14283ರ ಪೈಕಿ 4947 ರೈತರ ತೊಗರಿ ಖರೀದಿ
Team Udayavani, Mar 4, 2017, 3:29 PM IST
ಆಳಂದ: ತೊಗರಿ ಬೆಳೆಗಾರರಿಗೆ ಬೆಂಬಲ ಬೆಲೆ ನೀಡುವ ಉದ್ದೇಶಕ್ಕಾಗಿ 10 ಕಡೆ ಪ್ರಾರಂಭಿಸಿದ ತೊಗರಿ ಖರೀದಿ ಕೇಂದ್ರಗಳಲ್ಲಿ ಹಲವು ನೂನ್ಯತೆಗಳು ಎದುರಾದ ಕಾರಣ ಮಾರಾಟಕ್ಕೆ ಹೆಸರು ನೋಂದಾಯಿಸಿದ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈಗಾಗಲೇ ಅಲ್ಲಲ್ಲಿನ ಕೇಂದ್ರಗಳಲ್ಲಿ ಭರದಿಂದ ಖರೀದಿ ನಡೆಯುತ್ತಿದೆ.
ಆದರೆ, ಚೀಲಗಳ ಕೊರತೆ, ಕಾರ್ಮಿಕರ ಸಮಸ್ಯೆ ಮತ್ತು ಖರೀದಿಸಿದ ಮಾಲುಗಳ ಸಾಗಾಣಿಕೆಗೆ ಸಂಬಂಧಿಧಿಸಿದ ಕಂಪನಿಗಳಿಂದ ವಿಳಂಬವಾಗುತ್ತಿದೆ. ಇದರಿಂದ ಖರೀದಿ ಕೇಂದ್ರಗಳಲ್ಲಿ ಸ್ಥಳದ ಕೊರತೆ ಉಂಟಾಗಿ ನಿರೀಕ್ಷಿತವಾಗಿ ಖರೀದಿ ಆಗದೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.
10 ತೊಗರಿ ಖರೀದಿ ಕೇಂದ್ರಗಳ ಪೈಕಿ ಸದ್ಯ ಎರಡು ದಿನಗಳವರೆಗೆ ತೊಂದರೆ ಇಲ್ಲದೆ ಖರೀದಿ ನಡೆಯುವ ನಾಲುÌ ಕೇಂದ್ರಗಳಾದ ಆಳಂದ, ಮುನ್ನಹಳ್ಳಿ, ತಡಕಲ್ ಮತ್ತುಕಿಣ್ಣಿಸುಲ್ತಾನ ತೊಗರಿ ಖರೀದಿ ಕೇಂದ್ರಗಳ ಖರೀದಿ ನಡೆಯುತ್ತಿವೆ. ಹೊಸ ಚೀಲಗಳು ಬರದೆ ಹೋದಲ್ಲಿ ಇಲ್ಲೂ ಖರೀದಿ ನಿಲ್ಲುವ ಸಾಧ್ಯತೆ ತಳ್ಳಿಹಾಕಲಾಗದು.
ಈ ನಾಲ್ಕು ಹೊರತು ಪಡಿಸಿ ಉಳಿದ ಆರು ಕೇಂದ್ರಗಳಾದ ಕಗಡಂಚಿ, ನರೋಣಾ, ಮಾದನಹಿಪ್ಪರಗಾ, ಖಜೂರಿ, ನಿಂಬರಗಾ, ಸರಸಂಬಾ ಖರೀದಿ ಕೇಂದ್ರಗಳಲ್ಲಿ ತೊಗರಿ ತುಂಬುವ ಚೀಲಗಳ ಕೊರತೆಯಿಂದಾಗಿ ಖರೀದಿ ಸ್ಥಗಿತಗೊಂಡಿದೆ ಎನ್ನಲಾಗಿದೆ. ತೊಗರಿ ಮಾರಾಟಕ್ಕಾಗಿ ಕಳೆದ ಎರಡು ತಿಂಗಳ ಹಿಂದೆ ತಾಲೂಕಿನ 10 ಖರೀದಿ ಕೇಂದ್ರಗಳಲ್ಲಿ ಅಂದಾಜು 14283 ರೈತರು ಹೆಸರು ನೋಂದಾಯಿಸಿದ್ದಾರೆ.
