವಾದ ವೇಷ ಭೂಷಣಗಳು ಮತ್ತು ಅದ್ಭುತ ನಾಟ್ಯ. ಯಕ್ಷಲೋಕದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದವರಲ್ಲಿ ಹೆಚ್ಚಿನವರೆಲ್ಲರೂ ಪುರುಷರೇ .ಇದಕ್ಕೆ ಕಾರಣವೂ ಇಲ್ಲದಿಲ್ಲ. ರಾತ್ರಿಯಿಂದ ಮೊದಲ್ಗೊಂಡು ಬೆಳಗ್ಗಿನವರೆಗೂ ಪ್ರದರ್ಶನ ನಡೆಯುವುದರಿಂದ ರಾತ್ರಿ ಇಡೀ ನಿದ್ದೆ ಬಿಡಬೇಕಾದ ಅನಿವಾರ್ಯತೆಯೂ ಇದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಮಹಿಳಾ ಸಾಧಕರು ಕಾಣಸಿಗುವುದು ಅತ್ಯಂತ ವಿರಳವೆಂದು ಹೇಳಬಹುದು. ಇಂತಹ ಸವಾಲಿನ ಕ್ಷೇತ್ರವನ್ನೇ ಆಯ್ದುಕೊಂಡು ಇಲ್ಲೇ ಸಾಧನೆಯನ್ನು ಮಾಡಿರುವುದು ವಿಶೇಷ. ಯಕ್ಷಗಾನದಲ್ಲಿ ಹಲವಾರು ಮಹಿಳಾ ಪಾತ್ರಧಾರಿಗಳು ಮತ್ತು ಭಾಗವತರು ಸಾಧನೆಯನ್ನು ಮಾಡಿರಬಹುದು. ಆದರೆ ಚಂಡೆವಾದನದ ಕ್ಷೇತ್ರದಲ್ಲಿ ಮಹಿಳಾ ಸಾಧಕಿಯರುಕಾಣ ಸಿಗುವುದು ಅತ್ಯಂತ ವಿರಳ.

ತೆಂಕುತಿಟ್ಟು ಯಕ್ಷಗಾನ ಪ್ರಕಾರದಲ್ಲಿ ಚಂಡೆಗೆ ಹೆಚ್ಚಿನ ಪ್ರಾಶಸ್ತ$Âವಿದ್ದು, ಸುಮಾರು ಎರಡರಿಂದ ಮೂರು ಕೆ.ಜಿ ತೂಗುವ ಚಂಡೆಯನ್ನು ಹೆಗಲೇರಿಸಿ ಅದನ್ನು ನಿಂತುಕೊಂಡೇ ಬಾರಿಸುವುದರ ಮೂಲಕ ಪಾತ್ರಧಾರಿಗೆ ಸ್ಪೂರ್ತಿ ತುಂಬುವುದು ಈ ಕೆಲಸದ ವಿಶೇಷ. ಇದು ಸವಾಲು ಕೂಡ. ಯಕ್ಷಗಾನದಲ್ಲಿ ಕಲಾವಿದರು ಮತ್ತು ಚಂಡೆವಾದಕರ ನಡುವಿನ ಪೈಪೋಟಿ ಎಂದೇ ಹೇಳಬಹುದು. ಕುಣಿತದಲ್ಲಿ ಕಲಾವಿದನಿಗೆ ಪ್ರೇಕ್ಷಕರ ಶಿಳ್ಳೆ ಮತ್ತು ಚಪ್ಪಾಳೆಗಳು ಬಿತ್ತೆಂದರೆ ಸಾಕು ಕಲಾವಿದ ಚಂಡೆವಾದಕನನ್ನು ಸುಸ್ತಾಗಿಸಲು ನೋಡುತ್ತಾನೆ.  ಇಂತಹ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ನಿರ್ಧಾರವನ್ನು ಮಾಡಿದ ಅಪೂರ್ವಳ ಆತ್ಮಸ್ಥೈರ್ಯವನ್ನು ಮೆಚ್ಚಲೇಬೇಕು.

