ಅತ್ತೆ, ಮಾವನ ಕೊಂದ್ರೆ ಹೆಂಡತಿ ಸಿಗ್ತಾಳೆ ಅಂದ್ಕೊಂಡೆ
Team Udayavani, Mar 5, 2017, 11:35 AM IST
ಬೆಂಗಳೂರು: ಅತ್ತೆ, ಮಾವನನ್ನು ಕೊಲೆ ಮಾಡಿದ್ರೆ, ಹೆಂಡತಿ ನನ್ನೊಂದಿಗೆ ಬರ್ತಾಳೆ ಅಂತಾ ಕೊಲೆ ಮಾಡಿದೆ. ಕೋಣನಕುಂಟೆಯ ಅನ್ನಪೂಣೇಶ್ವರಿ ಲೇಔಟ್‌ನಲ್ಲಿ ಶುಕ್ರವಾರ ಅತ್ತೆ ಮುರುಗಮ್ಮ (55) ಮಾವ ಕುಮಾರ್ (60) ಅವರನ್ನು ಹತ್ಯೆಗೈದು ಹೆಂಡತಿ ಮತ್ತು ನೆರೆ ಮನೆಯ ನಿವಾಸಿಗೆ ಚಾಕುವಿನಿಂದ ಇರಿದು ಪರಾರಿಯಾಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿ ಸೆಂಥಿಲ್ ಕುಮಾರ್ ಪೊಲೀಸರ ವಿಚಾರಣೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾನೆ.
ಕಳೆದ ಐದಾರು ತಿಂಗಳಿಂದ ಪತ್ನಿಯಿಂದ ದೂರ ಇದ್ದೇನೆ. ಸಾಕಷ್ಟು ಬಾರಿ ಮನೆಗೆ ಬಂದು ಪತ್ನಿ ಮತ್ತು ಮಗುವನ್ನು ಕಳುಹಿಸುಂತೆ ಮಾವ ಕುಮಾರ್ ಮತ್ತು ಅತ್ತೆ ಮುರುಗುಮ್ಮನನ್ನು ಕೋರಿಕೊಂಡಿದ್ದೆ. ಆದರೆ ಅವರು ಹೆಂಡತಿಯನ್ನು ನನ್ನೊಂದಿಗೆ ಕಳುಹಿಸಲಿಲ್ಲ. ಶುಕ್ರವಾರ ಕೂಡ ಪತ್ನಿಯನ್ನು ನನ್ನೊಂದಿಗೆ ಕಳುಹಿಸುವಂತೆ ಪರಿಪರಿಯಾಗಿ ಮನವಿ ಮಾಡಿದೆ.
ಇದಕ್ಕೆ ಅತ್ತೆ-ಮಾವ ಇಬ್ಬರು ಜಗಳ ತೆಗೆದರು. ಇವರಿಬ್ಬರುನ್ನು ಹತ್ಯೆ ಮಾಡಿದರೆ, ಪತ್ನಿ ನನ್ನೊಂದಿಗೆ ಬರುತ್ತಾಳೆ ಎಂದು ಕೊಲೆ ಮಾಡಲು ಸಂಚು ರೂಪಿಸಿದೆ. ಹೀಗಾಗಿ ರಾತ್ರಿ 8 ಗಂಟೆ ಸುಮಾರಿಗೆ ಮದ್ಯ ಸೇವಿಸಿ ಬಂದು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇಬ್ಬರನ್ನು ಕೊಲೆ ಮಾಡಿದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ರಕ್ಷಣೆಗೆ ಧಾವಿಸಿದ್ದ ಪತ್ನಿ ಮತ್ತು ನೆರೆ ಮನೆಯ ನಿವಾಸಿ ಮಂಜುನಾಥ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು. ಮಗಳನ್ನು ವಾಪಸ್ ಕಳುಹಿಸುವಂತೆ ಕೇಳಿಕೊಂಡಿದ್ದ ಸೆಂಥಿಲ್‌ಗೆ, ತಮ್ಮ ಮನೆಯಲ್ಲಿ ಬಂದು ಇರುವಂತೆ ಅತ್ತೆ-ಮಾವ ತಿಳಿಸಿದ್ದರು.
ಹೀಗಾಗಿ ಆರೋಪಿ ಸೆಂಥಿಲ್‌ನನ್ನು ಕಳೆದ ಒಂದೂವರೆ ತಿಂಗಳಿಂದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಮೀನು ಮಾರಾಟ ಅಂಗಡಿಯೊಂದರಲ್ಲಿ ಮಾವ ಕುಮಾರ್ ಅವರೆ ಕೆಲಸಕ್ಕೆ ಸೇರಿಸಿದ್ದರು ಎಂದು ಪೊಲೀಸರು ವಿವರಿಸಿದರು. ಕೃತ್ಯವೆಸಗಿದ ಬಳಿಕ ಸೆಂಥಿಲ್ ನೆಲಮಂಗಲದ ಬಳಿ ಇರುವ ಸಂಬಂಧಿಕರೊಬ್ಬರ ಮನೆಗೆ ಹೋಗುತ್ತಿದ್ದ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಘಟನೆಯಲ್ಲಿ ಗಾಯಗೊಂಡಿರುವ ಆರೋಪಿ ಪತ್ನಿ ಸತ್ಯಾವತಿ (30) ಮತ್ತು ನೆರೆ ಮನೆ ನಿವಾಸಿ ಮಂಜುನಾಥ್ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಷಕರಿಲ್ಲದ ವೇಳೆ ಕರೆದೊಯ್ದು ವಿವಾಹ
ಬಂಧಿತ ಆರೋಪಿ ಸೆಂಥಿಲ್ ಸತ್ಯಾವತಿಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಪೋಷಕರ ವಿರೋಧವಿತ್ತು. ಮನೆಯಲ್ಲಿ ಸತ್ಯಾವತಿ ಪೋಷಕರು ಇಲ್ಲದ ವೇಳೆ ಆಕೆಯನ್ನು ಕರೆದುಕೊಂಡು ಹೋಗಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದ. ವಿವಾಹವಾದ ಬಳಿಕ ಸತ್ಯಾವತಿಯನ್ನು ತಮಿಳುನಾಡಿನ ತಿರುಪತ್ತೂರಿಗೆ ಕರೆದೊಯ್ದು ತನ್ನ ಪೋಷಕರೊಂದಿಗೆ ವಾಸವಿದ್ದ.
ಬಟ್ಟೆ ಅಂಡಿಯೊಂದರಲ್ಲಿ ಕೆಲಸಕಿದ್ದ ಸೆಂಥಿಲ್ ಮದ್ಯ ವ್ಯಸನಿಯಾಗಿದ್ದ. ಕುಡಿದು ಬಂದು ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಸತ್ಯಾವತಿ ಪೋಷಕರು ಆಕೆಯನ್ನು ಕರೆತಂದು ತಮ್ಮ ಬಳಿ ಇರಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.