ಪಿಯು ಮೌಲ್ಯಮಾಪನ ಬಹಿಷ್ಕಾರ ನಿರ್ಧಾರ ಅಚಲ


Team Udayavani, Mar 5, 2017, 3:45 AM IST

4BNP-(1).jpg

ಬೆಂಗಳೂರು:ವೇತನ ತಾರತಮ್ಯ ಸರಿಪಡಿಸದಿದ್ದರೆ ಈ ಬಾರಿಯೂ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ವಿಚಾರದಲ್ಲಿ ನಮ್ಮ ನಿರ್ಧಾರ ಅಚಲ’ ಎಂದು ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿವೆ.

ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಉಪನ್ಯಾಸಕರು, ವೇತನ ತಾರತಮ್ಯ ನಿವಾರಣೆ ಸೇರಿದಂತೆ  ಎಲ್ಲ ಬೇಡಿಕೆಗಳನ್ನು ಈಡೇರಿಸುವತ್ತ ರಾಜ್ಯ ಸರ್ಕಾರ ಕೂಡಲೇ ಗಮನ ಹರಿಸಬೇಕು. ಬೇಡಿಕೆಗಳ ಬಗ್ಗೆ ಸರ್ಕಾರ ತಾತ್ಸಾರ ಈ ಬಾರಿಯೂ ಮೌಲ್ಯಮಾಪನ ಬಹಿರಷ್ಕರಿಸುವುದು ಅನಿವಾರ್ಯವಾಗುತ್ತದೆ. ಇದರಿಂದಾಗುವ ತೊಂದರೆಗಳಿಗೆ ನಾವು ಜವಾಬ್ದಾರರಲ್ಲ. ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ, ಕಳೆದ ವರ್ಷ ವೇತನ ತಾರತಮ್ಯ ಸರಿಪಡಿಸುವಂತೆ ಮೌಲ್ಯಮಾಪನ ಬಹಿಷ್ಕರಿಸಿ ಹೋರಾಟಕ್ಕಿಳಿದಾಗ ಕುಮಾರ್‌ ನಾಯಕ್‌ ವರದಿ ಜಾರಿ ಸಾಧ್ಯವಿಲ್ಲ. ಆದರೆ, ವೇತನ ತಾರತಮ್ಯ ಸರಿಪಡಿಸಲು ಎರಡು ವೇತನ ಬಡ್ತಿ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಒಂದು ವೇತನ ಬಡ್ತಿಯನ್ನು ಆ ಕ್ಷಣವೇ ಜಾರಿ ಮಾಡಿ ಇನ್ನೊಂದು ವೇತನ ಬಡ್ತಿಯನ್ನು 2016ರ ಡಿಸೆಂಬರ್‌ ಅಥವಾ ಜನವರಿ ವೇಳೆಗೆ ನೀಡುವುದಾಗಿ ಹೇಳಿತ್ತು. ಆದರೆ, ಈ ವರೆಗೂ ನೀಡಿಲ್ಲ ಎಂದು ದೂರಿದರು.

ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿ, ಕಳೆದ ವರ್ಷ ಮೌಲ್ಯಮಾಪನ ಬಹಿಷ್ಕಾರಿಸಿ ಹೋರಾಟ ನಡೆಸಿದ ವೇಳೆ ಒಂದು ವೇತನ ಬಡ್ತಿ ನೀಡಿ ಜನವರಿ ವೇಳೆಗೆ ಇನ್ನೊಂದು ವೇತನ ಬಡ್ತಿ ನೀಡುವುದಾಗಿ ಹೇಳಿದ್ದ ಸರ್ಕಾರ ಈಗ ನಿರಾಕರಿಸುತ್ತಿದೆ. 7ನೇ ವೇತನ ಆಯೋಗದಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸುವಂತೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಅವರು ಹೇಳುತ್ತಿದ್ದಾರೆ. ಆದರೆ, ಬರೀ ಪತ್ರ ಬರೆದರೆ ಆಯೋಗ ಪರಿಗಣಿಸಬಹುದು ಅಥವಾ ಪರಿಗಣಿಸದೆಯೂ ಇರಬಹುದು. ಮತ್ತೆ ತಾರತಮ್ಯ ಮುಂದುವರೆಯಲಿದೆ. ಅದರ ಬದಲು, ಹಿಂದೆ ನೀಡಿದ್ದ ಭರವಸೆಯಂತೆ ಮತ್ತೂಂದು ವೇತನ ಜಾರಿ ಮಾಡಿ ಅದರಿಂದಾಗುವ ವೇತನ ಹೆಚ್ಚಳದ ಆಧಾರದ ಮೇಲೆ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗಕ್ಕೆ ಶಿಫಾರಸು ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.

ಪರೀಕ್ಷೆಗೆ ತೊಂದರೆಯಿಲ್ಲ:
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಲ್ಕನೇ ಹಂತದ ಹೋರಾಟ ಮಾ.9ರಿಂದ 27ರವರೆಗೆ ನಡೆಯುವ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯದಲ್ಲಿ ಎಲ್ಲ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಕಪ್ಪು ಪಟ್ಟಿ ಧರಿಸಿ ಪಾಲ್ಗೊಳ್ಳುವ ಮೂಲಕ ಮುಂದುವರೆಯಲಿದೆ. ಇದರಿಂದ ಪರೀಕ್ಷೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಪರೀಕ್ಷೆಯ ಕೊನೆಯ ದಿನದ ಮುನ್ನಾ ದಿನ (ಮಾ.26 ರ ಭಾನುವಾರ) ಉಭಯ ಸಂಘಗಳ ಪದಾಧಿಕಾರಿಗಳ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಸಭೆಯ ದಿನಾಂಕದೊಳಗೆ ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ಸ್ಪಂಧಿಸದೇ ಹೋದರೆ ಸಭೆಯಲ್ಲಿ ಮೌಲ್ಯಮಾಪನ ಬಹಿಷ್ಕಾರದ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡು ಪ್ರಕಟಿಸಲಾಗುವುದು ಎಂದು ತಿಮ್ಮಯ್ಯ ಪುರ್ಲೆ ಹೇಳಿದರು.

