ನಾಗರಿಕರು ಕರ್ತವ್ಯ ಪರಿಪಾಲಿಸಬೇಕಿದೆ
Team Udayavani, Mar 5, 2017, 12:46 PM IST
ದಾವಣಗೆರೆ: ನಮ್ಮ ದೇಶದ ಅಭಿವೃದ್ಧಿ, ಜನರ ಏಳಿಗೆಗೆ ಸರ್ಕಾರ ಮಾತ್ರವೇ ಶ್ರಮಿಸಬೇಕು ಎಂಬ ಮನೋಭಾವ ಬಿಟ್ಟು ಇದರಲ್ಲಿ ನಮ್ಮ ಕರ್ತವ್ಯವೂ ಇದೆ ಎಂಬುದನ್ನು ಮನಗಾಣದ ಹೊರತು ದೇಶ, ಜನರ ಸ್ಥಿತಿ ಬದಲಾಗುವುದಿಲ್ಲ ಎಂದು ಕೊಪ್ಪಳದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.
ಶನಿವಾರ ಕುವೆಂಪು ಕನ್ನಡ ಭವನದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ 4ನೇ ದಾವಣಗೆರೆ ಸಾಂಸ್ಕೃತಿಕ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ದೇಶದ ಜನರ ಸ್ಥಿತಿ ಸುಧಾರಣೆಗೆ ಆ ದೇಶದರಾಜಕಾರಣಿಗಳು ಮಾತ್ರವಲ್ಲ ಅಲ್ಲಿನ ಜನರೂ ಸಹ ಕಾರಣರಾಗುತ್ತಾರೆ.
ಅದನ್ನೇ ನಾಗರಿಕ ಕರ್ತವ್ಯ ಎಂಬುದಾಗಿ ಕರೆಯಲಾಗುತ್ತದೆ. ಈ ಜವಾಬ್ದಾರಿಯನ್ನು ನಾವು ಚಾಚೂ ತಪ್ಪದೇ ಪಾಲಿಸಬೇಕು ಎಂದರು.ಕಲೆ, ಸಂಸ್ಕೃತಿ, ಸಾಹಿತ್ಯ ಒಂದು ನಾಡಿನ ಜನರ ಭಾವನೆಗಳ ಜೀವನಾಡಿ. ಹಿಂದಿನ ಕಾಲದಲ್ಲಿ ರಾಜರು ಇವುಗಳ ಬೆಳವಣಿಗೆ ಪ್ರೋತ್ಸಾಹ ನೀಡಿದರು.
ಇಂದು ಆಳುವ ಸರ್ಕಾರದ ಬದಲು ಜನರೇ ಇವುಗಳನ್ನ ಪೋಷಣೆ ಮಾಡುವಂತಾಗಬೇಕು. ಆಗಲೇ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿದು, ಬೆಳೆದುಕೊಂಡು ಹೋಗಲು ಸಾಧ್ಯ ಎಂದು ಹೇಳಿದರು. ಇಂದಿನ ಓದು ಕೇವಲ ಪದವಿ ಗಳಿಸಲು ಎಂಬಂತಾಗಿದೆ. ಇದಕ್ಕೆ ಕಾರಣ ಇಂದಿನ ಸೆಮಿಸ್ಟರ್ ಪದ್ಧತಿ.
ಹಿಂದಿನ ಕಾಲದಲ್ಲಿ ಈ ಸೆಮಿಸ್ಟರ್ ಪದ್ಧತಿ ಇರಲಿಲ್ಲ. ವಿಸ್ತೃತ ಓದು ಇರುತ್ತಿತ್ತು. ಆದರೆ, ಇಂದು ಸಣ್ಣ ಮಕ್ಕಳಿಗೂ ಸೆಮಿಸ್ಟರ್ ಪದ್ಧತಿ ಜಾರಿ ಮಾಡಲಾಗಿದೆ. ಇದರಿಂದಾಗಿ ಮಕ್ಕಳು ಇಂದು ಸದಾ ಹೋಂ ವರ್ಕ್ ಒತ್ತಡದಲ್ಲಿಯೇ ಇರಬೇಕಾದ ಸ್ಥಿತಿ ಇದೆ. ಇಂತಹ ಓದಿನಿಂದ ಮಕ್ಕಳ ಬಾಲ್ಯ ಕಳೆದು ಹೋಗುವುದು ಮಾತ್ರವಲ್ಲ, ವ್ಯಕ್ತಿತ್ವ ವಿಕಸನ ಸಹ ಕುಗ್ಗಿಹೋಗುತ್ತದೆ ಎಂದು ಅವರು ಹೇಳಿದರು.