ಈ ಬಹುಮುಖ ಪ್ರತಿಭೆಗೆತಂದೆ ರಮೇಶ್‌ ಪ್ರೇರಣೆ. ಅಪೂರ್ವ ಸುರತ್ಕಲ್‌ ಹುಟ್ಟು ಪ್ರತಿಭೆಯ ಖನಿ.  ಎರಡನೆಯ ತರಗತಿಯಲ್ಲೇ ಸುರತ್ಕಲ್‌ನ ವಿದ್ವಾನ್‌ಚಂದ್ರಶೇಖರ ನಾವುಡರಿಂದ ಭರತನಾಟ್ಯ ಕಲಿಕೆ ಪ್ರಾರಂಭ.  ಭರತನಾಟ್ಯದಲ್ಲಿ ಸೀನಿಯರ್‌ ಮುಗಿದಿದೆ.  ಅಪೂರ್ವಳ ಅಸಕ್ತಿಯು ಯಕ್ಷಗಾನದೆಡೆಗೆ ತಿರುಗಲು ಪ್ರಮುಖ ಪ್ರೇರಣೆ ಈಕೆಯ ತಂದೆ. ದೇವರ ಮೆರವಣಿಗೆ ಮತ್ತು ದೇವರ ಪ್ರದಕ್ಷಿಣೆಯಲ್ಲಿ ತಂದೆಯು ಚಂಡೆ ಭಾರಿಸುತ್ತಾರೆ. ಬೃಹತ್‌ ಕಿರೀಟ ತೊಟ್ಟ ಆರ್ಭಟಿಸುವ ರಾಕ್ಷಸನ ಪಾತ್ರಧಾರಿಯಾಗಿ, ನಾಟಕದಲ್ಲಿ ಅಪ್ರತಿಮ ಪಾತ್ರಧಾರಿಯಾಗಿ ರಮೇಶ್‌ ಬಹುಮುಖ ಪ್ರತಿಭೆ. ಅಪ್ಪನ ಹವ್ಯಾಸವನ್ನು ಎಳೆ ಮಗುವಿನಿಂದಲೇ ನೋಡುತ್ತಾ ಬೆಳೆದ ಅಪೂರ್ವಾಳ ಅಸಕ್ತಿಯು ಚಂಡೆವಾದನದೆಡೆಗೆ ತಿರುಗಿತು. ತಾಯಿ ರೂಪಾರವರೂ ಮದ್ದಲೆ ವಾದನವನ್ನು ಕಲಿತಿದ್ದಾರೆ. ಇದೂ ಸಹ ಪ್ರೇರಣೆ. ದ್ವಿತೀಯ ಪಿಯುಸಿ ಓದುತ್ತಿರುವ ಸಹೋದರ ಅಮೋಘ ಸುರತ್ಕಲ್‌ ಸಹ ಚಂಡೆ ಮತ್ತು ಮದ್ದಲೆವಾದನದಲ್ಲಿ ಪರಿಣತಿಯನ್ನು ಹೊಂದಿದ್ದು ಹವ್ಯಾಸಿ ಹಿಮ್ಮೇಳ ವಾದಕರಾಗಿದ್ದಾರೆ. ಇವರ ಕುಟುಂಬ ಪೂರ್ತಿ ಕಲಾರಾಧಕರಿಂದ ಕೂಡಿದ್ದು, ಕಲೆ ಮತ್ತು ಕೌಶಲ್ಯಎಂಬುವುದು ಈಕೆಗೆ ತನ್ನ ಹೆತ್ತವರಿಂದ ಹುಟ್ಟುತ್ತಲೇ ರಕ್ತದಲ್ಲೇ ಬಂದಿದೆ ಎನ್ನಬಹುದು.

ತಂದೆಯಿಂದಲೇ ಪ್ರೇರಿತಳಾದ ಈಕೆ 5ನೇತರಗತಿಯಲ್ಲೇ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್‌ರಿಂದ ಮದ್ದಲೆವಾದನವನ್ನು ಕಲಿತಳು. ಜೊತೆ ಜೊತೆಗೆ ಈಕೆ ಅದ್ಭುತ ಚಿತ್ರಗಾರ್ತಿಯೂ ಹೌದು. ಪ್ರಸಿದ್ಧ ಯಕ್ಷಗಾನ ಮೇಳಗಳಾದ ಕಟೀಲು ಮತ್ತು ಧರ್ಮಸ್ಥಳ ಮೇಳಗಳ ಪ್ರದರ್ಶನಗಳಲ್ಲಿ ಹಿರಿಯ ಕಲಾವಿದರಿಗೂ ಚಂಡೆ ನುಡಿಸಿದ್ದಾಳೆ. 

 ಸಂತೋಷ್‌ರಾವ್‌ ಪೆರ್ಮುಡ
ಚಿತ್ರಗಳು: ಸಂದೀಪ್‌ ಕೆ. ಬಳ್ಳಾಲ್‌

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.