ಸಾಮಾನ್ಯ ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ


Team Udayavani, Mar 5, 2017, 3:45 AM IST

170304kpn77.jpg

ಬೆಂಗಳೂರು: ಸ್ನಾತಕೋತ್ತರ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ಶನಿವಾರದಿಂದ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಲ್ಲಿ ಕೌನ್ಸೆಲಿಂಗ್‌ ಆರಂಭಗೊಂಡಿದ್ದು, ಮೊದಲ ದಿನವೇ “ಸಾಮಾನ್ಯ ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿ’ಗೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ಕೇಂದ್ರ ಸರ್ಕಾರ ಏಕರೂಪ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಜಾರಿ ಮಾಡಿದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶಕ್ಕೆ ಕೌನ್ಸೆಲಿಂಗ್‌ ಮಾತ್ರ ಬೇರೆ ಬೇರೆ ನಡೆಯುತ್ತಿದೆ. ಸರ್ಕಾರಿ ಕೋಟಾ ಸೀಟುಗಳಿಗೆ ರಾಜ್ಯ ಸರ್ಕಾರ, ಇತರೆ ಸೀಟುಗಳಿಗೆ ಖಾಸಗಿ ಕಾಲೇಜುಗಳ ಒಕ್ಕೂಟಗಳು ಕೌನ್ಸೆಲಿಂಗ್‌ ನಡೆಸುತ್ತಿವೆ. ಇದು ಸರಿಯಲ್ಲ. ಕೂಡಲೇ ನೀಟ್‌ ರೀತಿ ಕೌನ್ಸೆಲಿಂಗ್‌ ಅನ್ನೂ ಏಕರೂಪಗೊಳಿಸಬೇಕು. ಆಯಾ ರಾಜ್ಯ ಸರ್ಕಾರಗಳೇ ಎಲ್ಲ ಕೋಟಾದ ಸೀಟುಗಳಿಗೂ ಕೌನ್ಸೆಲಿಂಗ್‌ ನಡೆಸುವಂತೆ ಕಾನೂನು ಜಾರಿಗೆ ತರಬೇಕೆಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.

ಅಲ್ಲದೆ, ರಾಜ್ಯದಲ್ಲಿ ಕನಿಷ್ಠ 7 ವರ್ಷ ವಾಸವಿರುವ ಅಭ್ಯರ್ಥಿಗಳಿಗೆ ಮಾತ್ರ ರಾಜ್ಯ ಕೋಟಾದ ಸ್ನಾತಕೋತ್ತರ ವೈದ್ಯ ಸೀಟುಗಳ ಪ್ರವೇಶಕ್ಕೆ ಅರ್ಹತೆ ನೀಡಬೇಕು. ಈಗಿರುವ ನಿಯಮ ಪ್ರಕಾರ ಹೊರ ರಾಜ್ಯದ ವಿದ್ಯಾರ್ಥಿಗಳಾದರೂ ರಾಜ್ಯದಲ್ಲಿ ಎಂಬಿಬಿಎಸ್‌, ಎಂಡಿಎಸ್‌ ವ್ಯಾಸಂಗ ಮಾಡಿರುವವರಿಗೂ ರಾಜ್ಯ ಕೋಟಾ ಸೀಟುಗಳು ಸಿಗುತ್ತಿವೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ ಅದನ್ನು ಸರ್ಕಾರಕ್ಕೆ ತಿಳಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಟಾಪ್ ನ್ಯೂಸ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

3-aranthodu

Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.