ಸಿನಿಮಾ, ಧಾರವಾಹಿಗಳು ಇಂದು ಸಾಂಸ್ಕೃತಿಕ ಕಾರ್ಯಕ್ರಮಗಳಾಗಿವೆ. ಆದರೆ, ಈ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೆ, ಮನಸ್ಸು, ಸಮಾಜ ಒಡೆಯುವಕೆಲಸ ಮಾಡುತ್ತಿವೆ. ಕಟ್ಟುವ ಕೆಲಸ ಮಾಡುತ್ತಿಲ್ಲ. ಇನ್ನು ಟಿವಿಯಲ್ಲಿ ಬರುವ ಕಾರ್ಯಕ್ರಮಗಳು ಜನರನ್ನು ಮೂರ್ಖರನ್ನಾಗಿಸುತ್ತಿವೆ.
ಬೆಳ್ಳಂಬೆಳಿಗ್ಗೆ ಬರುವ ಜ್ಯೋತಿಷಿಗಳು ಮೂಢನಂಬಿಕೆ ಬಿತ್ತುತ್ತಿದ್ದಾರೆ. ನಾಗರಿಕರು ಪ್ರಜ್ಞಾವಂತರಾದರೆ ಇವನ್ನು ಸಾರಸಗಟಾಗಿ ತಿರಸ್ಕರಿಸಬೇಕು. ಒಳ್ಳೆಯ ವಿಷಯಗಳನ್ನು ಹುಡುಕಿಕೊಳ್ಳಬೇಕು ಎಂದು ಅವರು ಕರೆಕೊಟ್ಟರು.ಟಿವಿ, ಸಿನಿಮಾ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ.
ಜನರಲ್ಲಿ ಜಾಗೃತಿ ಮೂಡಿಸಿ, ಸರಿ ದಾರಿಗೆ ತರಬೇಕು. ದೇಶದಲ್ಲಿರುವ ಸ್ಥಿತಿ ಅರಿತು ಸಮಾಜದ ಸ್ವಾಸ್ಥÂ ಕಾಪಾಡಲು ಕೆಲಸ ಮಾಡಬೇಕು. ಇಂದುನಮ್ಮ ದೇಶದಲ್ಲಿ ಸಮರ್ಥ ವಿಪಕ್ಷ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಜನರನ್ನೇ ವಿಪಕ್ಷಗಳನ್ನಾಗಿ ರೂಪಿಸಬೇಕಿದೆ ಎಂದು ಅವರು ಹೇಳಿದರು.
ಗುಡಿ ಕಟ್ಟುವುದರಿಂದ ದೇಶ ಉದ್ಧಾರ ಆಗುವುದಿಲ್ಲ. ಈ ಹಿಂದೆ ಕಟ್ಟಿರುವ ಬೆಲೆ ಕಟ್ಟಲಾಗದ ಸ್ಮಾರಕಗಳನ್ನು ಉಳಿಸಿಕೊಳ್ಳಬೇಕಿದೆ. ಅವುಗಳು ನಮ್ಮ ಪೂರ್ವಜರಕುರುಹು, ಮುಂದಿನ ಪೀಳಿಗೆಯ ದಾರಿದೀಪ. ಇದನ್ನು ಅರ್ಥಮಾಡಿಕೊಂಡು ಹೊಸ ಗುಡಿ ಕಟ್ಟುವ ಬದಲು ಇರುವ ಸ್ಮಾರಕ ಉಳಿಸಿಕೊಳ್ಳಲು ನಾವು ಮುಂದಾಗಬೇಕು ಎಂದು ಅವರು ಹೇಳಿದರು.
ಪ್ರೊ. ಮಲ್ಲಿಕಾರ್ಜುನ ಹಲಸಂಗಿ, ಡಾ| ಎನ್. ವಸುಧೇಂದ್ರ, ಮಧು ತೊಗಲೇರಿ, ಜ್ಯೋತಿ ಕುಕ್ಕವಾಡ ವೇದಿಕೆಯಲ್ಲಿದ್ದರು. ಹೊಸ ಹಾದಿ ಹೊಸ ಪಯಣ, ಅಪರಾಧಿ ಯಾರು? ನಾಟಕ ಪ್ರದರ್ಶನಗೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.