ಈ ಪೈಕಿ ಈಗಾಗಲೇ ಗುರುವಾರದಿಂದ 4947 ರೈತರ 102790 ಕ್ವಿಂಟಾಲ್ ಮಾತ್ರ ತೊಗರಿ ಖರೀದಿಸಲಾಗಿದೆ. ಇನ್ನೂ ಒಂದು ಅಂದಾಜಿನಂತೆ9336 ರೈತರ ಲಕ್ಷಾಂತರ ಕ್ಷಿಂಟಾಲ್ ತೊಗರಿ ಖರೀದಿಗೆ ವಿಳಂಬವಾಗುತ್ತಿರುವುದು ರೈತ ಸಮುದಾಯದಲ್ಲಿ ಸಹನೆ ಕಟ್ಟೆ ಒಡೆದು ಆಕ್ರೋಶಕ್ಕೆ ಕಾರಣವಾಗತೊಡಗಿದೆ.
ಎಷ್ಟಾಯಿತು ಖರೀದಿ: ಮಾ. 3ವರೆಗೆ ಆಳಂದ ಖರೀದಿ ಕೇಂದ್ರದಲ್ಲಿ ನೋಂದಾಯಿತ 3650 ರೈತರ ಪೈಕಿ 650 ರೈತರಿಂದ 15331 ಕ್ವಿಂಟಾಲ್ ತೊಗರಿ ಮಾತ್ರ ಖರೀದಿಯಾಗಿದೆ. ಕಡಗಂಚಿ ಕೇಂದ್ರಕ್ಕೆ ನೋಂದಾಯಿತ 1096 ರೈತರ ಪೈಕಿ 422 ರೈತರಿಂದ 11054 ಕ್ವಿಂಟಾಲ್ ಖರೀದಿಯಾಗಿದೆ.
ನರೋಣಾ ಕೇಂದ್ರದಲ್ಲಿ ಮಾರಾಟಕ್ಕೆ ಹೆಸರು ನೋಂದಾಯಿತ 1100 ರೈತರ ಪೈಕಿ 153 ಮಂದಿಯಿಂದ 3480 ಕ್ವಿಂಟಾಲ್ ಖರೀದಿಯಾಗಿದೆ. ಮಾದನಹಿಪ್ಪರಗಾ ಖರೀದಿ ಕೇಂದ್ರದಲ್ಲಿ 808 ರೈತರ ಪೈಕಿ 26 ರೈತರಿಂದ ಒಟ್ಟು 2681 ಕ್ವಿಂಟಾಲ್ ಖರೀದಿಯಾಗಿದೆ. ಖಜೂರಿ ಕೇಂದ್ರದಲ್ಲಿ ಹೆಸರು ನೋಂದಾಯಿತ 1000 ರೈತರಲ್ಲಿ 176 ರೈತರಿಂದ 3725 ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ.
ನಿಂಬರಗಾ ಕೇಂದ್ರಕ್ಕೆ ಹೆಸರು ನೋಂದಾಯಿತ 780 ರೈತರ ಪೈಕಿ 130 ರೈತರಿಂದ 3250 ಕ್ವಿಂಟಾಲ್ ಖರೀದಿಸಲಾಗಿದೆ. ಸರಸಂಬಾ ಕೇಂದ್ರಕ್ಕೆ ಹೆಸರು ನೋಂದಾಯಿಸಿದ 580 ರೈತರ ಪೈಕಿ 130 ಮಂದಿಯ 3500 ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. ಮುನ್ನಹಳ್ಳಿ ಕೇಂದ್ರದಲ್ಲಿ ಅತಿ ಹೆಚ್ಚು ನೋಂದಾಯಿತ 2014 ರೈತರ ಪೈಕಿ 1257 ರೈತರಿಂದ 24834 ಕ್ವಿಂಟಾಲ್ ಖರೀದಿಯಾಗಿದೆ.
ತಡಕಲ್ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ 1621 ರೈತರ ಪೈಕಿ 1007 ರೈತರಿಂದ 17505 ಕ್ವಿಂಟಾಲ್ ಖರೀದಿ ನಡೆದಿದೆ. ಕಿಣ್ಣಿಸುಲ್ತಾನ ಖರೀದಿ ಕೇಂದ್ರಕ್ಕೆ ಮಾರಾಟಕ್ಕಾಗಿ ಹೆಸರುನೋಂದಾಯಿಸಿದ 1684 ರೈತರ ಪೈಕಿ 896 ರೈತರಿಂದ 17420 ಕ್ವಿಂಟಾಲ ತೊಗರಿ ಖರೀದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
* ಮಹಾದೇವ ವಡಗಾಂವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ದೆಹಲಿಯ ನೇಲ್ ಆರ್ಟಿಸ್ಟ್ ನೇಣಿಗೆ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.