ಏನಿದು ವೇತನ ತಾರತಮ್ಯ ವಿವಾದ?
*ವೇತನ ತಾರತಮ್ಯ ನಿವಾರಣೆಗಾಗಿ  ಐಎಎಸ್‌ ಅಧಿಕಾರಿ ಜಿ.ಕುಮಾರ್‌ ನಾಯಕ್‌ ಅವರು ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ¨ªಾಗ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿ ನೀಡಿದ ವರದಿಯಲ್ಲಿ,  ಉಪನ್ಯಾಸಕರ ಮೂಲ ವೇತನ 25,300ಗೆ, ಪ್ರಾಂಶುಪಾಲರ ವೇತನ 32,800 ರೂ.ಗೆ ಮತ್ತು ಪ್ರೌಢ ಶಾಲಾ ಶಿಕ್ಷಕರ ವೇತನ 19,000ರೂ.ಗಳಿಗೆ ಹೆಚ್ಚಾಗಬೇಕು ಎಂದು ಶಿಫಾರಸು ಮಾಡಿದೆ. ಮೊದಲು ಈ ವರದಿ ನ್ಯಾಯಸಮ್ಮತವಾಗಿದ್ದು ಅನುಷ್ಠಾನಗೊಳಿಸುವದಾಗಿ ಹೇಳುತ್ತಾ ಬಂದಿದ್ದ ಸರ್ಕಾರ, ವರದಿ ಜಾರಿಯಿಂದ ಸರ್ಕಾರಕ್ಕೆ ಪ್ರತೀ ವರ್ಷ ಸುಮಾರು 170 ಕೋಟಿ ರೂ.ನಷ್ಟು ಹೊರೆ ಬೀಳಲಿದೆ ಎಂಬ ಕಾರಣಕ್ಕೆ ವರದಿಯನ್ನು ಪಕ್ಕಕ್ಕಿಟ್ಟಿದೆ.  ಕಳೆದ ವರ್ಷ ಈ ವರದಿ ಅನಿಷ್ಠಾನಕ್ಕಾಗಿ ಶಿಕ್ಷಕರು, ಉಪನ್ಯಾಸಕರು ಹೋರಾಟ ತೀವ್ರಗೊಳಿಸಿದ್ದರಿಂದ ಸಂಧಾನಕ್ಕೆ ಮುಂದಾದ ಸರ್ಕಾರಕ್ಕೆ ಶಿಕ್ಷಕರು ವರದಿ ಅನಿಷ್ಠಾನ ಮಾಡಿದೆ ಹೋದರೆ ಕನಿಷ್ಠ 2 ವೇತನ ಬಡ್ತಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ತಕ್ಷಣ ಒಂದು ವೇತನ ಬಡ್ತಿ ನೀಡಿದ್ದ ಸರ್ಕಾರ, ಇನ್ನೊಂದು ವೇತನ ಬಡ್ತಿಯನ್ನು ಡಿಸೆಂಬರ್‌ ಅಥವಾ ಜನವರಿ 2016ರ ವೇಳೆಗೆ ನೀಡುವುದಾಗಿ ಭರವಸೆ ನೀಡಿತ್ತು.

ಟಾಪ್ ನ್ಯೂಸ್

Raichur: hit for setting firecrackers in front of house

Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!

Voyager 1 encountered a problem in interstellar space 25 billion km away

25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1

12-bng

Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್‌’

ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ

Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ

BJP doing election campaign on Waqf issue: Sharan Prakash Patil

Raichur: ವಕ್ಫ್‌ ವಿಚಾರದಲ್ಲಿ ಬಿಜೆಪಿ ಚುನಾವಣೆ ಪ್ರಚಾರ: ಶರಣ ಪ್ರಕಾಶ ಪಾಟೀಲ

ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್

Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್

9–karnataka-50

Kannada Sambrama: ಸುವರ್ಣ ಮಹೋತ್ಸವ ವಿಶೇಷ; 50 ವರ್ಷದ ಹರ್ಷಕ್ಕೆ 50 ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Deepavali: ಮೊದಲ ಬಾರಿ ಚಿನ್ನ ಮೀರಿಸಿದ ಬೆಳ್ಳಿ ಖರೀದಿ

19

Hyderabad: ಡೆಲಿವರಿ ಬಾಯ್‌ಗಳಾದ ಎಂಜಿನಿಯರಿಂಗ್‌ ಪ್ರೊಫೆಸರ್!

18

Israel ಬಯಸಿದರೆ ಕದನ ವಿರಾಮ: ಹಮಾಸ್‌ ನಾಯಕ

17

New Delhi: ಕೆನಡಾ ವಲಸಿಗರಲ್ಲಿ ಗುಜರಾತಿ ಭಾಷಿಗರಿಗೆ ಮೂರನೇ ಸ್ಥಾನ

16

TTD ಹೊಸ ಮಂಡಳಿ: ಕರ್ನಾಟಕ ಮೂಲದ ನಿವೃತ್ತ ಸಿಜೆಐ ದತ್ತುಗೆ ಸ್ಥಾನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Raichur: hit for setting firecrackers in front of house

Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!

Udupi District Rajyotsava Award for Udupi District Working Journalists Association

Udupi: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Voyager 1 encountered a problem in interstellar space 25 billion km away

25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1

12-bng

Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್‌’

11-bng

Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.